ತಾಯಿ ಹೇಳಿದ ಸಂಸ್ಕೃತ ಶ್ಲೋಕ ಪೂರ್ಣಗೊಳಿಸುವ ಬೋರಲು ಬೀಳಲಿಕ್ಕೂ ಬಾರದ ಪುಟಾಣಿ ಶಿಶು : ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಇಂಟರ್ ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (social media) ವೈವಿಧ್ಯಮಯ ವೀಡಿಯೊಗಳು ನೋಡಲು ಸಿಗುತ್ತವೆ. ಆದರೆ ಇಂಥದೊಂದು ವಿಡಿಯೋವನ್ನು ಬಹುಶಃ ನೋಡುವುದು ಅಪರೂಪ. ಇನ್ನೂ ಬೋರಲು ಬೀಳಲು ಕೂಡ ಬಾರದ ಮಗುವೊಂದು ತನ್ನಮ್ಮನ ಜೊತೆ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಿರುವುದನ್ನು ಚಿತ್ರೀಕರಿಸಿರುವ ವೀಡಿಯೋ ಇದಾಗಿದೆ. ವೀಡಿಯೊ ನೋಡಿದವರು ಈ ಬೊಚ್ಚುಬಾಯಿ ಮಗುವಿನ ಜ್ಞಾಮಪಕ ಶಕ್ತಿಗೆ ಬೆರಗಾಗಿದ್ದಾರೆ.
ವೀಡಿಯೋದಲ್ಲಿ ಮಗುವಿನ ಅಮ್ಮ ಶ್ಲೋಕ ಹೇಳುತ್ತಿದ್ದಾರೆ ಮತ್ತು ಪ್ರತಿಯೊಂದು ಶ್ಲೋಕದ ಕೊನೆ ಪದ ಉಚ್ಛರಿಸದೆ ನಿಲ್ಲಿಸುತ್ತಾರೆ. ಅದನ್ನು ಕೆಲವೇ ತಿಂಗಳ ತೊದಲು ತೊದಲಾಗಿ ಮಾತನಾಡುವ ಈ ಮಗು ಹೇಳುತ್ತದೆ.
ಈ ಕ್ಯೂಟ್‌ ವೀಡಿಯೊವನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗನ್ಕರ್ ಅವರು ಟ್ವಿಟರಿನಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ಲೋಕದ ಕೊನೆಯ ಶಬ್ದವನ್ನು ಮಗು ಸ್ಪಷ್ಟವಾಗಿ ಉಚ್ಛರಿಸುವುದು ವಿಸ್ಮಯಕಾರಿ.
ಈ ಮುದ್ದಾದ ಮಗುವಿನ ತಾಯಿ ಶ್ಲೋಕದ ಒಂದೋಂದೇ ಸಾಲನ್ನು ಹೇಳುತ್ತಾ ಹೋಗುತ್ತಾರೆ ಮತ್ತು ಮಗು ಅದನ್ನು ಪೂರ್ತಿ ಮಾಡುತ್ತದೆ.

ಹಿಂದೂ ಸಂಪ್ರದಾಯಗಳಲ್ಲಿ ಮಕ್ಕಳು ಚಿಕ್ಕವರಾಗಿರುವಾಗಲೇ 16 ಶಾಸ್ತ್ರಗಳನ್ನು ಕಲಿತಿರಬೇಕೆಂಬ ನಂಬಿಕೆಯಿದ್ದು ಅವುಗಳಲ್ಲಿ ಒಂದು ಪುನ್ಸಾವನ್ ಸಂಸ್ಕಾರ ಆಗಿದೆ. ಮಗುವಿಗೆ ಮೂರು ತಿಂಗಳು ಆದ ಬಳಿಕ ತಂದೆತಾಯಿಗಳು ಅದಕ್ಕೆ ಕಲಿಸಲು ಆರಂಭಿಸುತ್ತಾರೆ. ಆರೋಗ್ಯವಂತ ಮಗುವನ್ನು ಪಡೆಯಲು ಗರ್ಭಿಣಿ ಮಹಿಳೆ ಪುನ್ಸವನ ಸಂಸ್ಕಾರ ಪಠಿಸುತ್ತಾಳೆ ಮತ್ತು ಗರ್ಭದಲ್ಲಿರುವ ಮಗು ಅದನ್ನು ಗ್ರಹಿಸುತ್ತಾ ಹೋಗುತ್ತದೆ ಎಂದು ನಂಬಿಕೆ.
ಈ ವೀಡಿಯೊಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೋಡಿದವರೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ರೀಟ್ವೀಟ್ ಮಾಡುತ್ತಿದ್ದಾರೆ. ಸುಭದ್ರೆಯ ಗರ್ಭದಲ್ಲಿರುವಾಗಲೇ ಅಭಿಮನ್ಯು ಚಕ್ರವ್ಯೂಹ ಭೇದಿಸುವುದನ್ನು ಕಲಿತಿದ್ದ ಎಂದು ಮಹಾಭಾರತ ಹೇಳುತ್ತದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

ಪುನ್ಸವನ ಸಂಸ್ಕಾರ ಎಂದರೇನು:
ಹಿಂದೂ ಧರ್ಮದಲ್ಲಿ, ಯಾವುದೇ ಮಗುವಿಗೆ 16 ಸಂಸ್ಕಾರಗಳನ್ನು ಪೂರ್ಣಗೊಳಿಸುವ ನಂಬಿಕೆ ಇದ್ದು, ಇವುಗಳಲ್ಲಿ ಪುಂಸವನ ಸಂಸ್ಕಾರವೂ ಒಂದು. ಮೂರು ತಿಂಗಳ ಪೂರ್ಣಗೊಳಿಸಿದ ನಂತರ ಮಗುವಿನ ಪೋಷಕರು ಇದನ್ನು ಮಾಡುತ್ತಾರೆ. ಆರೋಗ್ಯವಂತ ಮಗುವಿನ ಸಾಧನೆಗಾಗಿ ಇದನ್ನು ಮಾಡಲಾಗುತ್ತದೆ. ಮ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement