ನೂಪುರ್‌ ಶರ್ಮಾಗೆ ರಿಲೀಫ್‌ ನೀಡಿದ ಸುಪ್ರೀಂಕೋರ್ಟ್‌: ಮುಂದಿನ ವಿಚಾರಣೆ ವರೆಗೆ ಬಂಧಿಸದಂತೆ ಮಧ್ಯಂತರ ರಕ್ಷಣೆ

ನವದೆಹಲಿ:ನವದೆಹಲಿ: ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಅವರಿಗೆ ಸುಪ್ರೀಂಕೋರ್ಟ್‌ ರಿಲೀಫ್‌ ನೀಡಿದೆ. ಮುಂದಿನ ವಿಚಾರಣೆಯ ದಿನಾಂಕದ ವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ರಕ್ಷಣೆ ನೀಡಿದೆ..
ಬಂಧನದಿಂದ ರಕ್ಷಣೆ ನೀಡುವಂತೆ ಹಾಗೂ ಪ್ರವಾದಿಯ ಕುರಿತಾದ ತನ್ನ ಹೇಳಿಕೆಗಳ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಂದೇ ಕಡೆ ತರುವಂತೆ ಕೋರಿ ನೂಪುರ್‌ ಶರ್ಮಾ ಸುಪ್ರೀಂ ಕೋರ್ಟ್‌ಗೆ ಹೊಸಾದಗಿ ಮತ್ತೆ ಅರ್ಜಿ ಸಲ್ಲಿಸಿದ್ದರು..
ಅವರ ಮನವಿಯ ಮೇರೆಗೆ ದೆಹಲಿ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತು ಮತ್ತು ಮಧ್ಯಂತರ ಕ್ರಮವಾಗಿ, ನ್ಯಾಯಾಲಯವು ಆಗಸ್ಟ್ 10 ರಂದು ಹೆಚ್ಚಿನ ವಿಚಾರಣೆ ಈ ವಿಷಯವನ್ನು ಕೈಗೆತ್ತಿಕೊಳ್ಳುವ ವರೆಗೆ ಬಂಧಿಸದಂತೆ ಹಾಗೂ ಅಲ್ಲಿಯವರೆಗೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸುವಂತಿಲ್ಲ.ಎಂದು ಸೂಚಿಸಿತು
ಈ ನ್ಯಾಯಾಲಯವು ಅನುಮತಿಸಿದ ಪರ್ಯಾಯ ಪರಿಹಾರವನ್ನು ಅರ್ಜಿದಾರರಾದ ಹೇಗೆ ಪಡೆದುಕೊಳ್ಳುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈ ನ್ಯಾಯಾಲಯದ ಕಾಳಜಿಯಾಗಿದೆ. ಅಂತಹ ವಿಧಾನಗಳನ್ನು ಅನ್ವೇಷಿಸಲು, ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ನೀಡಿ” ಎಂದು ನೂಪುರ್ ಶರ್ಮಾ ಅರ್ಜಿ ವಿಚಾರಣೆ ಮಾಡುವಾಗ ಕೋರ್ಟ್‌ ಹೇಳಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾದ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂಗಳನ್ನು ಪಕ್ಷಗಳನ್ನಾಗಿ ಮಾಡಿದೆ.
ಬಿಜೆಪಿಯ ಮಾಜಿ ವಕ್ತಾರರಾಗಿದ್ದ ನೂಪುರ ಶರ್ಮಾ ಅವರು ಜುಲೈ 1 ರಂದು ತಮ್ಮ ವಿರುದ್ಧ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ರಜಾಕಾಲದ ಪೀಠ ಮಾಡಿದ ಪ್ರತಿಕೂಲ ಟೀಕೆಗಳ ನಂತರ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದರು.
ಜುಲೈ 1 ರಂದು, ಸುಪ್ರೀಂಕೋರ್ಟ್‌ ನೂಪುರ್‌ ಶರ್ಮಾಗೆ ಪರಿಹಾರ ನೀಡಲು ನಿರಾಕರಿಸಿದ್ದು ಮಾತ್ರವಲ್ಲದೆ ಅವರ ವಿವಾದಾತ್ಮಕ ಹೇಳಿಕೆಗಳಿಗಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಇದಕ್ಕೂ ಮೊದಲು, ನೂಪುರ್ ಶರ್ಮಾ ಅವರ ಹೇಳಿಕೆಗಳು ಭಾರೀ ವಿವಾದಕ್ಕೆ ಕಾರಣವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳು ದಾಖಲಾಗಿದ್ದವು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement