ಜಾಗತಿಕ ಕಂಪ್ಯೂಟರ್‌ ಕೋಡಿಂಗ್ ಸ್ಪರ್ಧೆಯಲ್ಲಿ ಗೆದ್ದ ವೇದಾಂತ್‌, ಅಮೆರಿಕ ಕಂಪನಿಯಿಂದ ವಾರ್ಷಿಕ 33 ಲಕ್ಷ ರೂ.ಗಳ ಸಂಬಳದ ಆಫರ್, ವಯಸ್ಸು ಹೇಳಿದ ನಂತರ ಉದ್ಯೋಗ ಕಳೆದುಕೊಂಡ…!

ನಾಗ್ಪುರ: ನಾಗ್ಪುರದ ವೇದಾಂತ್ ದಿಯೊಕ್ತೆ ಅಮೆರಿಕ ಕಂಪನಿಯಲ್ಲಿ ವರ್ಷಕ್ಕೆ ಸುಮಾರು 33 ಲಕ್ಷ ರೂಪಾಯಿಗಳ ಸಂಬಳದ ಪ್ಯಾಕೇಜ್‌ನಲ್ಲಿ ಕನಸಿನ ಉದ್ಯೋಗ ಗಿಟ್ಟಿಸಿಕೊಂಡರು, ಆದರೆ ಕಂಪನಿಗೆ ವೇದಾಂತ್ ವಯಸ್ಸಿನ ಬಗ್ಗೆ ತಿಳಿದ ನಂತರ ಅದು ‌ಅದು ಕೈ ತಪ್ಪಿಹೋಯಿತು..!
15 ವರ್ಷದ ನಾಗ್ಪುರದ ಹುಡುಗ ವೇದಾಂತ್‌ ಕಂಪ್ಯೂಟರ್‌ ಕೋಡಿಂಗ್ ಸ್ಪರ್ಧೆಯಲ್ಲಿ ಗೆದ್ದನು, ನಂತರ ಅಮೆರಿಕ ಸಂಸ್ಥೆ ಉದ್ಯೋಗದ ಆಫರ್ನೀಡಿತು. ಅದೂ ವಾರ್ಷಿಕವಾಗಿ 33 ಲಕ್ಷ ರೂಪಾಯಿಗಳ ಸಂಬಳ. ಆದರೆ ವಯಸ್ಸು 15 ವರ್ಷ ಎಂದು ಬಹಿರಂಗಪಡಿಸಿದ ನಂತರ ಅದನ್ನು ಕಳೆದುಕೊಂಡಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಯಿತು.
ವೇದಾಂತ್ ತನ್ನ ತಾಯಿಯ ಹಳೆಯ ಲ್ಯಾಪ್‌ಟಾಪ್‌ನಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಸ್ಕ್ರೋಲ್ ಮಾಡುವಾಗ ವೆಬ್ ಡೆವಲಪ್‌ಮೆಂಟ್ ಸ್ಪರ್ಧೆ ಬಗ್ಗೆ ಕಂಡುಕೊಂಡಿದ್ದಾನೆ. ನಂತರ ಸ್ಪರ್ಧೆಗೆ ನಮೂದಿಸಲು ನಿರ್ಧರಿಸಿದ್ದಾನೆ. ಆತ ಎರಡು ದಿನಗಳ ಅವಧಿಯಲ್ಲಿ 2,066 ಸಾಲುಗಳ ಕೋಡ್‌ಗಳನ್ನು ಮಾಡಿ ಕಳುಹಿಸಿದ್ದಾನೆ ಮತ್ತು ಸ್ಪರ್ಧೆಯಲ್ಲಿ ಗೆದ್ದಿದ್ದಾನೆ.

ಸ್ಪರ್ಧೆಯನ್ನು ಆಯೋಜಿಸಿದ ನ್ಯೂಜೆರ್ಸಿ ಜಾಹೀರಾತು ಏಜೆನ್ಸಿಯು ಆತನಿಗೆ “ಕೆಲಸ ನಿಯೋಜಿಸಲು ಮತ್ತು ಇತರ ಕೋಡರ್‌ಗಳನ್ನು ನಿರ್ವಹಿಸಲು” ಕಂಪನಿಯ ಎಚ್‌ಆರ್‌ಡಿ (HRD) ತಂಡದಲ್ಲಿ ಪೂರ್ಣ ಸಮಯದ ಕೆಲಸವನ್ನು ನೀಡಿತು, ಆದರೆ ನಂತರ ವೇದಾಂತ್‌ಗೆ ಕೇವಲ 15 ವರ್ಷ ಎಂದು ತಿಳಿದ ನಂತರ ಅದು ಉದ್ಯೋಗ ನೀಡುವ ತನ್ನ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು. ಜಗತ್ತಿನಾದ್ಯಂತ ಸುಮಾರು 1,000 ಜನರು ಸಮೂದು ಮಾಡಿದ್ದ ಈ ಸ್ಪರ್ಧೆಯಲ್ಲಿ ವೇದಾಂತ್ ಗೆದ್ದಿದ್ದ.
ಕಂಪನಿಯು ಇದೇವೇಳೆ ಈ ಬಗ್ಗೆ ವೇದಾಂತ್‌ಗೆ ಡಿಮೋಟಿವೇಟ್ ಆಗುವುದು ಬೇಡ ಮತ್ತು ತನ್ನ ಶಿಕ್ಷಣವನ್ನು ಪೂರ್ಣಗೊಳಿಸಲು ಹೇಳಿದೆ. “ನಿಮ್ಮ ಅನುಭವ, ವೃತ್ತಿಪರತೆ ಮತ್ತು ವಿಧಾನದಿಂದ ನಾವು ಪ್ರಭಾವಿತರಾಗಿದ್ದೇವೆ” ಎಂದು ಕಂಪನಿ ಹೇಳಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಂಪನಿಯು ವೇದಾಂತ್‌ಗೆ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ತಮ್ಮನ್ನು ಸಂಪರ್ಕಿಸಲು ಕಂಪನಿಯವರು ಸೂಚಿಸಿದ್ದಾರೆ ಮತ್ತು ನಿಮ್ಮ ಪ್ರಸ್ತುತಿಗೆ ಸಂತೋಷಪಟ್ಟಿದೆ ಮತ್ತು ನಿಮ್ಮ ಒಳನೋಟಗಳನ್ನು ಗೌರವಿಸುತ್ತದೆ ಎಂದು ಕಂಪನಿ ತಂಡವು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ ; ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ; ಕಾಶ್ಮೀರದ ಹಲವೆಡೆ ಡ್ರೋಣ್‌ ದಾಳಿ ; ತಿರುಗೇಟು ನೀಡಲು ಸೇನೆಗೆ ಮುಕ್ತ ಅಧಿಕಾರ ನೀಡಿದ ಭಾರತ

ವೇದಾಂತ್ ಅವರು animeeditor.com ಎಂಬ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾಕ್ಕೆ ತಿಳಿಸಿದ್ದಾನೆ. ಇದು ಬ್ಲಾಗ್‌ಗಳು, ವ್ಲಾಗ್‌ಗಳು, ಚಾಟ್‌ಬಾಟ್ ಮತ್ತು ವೀಡಿಯೊ ವೀಕ್ಷಣೆಯ ವೇದಿಕೆಯ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ YouTube ನಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಆಯ್ಕೆಯನ್ನು ನೀಡುತ್ತದೆ.
ಹೆಚ್ಚುವರಿಯಾಗಿ, ಒಬ್ಬರ ಪ್ರೊಫೈಲ್ ಅನ್ನು ಎಡಿಟ್‌ ಮಾಡಬಹುದು, ಲೈವ್ ಫಾಲೋವರ್ಸ್‌ಗಳನ್ನು ಹೊಂದಬಹುದು ಮತ್ತು ಲೈಕ್‌ಗಳನ್ನು ಪಡೆಯಬಹುದು” ಎಂದು ವೇದಾಂತ್‌ ತಿಳಿಸಿದ್ದಾನೆ.. “ನಾನು HTML ಮತ್ತು ಜಾವಾಸ್ಕ್ರಿಪ್ಟ್ ಭಾಷೆ ಮತ್ತು ವರ್ಚುವಲ್ ಸ್ಟುಡಿಯೋ ಕೋಡ್ (2022) ಅನ್ನು ಬಳಸಿದ್ದೇನೆ” ಎಂದು ಹೇಳಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.
ವಾಥೋಡಾದ ನಾರಾಯಣ ಇ-ಟೆಕ್ನೋದಲ್ಲಿನ ತನ್ನ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಡಾರ್ ಸಿಸ್ಟಮ್ ಮಾದರಿಯನ್ನು ವಿನ್ಯಾಸಗೊಳಿಸುವ ಮೂಲಕ ವೇದಾಂಕ್‌ ಚಿನ್ನದ ಪದಕವನ್ನು ಗೆದ್ದಿದ್ದಾನೆ.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement