ಈ ಪುಟ್ಟ ಹಕ್ಕಿಯ ಬಣ್ಣ ಕ್ಷಣ ಕ್ಷಣಕ್ಕೂ ಬದಲಾಗುತ್ತದೆ…ಇದರಷ್ಟು ಬೆರಗುಗೊಳಿಸುವ ಹಕ್ಕಿ ನೋಡಿರಲಿಕ್ಕಿಲ್ಲ | ಬಣ್ಣ ಬದಲಾಗುವುದನ್ನು ವೀಕ್ಷಿಸಿ

ಪ್ರಕೃತಿಯು ವಿಪುಲವಾದ ಸಂಗತಿಗಳು ಮತ್ತು ವಿದ್ಯಮಾನಗಳು ನಮ್ಮನ್ನು ಸಂಪೂರ್ಣವಾಗಿ ಮಂತ್ರಮುಗ್ಧರನ್ನಾಗಿಸುತ್ತದೆ ಮತ್ತು ವಿಸ್ಮಯಗೊಳಿಸುತ್ತದೆ. ಈಗ ಇಂಥದ್ದೇ ವಿಸ್ಮಯ ಪ್ರದರ್ಶಿಸುವ ವೀಡಿಯೊವೊಂದು ವೈರಲ್‌ ಆಗಿದೆ.
ನಮಗೆ ಅಚ್ಚರಿ ಮೂಡಿಸುವ ಹಮ್ಮಿಂಗ್‌ಬರ್ಡ್‌ನ ಕ್ಲಿಪ್ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಇದರ ವಿಶೇಷತೆಯೆಂದರೆ, ಪಕ್ಷಿಯು ತನ್ನ ತಲೆಯನ್ನು ಅಕ್ಕಪಕ್ಕಕ್ಕೆ ತಿರುಗಿಸಿದಾಗ ಹಕ್ಕಿಯ ಬಣ್ಣ ಬೇರೆಬೇರೆ ಬಣ್ಣಕ್ಕೆ ಬದಲಾಗುತ್ತದೆ. ಈ ಹಕ್ಕಿಯ ವೈರಲ್ ವೀಡಿಯೊ ಖಂಡಿತವಾಗಿಯೂ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ವಂಡರ್ ಆಫ್ ಸೈನ್ಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಕಿರು ಕ್ಲಿಪ್‌ನಲ್ಲಿ, ಅನ್ನಾಸ್ ಹಮ್ಮಿಂಗ್ ಬರ್ಡ್ ವ್ಯಕ್ತಿಯ ಹೆಬ್ಬೆರಳಿನ ಮೇಲೆ ಕುಳಿತಿರುವುದನ್ನು ಕಾಣಬಹುದು. ಸುಂದರವಾದ ಪಚ್ಚೆ ಹಸಿರು ಬಣ್ಣದಲ್ಲಿದ್ದ ಚಿಕ್ಕ ಹಕ್ಕಿಯು ತನ್ನ ತಲೆಯನ್ನು ಅಕ್ಕಪಕ್ಕಕ್ಕೆ ತಿರುಗಿಸುವಾಗ ವಿಭಿನ್ನ ಬಣ್ಣಗಳನ್ನು ಪ್ರತಿಬಿಂಬಿಸುತ್ತದೆ.

https://twitter.com/wonderofscience/status/1550110848277917697?ref_src=twsrc%5Etfw%7Ctwcamp%5Etweetembed%7Ctwterm%5E1550110848277917697%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwe-bet-you-have-not-seen-anything-as-stunning-as-the-anna-s-hummingbird-viral-video-is-proof-1978820-2022-07-22

ಅದರ ತಲೆಯ ಒಂದು ಭಾಗವು ಕಪ್ಪಾಗಿದ್ದರೆ, ಬೆಳಕಿನ ಚದುರುವಿಕೆಯಿಂದಾಗಿ ಅದು ಒಂದು ನಿರ್ದಿಷ್ಟ ಕೋನದಲ್ಲಿ ತೀವ್ರವಾದ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಬಣ್ಣಕ್ಕೆ ತಿರುಗುತ್ತದೆ.
ಅನ್ನಾಸ್ ಹಮ್ಮಿಂಗ್ ಬರ್ಡ್‌ನ ಬೆರಗುಗೊಳಿಸುವ ಬಣ್ಣಗಳು ವರ್ಣವೈವಿಧ್ಯವಾಗಿದ್ದು, ಅವುಗಳ ಗರಿಗಳೊಳಗಿನ ನ್ಯಾನೊಸ್ಕೇಲ್ ರಚನೆಗಳಿಂದ ಬೆಳಕಿನ ಚದುರುವಿಕೆಯಿಂದ ಹೀಗೆ ಉಂಟಾಗುತ್ತದೆ” ಎಂದು ಪೋಸ್ಟ್‌ನ ಶೀರ್ಷಿಕೆ ಹೇಳುತ್ತದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement