
ಡೆಹ್ರಾಡೂನ್: ಡೆಹ್ರಾಡೂನ್‌ನ ಟೋಲ್ ಬೂತ್‌ನಲ್ಲಿ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ನಜ್ಜುಗುಜ್ಜಾಗುತ್ತಿದ್ದ ಟೋಲ್ ಬೂತ್ ಸಿಬ್ಬಂದಿಯನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ.
ಈ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡ ವೀಡಿಯೊದಲ್ಲಿ, ಟೋಲ್ ಗೇಟ್ ದಾಟಲು ಕಾಯುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದ ನಂತರ ಟ್ರಕ್ ಟೋಲ್ ಬೂತ್‌ಗೆ ಅಪ್ಪಳಿಸುತ್ತಿರುವುದನ್ನು ಕಾಣಬಹುದು.

ಅಪಘಾತದ ನಂತರ, ಟೋಲ್ ಬೂತ್ ಕೆಲಸಗಾರನನ್ನು ಸುರಕ್ಷಿತವಾಗಿ ರಕ್ಷಿಸಲು ಮಹಿಳೆಯು ಬೂತ್ ಕಡೆಗೆ ಓಡುತ್ತಿರುವುದನ್ನು ಕಾಣಬಹುದು.ವೀಡಿಯೊ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಮಹಿಳೆಯ ನಿಸ್ವಾರ್ಥ ಕಾರ್ಯವನ್ನು ನೆಟಿಜನ್‌ಗಳು ಶ್ಲಾಘಿಸುತ್ತಿರುವುದನ್ನು ಕಾಣಬಹುದು.
ಟೋಲ್ ಬೂತ್ ಸಿಬ್ಬಂದಿ ಜೀವ ಉಳಿಸಲು ಸಹಾಯ ಮಾಡಿದ ಮಹಿಳೆಯ ಪ್ರಭಾವಶಾಲಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ