ರಾಯ್ಪುರ: ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ಶನಿವಾರ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರು ತನಗೆ ರಸ್ತೆಯಲ್ಲಿ ಸಿಕ್ಕಿದ 45 ಲಕ್ಷ ರೂ.ಗಳಿದ್ದ ಬ್ಯಾಗನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವ ರಾಯ್ಪುರದ ಕಯಾಬಂಧ ಪೋಸ್ಟ್ಗೆ ಲಗತ್ತಿಸಲಾದ ಟ್ರಾಫಿಕ್ ಕಾನ್ಸ್ಟೆಬಲ್ ನೀಲಂಬರ್ ಸಿನ್ಹಾ ಅವರಿಗೆ ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ ಸಿಕ್ಕಿದೆ. ‘ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ಒಟ್ಟು 45 ಲಕ್ಷ ರೂ.ಗಳ ಮೊತ್ತದ 2000 ಮತ್ತು 500 ನೋಟುಗಳು ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್ ತಂದು ಕೊಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋರ್ ಹೇಳಿದ್ದಾರೆ.
ಇಷ್ಟೊಂದು ಮೊತ್ತದ ಹಣ ಸಿಕ್ಕಾಗಲೂ ಪ್ರಾಮಾಣಿಕತೆ ತೋರಿದ ನೀಲಂಬರ್ ಸಿನ್ಹಾ ಅವರಿಗೆ ಹಿರಿಯ ಅಧಿಕಾರಿಗಳು ಬಹುಮಾನವನ್ನು ಘೋಷಿಸಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ರಾಥೋರ್ ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ