ಕೊಡಗಿನಲ್ಲಿ ಭಾರೀ ಶಬ್ದದೊಂದಿಗೆ ಮತ್ತೆ ಭೂಕುಸಿತ :18 ಕುಟುಂಬಗಳ ಸ್ಥಳಾಂತರ

ಕೊಡಗು: ಭಾರೀ ಶಬ್ದದೊಂದಿಗೆ ಕೊಡಗಿನಲ್ಲಿ ಮತ್ತೆ ಭೂ ಕುಸಿತ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಬೆಟ್ಟದ ತಪ್ಪಲಿನ 18 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಮದೆನಾಡು ಸುತ್ತಮುತ್ತ ಇಂದು, ಶನಿವಾರ ಬೆಳಿಗ್ಗೆ ಕಂಪನದ ಅನುಭವ ಉಂಟಾಗಿದೆ. ಇಂದು (ಜುಲೈ 23) ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ ಸೀಮೆಹುಲ್ಲುಕಜೆ ಬೆಟ್ಟದಲ್ಲಿ ಭೂಕುಸಿತ ಆಗಿದ್ದು, ಭೂಮಿಯೊಳಗೆ ಭಾರಿ ಶಬ್ದದೊಂದಿಗೆ ಕೆಸರು ಕೊಚ್ಚಿ ಬಂದಿದೆ. ಕೆಸರು ಮಿಶ್ರಿತ ನೀರು ಕೊಚ್ಚಿಕೊಂಡು ಜೋಡುಪಾಲದವರೆಗೂ ಬಂದಿದೆ. ಬೆಟ್ಟದ ತಪ್ಪಲಿನ 18 ಕುಟುಂಬಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಮದೆನಾಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 275ರ ಬಳಿಯ ಮದೆನಾಡು, ಜೋಡುಪಾಲ, ಮೊಣ್ಣಗೇರಿ ಗ್ರಾಮಸ್ಥರಲ್ಲಿ ಈ ಕಂಪನ ಮತ್ತು ಭೂಕುಸಿತದಿಂದಾಗಿ ಆತಂಕ ಇನ್ನಷ್ಟು ಹೆಚ್ಚಾಗಿದೆ.

 

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ನಿಮ್ಮ ಕಾಮೆಂಟ್ ಬರೆಯಿರಿ

advertisement