100 ಕೋಟಿ ರೂ. ಕೊಟ್ರೆ ಮಹಾರಾಷ್ಟ್ರ ಶಾಸಕನಿಗೆ ಕ್ಯಾಬಿನೆಟ್ ಸ್ಥಾನದ ಆಫರ್ ನೀಡಿದ ಗ್ಯಾಂಗ್‌: ದೂರು ದಾಖಲಿಸಿದ ಶಾಸಕ; ನಾಲ್ವರ ಬಂಧನ

ಮುಂಬೈ: ಶಾಸಕರೊಬ್ಬರಿಂದ 100 ಕೋಟಿ ರೂಪಾಯಿ ಕೊಟ್ಟರೆ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸುವುದಾಗಿ ಹೇಳಿ ವಂಚಿಸಲು ಯತ್ನಿಸಿದ್ದ ನಾಲ್ವರ ಗ್ಯಾಂಗ್‌ ಅನ್ನು ಸುಲಿಗೆ ನಿಗ್ರಹ ದಳ ಬಂಧಿಸಿದೆ. ಹೊಸದಾಗಿ ರಚನೆಯಾದ ಮಹಾರಾಷ್ಟ್ರ ಸರ್ಕಾರದಲ್ಲಿ ಖಾತೆಗಳ ಮರುಹಂಚಿಕೆ ಊಹಾಪೋಹಗಳ ಮಧ್ಯೆ ಈ ಪ್ರಕರಣ ಬೆಳಕಿಗೆ ಬಂದಿದೆ.
ದೌಂಡ್‌ನ ಬಿಜೆಪಿ ಶಾಸಕ ರಾಹುಲ್ ಕುಲ್ ಅವರು ತಮ್ಮ ಆಪ್ತ ಸಹಾಯಕನ ಮೂಲಕ ಜುಲೈ 16 ರಂದು ತನ್ನನ್ನು ರಿಯಾಜ್ ಶೇಖ್ ಎಂದು ಗುರುತಿಸುವ ವ್ಯಕ್ತಿಯಿಂದ ಕರೆ ಬಂದಿದೆ ಎಂದು ಪೊಲೀಸ್ ದೂರು ನೀಡಿದ ನಂತರ ನಾಲ್ವರನ್ನು ಬಂಧಿಸಲಾಗಿದೆ. ಪ್ರಸ್ತಾಪದ ಡೀಲ್‌ ಕುರಿತು ಚರ್ಚಿಸಲು ರಾಹುಲ್‌ ಕುಲ್ ಅವರನ್ನು ಭೇಟಿಯಾಗಲು ಬಯಸುವುದಾಗಿ ರಿಯಾಜ್ ಹೇಳಿದ್ದರು.

ಇದರ ಬೆನ್ನಲ್ಲೇ ಮುಂಬೈನ ಹೋಟೆಲ್‌ವೊಂದರಲ್ಲಿ ಕುಲ್ ಅವರನ್ನು ಭೇಟಿಯಾದರು, ಅಲ್ಲಿ ಹಿರಿಯ ರಾಜಕಾರಣಿಯೊಬ್ಬರು ತಮ್ಮ ಕೆಲಸವನ್ನು ಮಾಡುತ್ತಾರೆ, ಆದರೆ ಅದಕ್ಕಾಗಿ ಅವರು 100 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದರು. ನಂತರ ಶಾಸಕ ಕುಲ್ ಈ ಬಗ್ಗೆ ಆಸಕ್ತಿ ತೋರಿಸಲು ಆರೋಪಿಗಳೊಂದಿಗೆ ಮಾತುಕತೆ ನಡೆಸುವಂತೆ ನಟಿಸಿದರು. ಮತ್ತು 100 ಕೋಟಿಗಳ ಬದಲಿಗೆ 90 ಕೋಟಿ ರೂ.ಗಳಿಗೆ ಅಂತಿಮಗೊಳಿಸಲಾಯಿತು. ಆದರೆ ರಿಯಾಜ್ ಮುಂಗಡವಾಗಿ ಶೇ.20ರಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಶಾಸಕರೂ ಕೂಡ ಇಷ್ಟೇ ಹಣ ಕೊಡಲು ಒಪ್ಪಿ ನಂತರ ಬರುವಂತೆ ಹೇಳಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಏತನ್ಮಧ್ಯೆ, ರಾಹುಲ್‌ ಕುಲ್ ಏನಾಗುತ್ತಿದೆ ಎಂಬುದರ ಕುರಿತು ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿದರು ಮತ್ತು ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದರು ಮತ್ತು ಅವರು ಪ್ರಕರಣವನ್ನು ನಗರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದರು. ಬಳಿಕ ನಗರ ಅಪರಾಧ ವಿಭಾಗದ ಪೊಲೀಸರು ಬಲೆ ಬೀಸಿದ್ದು, ಆರೋಪಿಗಳು ಹಾಗೂ ಆತನ ಸಹಚರರು 18 ಕೋಟಿ ಮುಂಗಡವಾಗಿ ಒಯ್ಯಲು ಶಾಸಕರನ್ನು ಭೇಟಿ ಮಾಡಲು ಹೋಟೆಲ್‌ಗೆ ತೆರಳಿದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಂತರ ಅವರನ್ನು ವಿಚಾರಣೆಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ಕರೆತರಲಾಯಿತು.
ರಿಯಾಜ್ ಶೇಖ್, ಯೋಗೇಶ್ ಕುಲಕರ್ಣಿ, ಸಾಗರ್ ಸಾಂಘ್ವಿ ಮತ್ತು ಜಾಫರ್ ಉಸ್ಮಾನಿ ಬಂಧಿತ ಆರೋಪಿಗಳು. ನಾಲ್ವರನ್ನು ಜುಲೈ 26ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಯಿಂದ ಮೂರು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ದೆಹಲಿಯಲ್ಲಿ ಯಾರೊಂದಿಗಾದರೂ ಸಂಪರ್ಕದಲ್ಲಿರುವ ಉಸ್ಮಾನಿ ಗ್ಯಾಂಗ್‌ನ ಕಿಂಗ್‌ಪಿನ್ ಎಂದು ತೋರುತ್ತದೆ. ಪ್ರಕರಣದಲ್ಲಿ ದೆಹಲಿ ಮೂಲದ ವ್ಯಕ್ತಿಯ ಪಾತ್ರವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement