ಬೈಂದೂರು: ಚಾಕೊಲೇಟ್ ತಿನ್ನುವಾಗ ಪ್ಲಾಸ್ಟಿಕ್ ಕವರ್ ಸಮೇತ ನುಂಗಿದ 1ನೇ ತರಗತಿ ವಿದ್ಯಾರ್ಥಿನಿ ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ಸಂಭವಿಸಿದೆ.
ಮೃತ ಬಾಲಕಿಯನ್ನು ಬೈಂದೂರು ತಾಲೂಕು ಬವಳಾಡಿ ಮೂಲದ ಸಮನ್ವಿ (6) ಎಂದು ಗುರುತಿಸಲಾಗಿದೆ. ಬಾಲಕಿ ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್‌ನ 1ನೇ ತರಗತಿ ವಿದ್ಯಾರ್ಥಿನಿ.
ಬುಧವಾರ ಬೆಳಗ್ಗೆ ಶಾಲಾ ಬಸ್ಗೆ ಕಾಯುತ್ತಿರುವ ವೇಳೆ ಕೈಯಲ್ಲಿದ್ದ ಚಾಕೊಲೇಟ್ ತಿನ್ನುವಾಗ ಅದನ್ನು ಪ್ಲಾಸ್ಟಿಕ್ ಕವರ್ ಸಮೇತ ನುಂಗಿದ್ದಾಳೆ. ಚಾಕೊಲೇಟ್ ಗಂಟಲಲ್ಲಿ ಸಿಲುಕು ಉಸಿರಾಟಕ್ಕೆ ಸಮಸ್ಯೆ ಉಂಟಾಗಿ ಶಾಲಾ ವಾಹನದ ಬಳಿಯೇ ಕುಸಿದುಬಿದ್ದಿದ್ದಾಳೆ. ತಕ್ಷಣವೇ ಪೋಷಕರು, ಶಾಲಾ ವಾಹನ ಚಾಲಕ ಹಾಗೂ ಸ್ಥಳೀಯರು ಬೈಂದದೂರಿನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸಮನ್ವಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಶವದ ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿದುಬರಲಿದೆ. ಸದ್ಯ ಬಾಲಕಿಯ ಮೃತದೇಹವನ್ನು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ