ಬೆಳಗಾವಿ : ಬೆಳಗಾವಿ ಅರಣ್ಯ ಸಂಚಾರಿ (ಜಾಗೃತ) ದಳದ ತಂಡ ಕೃಷ್ಣ ಮೃಗ ಚರ್ಮ ಮಾರಾಟ ಮಾಡುವ ಬೃಹತ್ ಜಾಲವನ್ನು ಬೇಧಿಸಿದೆ. ಹಾವೇರಿ ಜಿಲ್ಲೆಯ ಒಟ್ಟು ಐವರನ್ನು ಬಂಧಿಸಲಾಗಿದೆ. ಅವರಿಂದ 3 ಕೃಷ್ಣ ಮೃಗದ ಚರ್ಮಗಳನ್ನು, ಪ್ರಾಣಿಗಳನ್ನು ಬೇಟೆಯಾಡಲು ಬಳಸುವ 4 ತಂತಿಯ ಉರುಳುಗಳನ್ನು ಮತ್ತು 1 ದ್ವಿಚಕ್ರ ವಾಹನವನ್ನು ರಾಣೇಬೆನ್ನೂರಲ್ಲಿ ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಕೃಷ್ಣ ಮೃಗ ಚರ್ಮಗಳನ್ನು 15 ಲಕ್ಷ ರೂ.ಗಳಿಗೆ ವ್ಯವಹಾರ ಕುದುರಿಸುವ ಸಮಯದಲ್ಲಿ ಜಾಗೃತ ದಳದ ಮುಖ್ಯಸ್ಥರಾದ ಸೀಮಾ ಗರ್ಗ್ , ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ( ಜಾಗೃತ ) ಹಾಗೂ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಚೌವ್ಹಾಣ, ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಂಕರ ಕೆ . ಕಲ್ಲೋಳಿಕರ ನಿರ್ದೇಶನದಂತೆ ಬೆಳಗಾವಿಯ ಜಾಗೃತ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಿ. ತೇಲಿ ಮತ್ತು ವಿ.ಡಿ . ಹುದ್ದಾರ ನೇತೃತ್ವದಲ್ಲಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ಪಟ್ಟಣದಲ್ಲಿ 03 ಕೃಷ್ಣ ಮೃಗ ಚರ್ಮಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಬೇಟೆಯಾಡಲು ಬಳಸುವ 04 ತಂತಿಯ ಉರುಳುಗಳನ್ನು , ಒಂದು ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದ್ದು, ಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ರಾಣೆಬೆನ್ನೂರು ತಾಲೂಕಿನವರಾದ ತ್ಯಾಗರಾಜ ಲಕ್ಷ್ಮಣ ಲಮಾಣಿ-ಕಜ್ಜರಿ, ಗುರುನಾಥ ಬಸವರಾಜ ಐರಾಣಿ, ರಾಣೇಬೆನ್ನೂರು , ಬೀರಪ್ಪ ನಾಗಪ್ಪ ಮೆಡ್ಲೇರಿ-ದೇವರಗುಡ್ಡ, ಬ್ಯಾಡಗಿ ತಾಲೂಕಿನ ತಿರುಕಪ್ಪ ಮರಿಯಪ್ಪ ಗೋಡೇರ-ಬುಡಪ್ಪನಹಳ್ಳಿ ಹಾಗೂ ಹಾವೇರಿ ತಾಲೂಕಿನ ನಾಗಪ್ಪ ದ್ಯಾಮಪ್ಪ ಹರಿಜನ-ಬರಡಿ ಅವರನ್ನು ಬಂಧಿಸಲಾಗಿದೆ.
ದಾಳಿಯಲ್ಲಿ ಅರಣ್ಯ ಸಂಚಾರಿದಳದ ವಲಯ ಅರಣ್ಯಾಧಿಕಾರಿಗಳಾದ ಮಮತಾ ಅಗಡಿ, ಉಪ ವಲಯ ಅರಣ್ಯಾಧಿಕಾರಿಗಳಾದ ಡಿ.ಆರ್.ಹಣಜಿ ಮತ್ತು ಐ.ಎಂ . ಅಕ್ಕಿ , ಮಲ್ಲಿಕಾರ್ಜುನ ಮಡಿವಾಳರ ಹಾಗೂ ಶರಣಬಸವೇಶ್ವರ ಹತ್ತರಕಿ , ಅರಣ್ಯ ರಕ್ಷಕ ರಶೀದ್ ಮಾಣಿಕಬಾಯಿ ಭಾಗವಹಿಸಿದ್ದರು.
ರಾಣೇಬೆನ್ನೂರು ಕೃಷ್ಣ ಮೃಗ ವನ್ಯಧಾಮದ ಅಧಿಕಾರಿಗಳು ಮತ್ತು ಸಿಬ್ಬಂದಿ ಳು ಕಾರ್ಯಾಚರಣೆಗೆ ಸಹಕರಿಸಿದರು .


ನಿಮ್ಮ ಕಾಮೆಂಟ್ ಬರೆಯಿರಿ