ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರದಲ್ಲಿ ಸ್ವಲ್ಪ ಇಳಿಕೆ ಮಾಡಿದ ಕೆಎಂಎಫ್

ಬೆಂಗಳೂರು: ನಿನ್ನೆ ಏರಿಕೆ ಮಾಡಿದ್ದ ಮೊಸರು, ಲಸ್ಸಿ ಹಾಗೂ ಮಜ್ಜಿಗೆ ದರಗಳನ್ನು ಕೆಎಂಎಫ್‌ ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿ ನೂತನ ದರ ಜಾರಿ ಮಾಡಿದೆ.
5% ಜಿಎಸ್ಟಿ ಸೇರಿಸಿ ಕೆಎಂಎಫ್ ನೂತನ ದರ ಪಟ್ಟಿ ಬಿಡುಗಡೆ ಮಾಡಿದೆ. ದರದಲ್ಲಿ ಸ್ವಲ್ಪ ಕಡಿಮೆ ಮಾಡಲಾಗಿದೆ.
ನೂತ ದರ ಪಟ್ಟಿಯಂತೆ ಮೊಸರು 200 ಎಂಎಲ್ ನಿನ್ನೆ- 10 ರೂಪಾಯಿ ಇತ್ತು. ಅದನ್ನು 12 ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈಗ ನಾಳೆಯಿಂದ 10.50 ಇಳಿಸಲಾಗಿದೆ. ಅಂದರೆ ಮೂಲ ದರಕ್ಕಿಂತ 50 ಪೈಸೆ ಮಾತ್ರ ಹೆಚ್ಚಳ ಮಾಡಲಾಗಿದೆ.
500 ಎಂಎಲ್ ಮೊಸರಿಗೆ 22 ರೂ.ಗಳಿತ್ತು. ಅದನ್ನು 24 ರೂ.ಗಳಿಗೆ ಹೆಚ್ಚಿಸಲಾಗಿತ್ತು. ನಾಳೆಯಿಂದ 23 ರೂ. ನಿಗದಿ ಮಾಡಲಾಗಿದೆ. ಅಂದರೆ (ಒಂದು ರುಪಾಯಿ ಮಾತ್ರ ಏರಿಕೆ ಮಾಡಲಾಗಿದೆ. ಒಂದು ಲೀಟರ್ ಮೊಸರು ಮೊದಲಿನ ದರ 43 ರೂ. ಗಳಿತ್ತು. ಅದನ್ನು 46 ರೂ.ಗಳಿಗೆ ಹೆಚ್ಚಿಸಲಾಗಿತ್ತು. ನಾಳೆಯಿಂದ 45 ರೂ.ಗಳಾಗಿದೆ (ಎರಡು ರುಪಾಯಿ ಏರಿಕೆ)
ಮಜ್ಜಿಗೆ 200 ಎಂಎಲ್ 7 ರೂ.ಗಳಿತ್ತು. ಅದನ್ನು 8 ರೂ.ಗಳಿಗೆ ಹೆಚ್ಚಿಸಲಾಗಿತ್ತು. ನಾಳೆಯಿಂದ 7.50 ರೂ.ಗಳಿಗೆ ನಿಗದಿ ಮಾಡಲಾಗಿದೆ. (50 ಪೈಸೆ ಏರಿಕೆ)
ಲಸ್ಸಿ 200 ಎಂಎಲ್ 10 ರೂ.ಗಳಿತ್ತು. ಅದನ್ನು 11 ರೂ.ಗಳಿಗೆ ಹೆಚ್ಚಿಸಲಾಗಿತ್ತು. ನಾಳೆಯಿಂದ – 10.50 ರೂ.ಗಳಿಗೆ ನಿಗದಿ ಮಾಡಲಾಗಿದೆ. (50 ಪೈಸೆ ಏರಿಕೆ) ಎಂದು ಕೆಎಂಎಫ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement