ರಾಜ್ಯಪಾಲರಾಗಿದ್ದಾಗ 2018ರಲ್ಲಿ ಗ್ರಾಮಸ್ಥರೊಂದಿಗಿನ ದ್ರೌಪದಿ ಮುರ್ಮು ಬುಡಕಟ್ಟು ನೃತ್ಯ ಈಗ ವೈರಲ್‌ | ವೀಕ್ಷಿಸಿ

ನವದೆಹಲಿ: ಒಡಿಶಾದಲ್ಲಿ ಕೌನ್ಸಿಲರ್ ಆಗಿ ರಾಜಕೀಯ ಜೀವನ ಆರಂಭಿಸಿ ಈಗ ಅಧ್ಯಕ್ಷರಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷೆ ಮತ್ತು ರಭಾರತದ ರಾಷ್ಟ್ರಪತಿಯಾದ ಎರಡನೇ ಮಹಿಳೆಯಾಗಿದ್ದಾರೆ. ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾದ ಯಶವಂತ್ ಸಿನ್ಹಾ ವಿರುದ್ಧ ಸುಲಭ ಜಯ ಗಳಿಸಿದರು.
ಗುರುವಾರ ಮುರ್ಮು ಅವರು ಭರ್ಜರಿ ಗೆಲುವನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆಯೇ ರಾಜ್ಯಗಳಾದ್ಯಂತ ಬೆಂಬಲಿಗರು ಮತ್ತು ಒಡಿಶಾ ಮತ್ತು ಇತರ ರಾಜ್ಯಗಳ ಬುಡಕಟ್ಟು ಬೆಲ್ಟ್‌ಗಳ ಅನೇಕ ನಿವಾಸಿಗಳು ಸಂಭ್ರಮಾಚರಣೆಯಲ್ಲಿ ನೃತ್ಯ ಪ್ರದರ್ಶನಗಳನ್ನು ಮಾಡಿದರು.
ಅವರು ರಾಜ್ಯಪಾಲರಾಗಿದ್ದಾಗ ಸಾಂಪ್ರದಾಯಿಕ ನೃತ್ಯ ಮಾಡಿದ ಹಳೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಜನರನ್ನು ಭೇಟಿಯಾದರು ಮತ್ತು ಮಾತನಾಡಿದರು ಹಾಗೂ ಅವರೊಂದಿಗೆ ಸಾಂಪ್ರದಾಯಿಕ ನೃತ್ಯವನ್ನೂ ಮಾಡಿದರು.

2018 ರ ವೀಡಿಯೊದಲ್ಲಿ ಅವರು ಜಾರ್ಖಂಡ್ ರಾಜ್ಯಪಾಲರಾಗಿದ್ದಾಗ,ಮಹಿಳೆಯರ ಗುಂಪಿನೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡುತ್ತಿರುವುದು ಮತ್ತು ಕೆಲವು ಪುರುಷರು ಡ್ರಮ್ ಬಾರಿಸುವುದನ್ನು ತೋರಿಸುತ್ತದೆ.
ಒಡಿಶಾದ ಅವರ ಹಳ್ಳಿಯ ಜನರು ಜಾರ್ಖಂಡ್‌ನ ರಾಜಭವನದಲ್ಲಿ ಅವರನ್ನು ಭೇಟಿಯಾಗಲು ಹೋದ ಸಮಯದ ವೀಡಿಯೊ ಇದಾಗಿದೆ. ಅವರ ತವರು ಜಿಲ್ಲೆ ಮಯೂರ್‌ಭಂಜ್‌ನ ಜನರು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವುದು ಹೀಗೆ. ಹಳ್ಳಿಗರಿಗೆ ಅವರ “ದೀದಿ” ಅವರು ನಿರ್ವಹಿಸಿದ ಮತ್ತು ನಿರ್ವಹಿಸಲಿರುವ ಉನ್ನತ ಹುದ್ದೆಗಳ ಹೊರತಾಗಿಯೂ ಯಾವಾಗಲೂ ಅವರಲ್ಲಿ ಒಬ್ಬರಾಗಿದ್ದರು,.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

64ನೇ ವಯಸ್ಸಿನಲ್ಲಿ, ದ್ರೌಪದಿ ಮುರ್ಮು ಅವರು ಕಿರಿಯ ವಯಸ್ಸಿನ ಮತ್ತು ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
2009-2015 ರ ನಡುವಿನ ಕೇವಲ ಆರು ವರ್ಷಗಳಲ್ಲಿ ತನ್ನ ಪತಿ, ಇಬ್ಬರು ಪುತ್ರರು, ತಾಯಿ ಮತ್ತು ಸಹೋದರನನ್ನು ಕಳೆದುಕೊಂಡ ನಂತರ ಅವರು ಆಳವಾದ ಆಧ್ಯಾತ್ಮಿಕ ಮತ್ತು ಬ್ರಹ್ಮ ಕುಮಾರಿಯರ ಧ್ಯಾನ ತಂತ್ರಗಳ ತೀವ್ರ ಅಭ್ಯಾಸಿ ಎಂದು ನಂಬಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement