ಜುಲೈ 26ರಿಂದ ಬೆಂಗಳೂರು-ಮೈಸೂರು-ಮಂಗಳೂರು ಹೆಚ್ಚುವರಿ ವಿಶೇಷ ರೈಲು ಸಂಚಾರ

posted in: ರಾಜ್ಯ | 0

ಮಂಗಳೂರು: ಬೆಂಗಳೂರು-ಮಂಗಳೂರು ಮಧ್ಯೆ ಮೈಸೂರು ಮಾರ್ಗವಾಗಿ ಜುಲೈ 26ರಿಂದ ಆಗಸ್ಟ್‌ 31ರ ವರೆಗೆ ವಿಶೇಷ ಹೆಚ್ಚುವರಿ ರೈಲು ಸಂಚರಿಸಲಿದೆ. ಇದು ವಾರದಲ್ಲಿ ಮೂರು ದಿನ ಹೆಚ್ಚುವರಿಯಾಗಿ ಸಂಚರಿಸಲಿದೆ ಎಂದು ತಿಳಿಸಲಾಗಿದೆ.
ಬೆಂಗಳೂರಿಗೆ ತೆರಳುವ ಮಾರ್ಗದ ಘಟ್ಟದ ಪ್ರದೇಶಗಳಲ್ಲಿ ಭೂ ಕುಸಿತದ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಂದತೆಯಾದ ಕಾರಣ ಹೆಚ್ಚುವರಿ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆಗೆ ರೈಲ್ವೆ ಮಂಡಳಿ ತಕ್ಷಣ ಸ್ಪಂದಿಸಿದೆ. ಮಂಗಳವಾರ, ಗುರುವಾರ ಹಾಗೂ ರವಿವಾರ ಸಂಚರಿಸಲಿದೆ. ರೈಲು 2 ಟೈಯರ್‌ಎಸಿ 2, ಎಸಿ 3 ಟೈಯರ್‌ 2, 9 ಸೆಕೆಂಡ್‌ ಕ್ಲಾಸ್‌ ಸ್ಲೀಪರ್ , ಎರಡು ಜನರಲ್‌ ಸೆಕೆಂಡ್‌ ಕ್ಲಾಸ್‌ ಬೋಗಿ ಸೇರಿದಂತೆ ಒಟ್ಟು 14 ಬೋಗಿಗಳನ್ನು ಒಳಗೊಂಡಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ನಂ. 06547 ರೈಲು ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಡಲಿದ್ದು ಮಂಗಳೂರು ಸೆಂಟ್ರಲ್‌ಗೆ ಮಾರನೇ ದಿನ ಬೆಳಗ್ಗೆ 9:05ಕ್ಕೆ ತಲುಪಲಿದೆ. ಕೆಂಗೇರಿ- 8:49ಕ್ಕೆ, ರಾಮನಗರ -9:13ಕ್ಕೆ, ಚನ್ನರಾಯಪಟ್ಟಣ ರಾತ್ರಿ 9:24ಕ್ಕೆ, ಮಂಡ್ಯ ರಾತ್ರಿ 9:54ಕ್ಕೆ, ಮೈಸೂರು ರಾತ್ರಿ 11 ಗಂಟೆ, ಕೃಷ್ಣರಾಜನಗರ ರಾತ್ರಿ 11:49, ಹೊಳೆನರಸಿಪುರ ರಾತ್ರಿ 12:43ಕ್ಕೆ, ಹಾಸನ ರಾತ್ರಿ 1:35ಕ್ಕೆ, ಸಕಲೇಶಪುರ ಬೆಳಿಗನ ಜಾವ 3, ಸುಬ್ರಹ್ಮಣ್ಯ ರೋಡ್‌ ಬೆಳಿಗ್ಗೆ 6:10, ಕಬಕಪುತ್ತೂರು ಬೆಳಿಗ್ಗೆ 7 , ಬಂಟ್ವಾಳ ಬೆಳಿಗ್ಗೆ 7:30ಕ್ಕೆ, ಮಂಗಳೂರು ಜಂಕ್ಷನ್‌ ಬೆಳಿಗ್ಗೆ 8:13 ಹಾಗೂ ಮಂಗಳೂರು ಸೆಂಟ್ರಲ್‌- ಬೆಳಿಗ್ಗೆ 9.05ಕ್ಕೆ ಆಗಮಿಸಲಿದೆ.
ನಂ. 06548 ಮಂಗಳೂರಿನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಚರಿಸಲಿದೆ. ಸಂಜೆ 6:35ಕ್ಕೆ ಹೊರಡುವ ರೈಲು

ಇಂದಿನ ಪ್ರಮುಖ ಸುದ್ದಿ :-   ತುಮಕೂರು: ಫೆಬ್ರವರಿ 6 ರಂದು ಎಚ್‌ಎಎಲ್‌ನ ಭಾರತದ ಅತಿ ದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯ ಉದ್ಘಾಟಿಸಲಿರುವ ಪ್ರಧಾನಿ

ಮಂಗಳೂರು ಜಂಕ್ಷನ್‌ಗೆ 6:48ಕ್ಕೆ, ಬಂಟ್ವಾಳ 7.20ಕ್ಕೆ, ಕಬಕಪುತ್ತೂರು ರಾತ್ರಿ 7:48, ಸುಬ್ರಹ್ಮಣ್ಯ ರೋಡ್‌ ರಾತ್ರಿ 8:40ಕ್ಕೆ, ಸಕಲೇಶಪುರ ರಾತ್ರಿ 11:20ಕ್ಕೆ, ಹಾಸನ ರಾತ್ರಿ 12:25ಕ್ಕೆ, ಹೊಳೆನರಸಿಪುರ 1:13ಕ್ಕೆ, ಕೃಷ್ಣರಾಜನಗರ ರಾತ್ರಿ 2:08ಕ್ಕೆ, ಮೈಸೂರು ಬೆಳಿಗ್ಗೆ 3ಕ್ಕೆ, ಮಂಡ್ಯ ಬೆಳಿಗಿನ ಜಾವ 3:54ಕ್ಕೆ, ಚನ್ನರಾಯಪಟ್ಟಣ ಬೆಳಿಗಿನ ಜಾವ 4:30ಕ್ಕೆ, ರಾಮನಗರ ಬೆಳಿಗಿನ ಜಾವ 4:42ಕ್ಕೆ, ಕೆಂಗೇರಿ ಬೆಳಿಗ್ಗೆ 5:11ಕ್ಕೆ, ಬೆಂಗಳೂರು ಕೆಎಸ್‌ಆರ್‌ ನಿಲ್ದಾಣಕ್ಕೆ ಬೆಳಗ್ಗೆ 6:15ಕ್ಕೆ ತಲುಪಲಿದೆ.
ಮಂಗಳೂರು-ಬೆಂಗಳೂರು ಸಂಪರ್ಕ ರಸ್ತೆಯ ಶಿರಾಡಿ ಘಾಟಿಯಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ದಿಂದಾಗಿ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ಹೆಚ್ಚುವರಿಯಾಗಿ ಒಂದು ಹಗಲು ಮತ್ತು ಒಂದು ರಾತ್ರಿ ರೈಲು ಸಂಚಾರ ಆರಂಭಿಸುವಂತೆ ಸಂಸದ ನಳಿನಕುಮಾರ ಕಟೀಲು ಅವರು ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಅವರನ್ನು ದೆಹಲಿಯಲ್ಲಿ ಜುಲೈ 18ರಂದು ಭೇಟಿಯಾಗಿ ಮನವಿ ಮಾಡಿದ್ದರು. ಸಚಿವರು ತಕ್ಷಣವೇ ಸ್ಪಂದಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ ಹೊಡೆದು ಅಪಘಾತ; ದಕ್ಷಿಣ ಕನ್ನಡದ ಮೂವರು ಸಾವು

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement