ಲುಲು ಮಾಲ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಂತರ ಇಬ್ಬರ ಬಂಧನ

ಲಕ್ನೋ: ಶನಿವಾರ ಇಲ್ಲಿನ ಲುಲು ಮಾಲ್‌ಗೆ ನುಗ್ಗಿ ಹನುಮಾನ್ ಚಾಲೀಸಾ ಪಠಿಸಲು ಆರಂಭಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಪಿಂಗ್ ಮಾಲ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಗಲಾಟೆ ಸೃಷ್ಟಿಸಿದ್ದಕ್ಕಾಗಿ ಕನಿಷ್ಠ 15 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಬೆಳವಣಿಗೆಯನ್ನು ಖಚಿತಪಡಿಸಿದ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಗೋಪಾಲ್ ಕೃಷ್ಣ ಚೌಧರಿ, “ಇಬ್ಬರು ಮಾಲ್‌ಗೆ ಪ್ರವೇಶಿಸಿ, ನೆಲದ ಮೇಲೆ ಕುಳಿತು ಧಾರ್ಮಿಕ ಪ್ರಾರ್ಥನೆ ಮಾಡಲು ಪ್ರಾರಂಭಿಸಿದರು. ಮಾಲ್‌ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ ನಂತರ ಅವರನ್ನು ಬಂಧಿಸಲಾಯಿತು” ಎಂದು ಹೇಳಿದರು.
ಇಬ್ಬರನ್ನು ಬಂಧಿಸಿದ ಸ್ವಲ್ಪ ಸಮಯದ ನಂತರ, ಬಲಪಂಥೀಯ ಗುಂಪಿನ ಸದಸ್ಯರು ಮಾಲ್‌ಗೆ ಪ್ರವೇಶಿಸಲು ಪ್ರಯತ್ನಿಸಿದರು. ಅವರನ್ನೂ ಪೊಲೀಸರು ವಶಕ್ಕೆ ಪಡೆದು ಗಲಾಟೆ ಸೃಷ್ಟಿಸದಂತೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದರು.

ಮಾಲ್‌ನಲ್ಲಿ ಜನರ ಗುಂಪೊಂದು ನಮಾಜ್ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ವಿವಾದ ಭುಗಿಲೆದ್ದಿದೆ.
ಮಾಲ್ ಒಳಗೆ ಜನರು ನಮಾಜ್ ಮಾಡುವುದನ್ನು ಬಲಪಂಥೀಯ ಸಂಘಟನೆಯು ಆಕ್ಷೇಪಿಸಿತ್ತು ಮತ್ತು ಅಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಕೇಳಿತ್ತು, ನಂತರ ಅದನ್ನು ನಿರಾಕರಿಸಲಾಯಿತು. ಮಾಲ್‌ನ ಪ್ರತಿನಿಧಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ, ಅವರು ವೀಡಿಯೊದಲ್ಲಿ ಕಾಣುವವರು ತಮ್ಮ ಸಿಬ್ಬಂದಿಯಲ್ಲ ಎಂದು ಹೇಳಿದ್ದಾರೆ.
ಮಾಲ್ ಅಧಿಕಾರಿಗಳು ಶುಕ್ರವಾರ ನೋಟಿಸ್‌ಗಳನ್ನು ಹಾಕಿ “ಮಾಲ್‌ನಲ್ಲಿ ಯಾವುದೇ ಧಾರ್ಮಿಕ ಪ್ರಾರ್ಥನೆಗಳನ್ನು ಅನುಮತಿಸಲಾಗುವುದಿಲ್ಲ” ಎಂದು ಘೋಷಿಸಿದರು.
ಜುಲೈ 10 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಲ್ ಅನ್ನು ಉದ್ಘಾಟಿಸಿದರು. ಭಾರತೀಯ ಮೂಲದ ಬಿಲಿಯನೇರ್ ಯೂಸುಫ್ ಅಲಿ ಎಂ ಎ ನೇತೃತ್ವದ ಅಬುಧಾಬಿ ಮೂಲದ ಲುಲು ಗ್ರೂಪ್ ಈ ಮಾಲ್‌ ತೆರೆದಿದೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement