ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ‌ ಮಾಡಿದ ರಾಜ್ಯ ಸರ್ಕಾರ : ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರವು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದ್ದು, 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.
ಈ ಕುರಿತು ರಾಜ್ಯದ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಸರ್ಕಾರಕ್ಕೆ ವರದಿ ಮಾಡಲು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಗಳ ಜಾರಿ ಮತ್ತು ಪರಿಶೀಲನೆ, ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಬೇಕಾಗುತ್ತದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ

ಡಾ.ಎನ್. ಮಂಜುಳ – ಬೆಂಗಳೂರು ನಗರ
ಕೆ.ಪಿ. ಮೋಹನರಾಜ – ಬೆಂಗಳೂರು ಗ್ರಾಮಾಂತರ
ಡಾ.ಜೆ. ರವಿಶಂಕರ್ – ರಾಮನಗರ
ಡಾ.ಪಿ.ಸಿ. ಜಾಫರ್ – ಚಿತ್ರದುರ್ಗ
ಉಮಾ ಮಹಾದೇವನ್‌ – ಕೋಲಾರ
ಎಲ್. ಕೆ. ಅತೀಕ್ – ಬೆಳಗಾವಿ
ಡಾ. ಏಕ್‌ ರೂಪ್ ಕೌರ್ – ಚಿಕ್ಕಬಳ್ಳಾಪುರ
ಟಿ.ಕೆ. ಅನಿಲಕುಮಾರ– ಶಿವಮೊಗ್ಗ
ಎಸ್. ಆರ್. ಉಮಾಶಂಕರ – ದಾವಣಗೆರೆ
ಎನ್. ಜಯರಾಮ – ಮೈಸೂರು
ಡಾ.ವಿ ರಾಮಪ್ರತಾಪ ಮನೋಹರ್ – ಮಂಡ್ಯ
ಬಿ.ಬಿ. ಕಾವೇರಿ – ಚಾಮರಾಜನಗರ
ನವೀನರಾಜ್ ಸಿಂಗ್ – ಹಾಸನ
ವಿ ಅನ್ಪುಕುಮಾರ್ – ಕೊಡಗು
ಸಿ.ಶಿಖಾ – ಚಿಕ್ಕಮಗಳೂರು
ಮನೋಜ ಜೈನ್ – ಉಡುಪಿ
ವಿ ಪೊನ್ನುರಾಜ್ – ದಕ್ಷಿಣ ಕನ್ನಡ
ರಾಕೇಶ್ ಸಿಂಗ್ – ತುಮಕೂರು
ಡಾ. ಆರ್. ವಿಶಾಲ್ – ಧಾರವಾಡ
ಮೊಹಮ್ಮದ್ ಮೊಹಿಸಿನ್ – ಗದಗ
ರಣದೀಪ್ ಡಿ – ವಿಜಯಪುರ
ಪಿ.ಹೇಮಲತಾ– ಉತ್ತರ ಕನ್ನಡ
ಶಿವಯೋಗಿ ಸಿ. ಕಳಸದ – ಬಾಗಲಕೋಟೆ
ಸಲ್ಮಾ ಕೆ ಫಾಹಿಂ – ಕಲಬುರ್ಗಿ
ಮನೀಶ್ ಮೌದ್ಗಿಲ್ – ಯಾದಗಿರಿ
ಜಿ. ಕುಮಾರ ನಾಯಕ್ – ರಾಯಚೂರು
ಡಾ. ರಶ್ಮಿ ವಿ ಮಹೇಶ– ಕೊಪ್ಪಳ
ಡಾ. ಎಂ. ಎನ್. ಅಜಯ್ ನಾಗಭೂಷಣ್ – ಬಳ್ಳಾರಿ
ರಿಚರ್ಡ್ ವಿನ್ಟೆಂಟ್ ಡಿಸೋಜಾ – ಬೀದರ
ಮೇಜರ್ ಮಣಿವಣ್ಣನ್ ಪಿ. – ಹಾವೇರಿ
ತುಳಸಿ ಮದ್ದಿನೇನಿ – ವಿಜಯಪುರ

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement