ಅವಿವಾಹಿತಳಿಗೂ ಗರ್ಭ ತೆಗೆಸಲು ಅವಕಾಶ : ಸುಪ್ರೀಂಕೋರ್ಟ್‌ ತೀರ್ಪು

ನವದೆಹಲಿ: ಮಹಿಳೆ ಅವಿವಾಹಿತಳೆಂಬ ಕಾರಣಕ್ಕೆ ವೈದ್ಯಕೀಯ ಗರ್ಭಪಾತ ಕಾಯಿದೆಯ ಉಪಯುಕ್ತ ನಿಬಂಧನೆಗಳನ್ನು ಆಕೆಗೆ ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. ಆ ಮೂಲಕ ಅದು ಸಮ್ಮತಿಯ ಲೈಂಗಿಕತೆಯಿಂದ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರಿಗೆ 24 ವಾರ ಮೀರಿದ ಗರ್ಭ ಅಂತ್ಯಗೊಳಿಸಲು ಅವಕಾಶ ನೀಡಿದೆ.
ವೈದ್ಯಕೀಯ ಗರ್ಭಪಾತ ಕಾಯಿದೆ (ಎಂಟಿಪಿ ಕಾಯಿದೆ) ಮತ್ತು ಸಮ್ಮತಿ ಲೈಂಗಿಕ ಸಂಬಂಧಗಳ ಗರ್ಭಧಾರಣೆ ಅಂತ್ಯಗೊಳಿಸುವ ಎಂಟಿಪಿ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಸಮ್ಮತಿಯ ಲೈಂಗಿಕತೆಯಿಂದ ಗರ್ಭಿಣಿಯರಾದ ಅವಿವಾಹಿತೆಯರು 20 ವಾರ ಮೀರಿದ ಗರ್ಭ ಅಂತ್ಯಗೊಳಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜುಲೈ 15ರಂದು ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ರದ್ದುಗೊಳಿಸಿತು.

ವೈದ್ಯಕೀಯ ಗರ್ಭಪಾತ ನಿಯಮಾವಳಿ 2003ರ ಯಾವುದೇ ಷರತ್ತುಗಳನ್ನು ಅರ್ಜಿ ಸ್ಪಷ್ಟವಾಗಿ ಒಳಗೊಂಡಿಲ್ಲ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಗಳಿಗೆ ಸೆಕ್ಷನ್ 3(2)(ಬಿ) ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್‌ ತಿಳಿಸಿತ್ತು. ಆದರೆ ಕಾನೂನಿಗೆ ವಿಶಾಲ ವ್ಯಾಖ್ಯಾನ ನೀಡಬೇಕಿದ್ದು ಸಂಸತ್ತಿನ ಉದ್ದೇಶವನ್ನು ಪರಿಶೀಲಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಸಂಸದೀಯ ಉದ್ದೇಶ ಕಾಯಿದೆಯ ಪ್ರಯೋಜನಕಾರಿ ನಿಬಂಧನೆಯನ್ನು ಕೇವಲ ವೈವಾಹಿಕ ಸಂಬಂಧಕ್ಕೆ ಸೀಮಿತಗೊಳಿಸುವುದಾಗಿಲ್ಲ. ವಾಸ್ತವವಾಗಿ ಯಾವುದೇ ಮಹಿಳೆ ಅಥವಾ ಅವಳ ಸಂಗಾತಿ ಎನ್ನುವುದು ಸಂವಿಧಾನದ 21ನೇ ವಿಧಿಗೆ ಪೂರಕವಾಗಿ ಮಹಿಳೆಯ ವಿಶಾಲ ದೈಹಿಕ ಸ್ವಾಯತ್ತತೆಯನ್ನು ಸಂಸತ್ತು ವಿಶಾಲಾರ್ಥದಲ್ಲಿ ಗಮನದಲ್ಲಿಟ್ಟುಕೊಂಡಿದೆ ಎಂದು ಅದು ಸೂಚಿಸುತ್ತದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

ಆದ್ದರಿಂದ ಅರ್ಜಿದಾರಳ ಅನಪೇಕ್ಷಿತ ಗರ್ಭಧಾರಣೆಗೆ ಅವಕಾಶ ನೀಡುವುದು ಸಂಸದೀಯ ಉದ್ದೇಶಕ್ಕೆ ವಿರುದ್ಧವಾಗಿದ್ದು ಆಕೆ ಅವಿವಾಹಿತಳೆಂಬ ಏಕೈಕ ಆಧಾರದ ಮೇಲೆ ಆಕೆಗೆ ಗರ್ಭಪಾತ ನಿರಾಕರಿಸಲಾಗದು ಎಂದು ಅದು ಹೇಳಿದೆ.
ದೆಹಲಿಯಲ್ಲಿರುವ ಮಣಿಪುರ ಮೂಲದ ನಿವಾಸಿ ಅರ್ಜಿದಾರಳು ತಾನು ಗರ್ಭವತಿ ಎಂಬುದನ್ನು ತಿಳಿದ ನಂತರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಮ್ಮತಿಯ ಲೈಂಗಿಕ ಸಂಬಂಧದಿಂದ ಗರ್ಭಿಣಿಯಾಗುವ ಅವಿವಾಹಿತ ಮಹಿಳೆಗೆ ವೈದ್ಯಕೀಯ ಗರ್ಭಪಾತ ನಿಯಮಗಳ ಪ್ರಕಾರ 20 ವಾರ ಮೀರಿದ ಗರ್ಭವನ್ನು ಅಂತ್ಯಗೊಳಿಸಲು ಅನುಮತಿ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಸಂದರ್ಭದಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.
ಎಂಟಿಪಿ ಕಾಯಿದೆ ಮತ್ತು ನಿಯಮಗಳನ್ನು ಅರ್ಥೈಸುವಲ್ಲಿ ಹೈಕೋರ್ಟ್‌ನದ್ದು ಅನಗತ್ಯ ನಿರ್ಬಂಧಿತ ದೃಷ್ಟಿಕೋನ ಎಂದು ಸುಪ್ರೀಂ ಕೋರ್ಟ್ ಅರ್ಜಿಯನ್ನು ಪುರಸ್ಕರಿಸುವ ವೇಳೆ ತಿಳಿಸಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement