ಸಾಲದ ಸುಳಿಯಲ್ಲಿ ಸಿಲುಕಿ ಹಣಕ್ಕಾಗಿ ಮನೆ ಮಾರಾಟ ಮಾಡಲು ನಿಗದಿಯಾದ ಸಮಯದ ಎರಡು ತಾಸು ಮೊದಲು ₹ 1 ಕೋಟಿ ಲಾಟರಿ ಗೆದ್ದ ವ್ಯಕ್ತಿ…!

ಕಾಸರಗೋಡು (ಕೇರಳ): ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ 50ರ ಹರೆಯದ ಮೊಹಮ್ಮದ್ ಬಾವ ಅವರು ತಮ್ಮ ಜೀವನದಲ್ಲಿ ಸ್ವಲ್ಪ ಅದೃಷ್ಟ ಬರಲಿ ಎಂದು ಪ್ರಾರ್ಥಿಸಿದ್ದಕ್ಕೆ ಫಲ ಸಿಕ್ಕಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಅವರು, ಸಾಲ ತೀರಿಸಲು ಅನನಿವಾರ್ಯವಾಗಿ ನೂತನವಾಗಿ ನಿರ್ಮಿಸಿದ ತಮ್ಮ ಮನೆಯನ್ನು ಮಾರಾಟ ಮಾಡಲು ಟೋಕನ್ ಮುಂಗಡ ಹಣ ಸ್ವೀಕರಿಸುವ ಕೇವಲ ಎರಡು ಗಂಟೆಗಳ ಮೊದಲು ಅವರು ಕೇರಳ ಲಾಟಿರಿಯಲ್ಲಿ ₹ 1 ಕೋಟಿ ಹಣ ಗೆದ್ದರು…!
ಈ ಉತ್ತರ ಕೇರಳ ಜಿಲ್ಲೆಯ ಮಂಜೇಶ್ವರದವರಾದ ಮೊಹಮ್ಮದ್ ಬಾವ ಅವರು ತಾನು ಸಂಬಂಧಿಕರಿಂದ ಪಡೆದ ಸುಮಾರು ₹ 50 ಲಕ್ಷ ಸಾಲ ಮತ್ತು ಬ್ಯಾಂಕ್‌ನಿಂದ ಪಡೆದ ಸಾಲವನ್ನು ತೀರಿಸಲು ಹಣದ ಅವಶ್ಯಕತೆ ಇತ್ತು. ಅವರು ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಅಪಾರ ಸಾಲ ಮಾಡಿದ್ದರು. ಅದನ್ನು ತೀರಿಸಬೇಕಾದ ಅನಿವಾರ್ಯತೆಯಲ್ಲಿ ಅವರು ನೂತನವಾಗಿ ನಿರ್ಮಿಸಿದ ಮನೆ ಮಾರಾಟಕ್ಕೆ ಮುಂದಾಗಿದ್ದರು. ಮಾತುಕತೆ ಮುಗಿದು ಕೊಳ್ಳುವವರು ಟೋಕನ್‌ ಮುಂಗಡ ಹಣ ನೀಡುವವರಿದ್ದರು. ಅದು ಕೊಡಲು ಕೇಔಲ ಎರಡು ತಾಸುಗಳಿದ್ದಾಗ ಅವರು ತಾವು ಕೊಂಡಿದ್ದ ಕೇರಳ ಲಾಟರಿಯಲ್ಲಿ ₹ 1 ಕೋಟಿ ಹಣ ಗೆದ್ದಿದ್ದಾರೆ.
ಈಗ, ಅವರ ಮನೆ ಮಾರಬೇಕಾದ ಮನೆ ಸಂತೋಷ ಮತ್ತು ಅದೃಷ್ಟದಿಂದ ತುಂಬಿದೆ. ಹೀಗಾಗಿ ಬಾವಾ ಅವರ ಮನೆ ಮಾರಾಟ ಮಾಡದಿರಲು ನಿರ್ಧರಿಸಿದರು.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

ನಾನು ಲಾಟರಿ ಗೆದ್ದಿದ್ದೇನೆ, ಆದ್ದರಿಂದ, ಈ ಮನೆಯನ್ನು ಮಾರಾಟ ಮಾಡುವ ಅಗತ್ಯವಿಲ್ಲ, ನಾವು ಬಹುಮಾನವನ್ನು ಪಡೆದಾಗ, ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ” ಎಂದು ಬಾವಾ ಸುದ್ದಿಗಾರರಿಗೆ ತಿಳಿಸಿದರು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಆತಂಕದಲ್ಲಿದ್ದೆ ಎಂದರು. “ಆದರೆ ದೇವರು ಅಂತಿಮವಾಗಿ ನನಗೆ ಒಂದು ಮಾರ್ಗವನ್ನು ತೋರಿಸಿದನು ಎಂದು ಬಾವಾ ಹೇಳಿದರು.
50 ವರ್ಷದ ವ್ಯಕ್ತಿ ಭಾನುವಾರ ಬೆಳಿಗ್ಗೆ ಕೇರಳ ಸರ್ಕಾರದ ಫಿಫ್ಟಿ-ಫಿಫ್ಟಿ ಲಾಟರಿ ಟಿಕೆಟ್‌ಗಳನ್ನು ಮಾರಾಟಗಾರರಿಂದ ಖರೀದಿಸಿದ್ದರು.ಭಾನುವಾರ ಮಧ್ಯಾಹ್ನ 3:30 ರ ಹೊತ್ತಿಗೆ ಲಾಟರಿ ಫಲಿತಾಂಶ ಪ್ರಕಟವಾಯಿತು. ಅದೃಷ್ಟವಶಾತ್ ನನಗೆ ಬಹುಮಾನ ಸಿಕ್ಕಿತು. ಹಿಂದಿನ ದಿನ, ನನ್ನ ಮನೆ ಖರೀದಿದಾರರು ನಮ್ಮ ಮನೆಗೆ ಟೋಕನ್ ಮುಂಗಡವನ್ನು ನೀಡಲು ಭಾನುವಾರ ಸಂಜೆ 5:30 ಕ್ಕೆ ಬರುವುದಾಗಿ ನಮಗೆ ತಿಳಿಸಿದ್ದರು. ನಾನು ಅದಕ್ಕೆ ಒಪ್ಪಿದ್ದೆ” ಎಂದು ವ್ಯಕ್ತಿ ಹೇಳಿದರು.

ಆದರೆ ಅವರು ಮನೆಗೆ ಬಂದಾಗ, ಈ ಮನೆಯಲ್ಲಿ ಜಾಕ್‌ಪಾಟ್ ಬಗ್ಗೆ ತಿಳಿದ ಜನರು ತುಂಬಿದ್ದರು. ಖರೀದಿದಾರರು ಅದೃಷ್ಟದ ಗೆಲುವಿನ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾರೆ ಎಂದು ಬಾವಾ ಹೇಳಿದರು. ತಾನು ಲಾಟರಿ ಟಿಕೆಟ್‌ಗಳನ್ನು ನಿಯಮಿತವಾಗಿ ಖರೀದಿಸುವವನಲ್ಲ ಎಂದು ಹೇಳಿದರು.
ನನಗೆ ಆ ಲಾಟರಿ ಏಜೆಂಟರು ಪರಿಚಯಸ್ಥರು. ಹೀಗಾಗಿ ಅವರು ನನ್ನ ಮನೆಯ ಮೂಲಕ ಹಾದುಹೋದಾಗ, ಅವರು ನನಗೆ ಕೆಲವು ಟಿಕೆಟ್ಟುಗಳನ್ನು ನೀಡುತ್ತಿದ್ದರು. ನಾನು ಏನು ಮಾಡಬೇಕೆಂದು ತಿಳಿಯದೆ ಈ ನಿರ್ದಿಷ್ಟ ಟಿಕೆಟ್ ಅನ್ನು ನಾನು ಸಂಪೂರ್ಣ ಉದ್ವೇಗದಿಂದ ಖರೀದಿಸಿದೆ” ಎಂದು ಬಾವಾ ಹೇಳಿದರು.
ಸಾಲ ತೀರಿಸಿದ ಬಳಿಕ ಉಳಿದ ಮೊತ್ತವನ್ನು ಬಡವರು ಹಾಗೂ ನಿರ್ಗತಿಕರಿಗೆ ವಿನಿಯೋಗಿಸಲು ಮುಂದಾಗುವುದಾಗಿ ತಿಳಿಸಿದರು. ತೆರಿಗೆ ಕಡಿತದ ನಂತರ ಬಾವಾ ಸುಮಾರು ₹ 63 ಲಕ್ಷ ಪಡೆಯುತ್ತಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement