ತಿನ್ನಲು ಕೇಳಿದ್ದಕ್ಕೆ ತಾನು ತಂದಿದ್ದ ಒಂದು ಚಪಾತಿ ಕೊಟ್ರೂ ಮತ್ತೊಂದು ಕೊಡಲಿಲ್ಲ ಎಂದು ರಿಕ್ಷಾ ಚಾಲಕನ ಹತ್ಯೆ ಮಾಡಿದ ವ್ಯಕ್ತಿ

ನವದೆಹಲಿ: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಚಪಾತಿ ಹಂಚಿಕೊಳ್ಳಲು ನಿರಾಕರಿಸಿದ ರಿಕ್ಷಾ ಚಾಲಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಮೃತನನ್ನು 40 ವರ್ಷದ ಮುನ್ನಾ ಎಂದು ಗುರುತಿಸಲಾಗಿದೆ. “ಆರೋಪಿ ಚಿಂದಿ ಆಯುವ ಫಿರೋಜ್ ಖಾನ್ ಎಂಬಾತನನ್ನು ಕರೋಲ್ ಬಾಗ್‌ನ ಉದ್ಯಾನವನದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ, ಜುಲೈ 26 ರಂದು, ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳೀಯರು ಆತನನ್ನು ಆಟೋದಲ್ಲಿ ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ದರು, ಆದರೆ ಆತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯವರು ಘೋಷಿಸಿದರು.

ನಂತರ ಪಿಎಸ್ ಕರೋಲ್ ಬಾಗ್ ನಲ್ಲಿ ಕೊಲೆ ಪ್ರಕರಣ ದಾಖಲಾಗಿ, ತನಿಖೆ ಕೈಗೊಳ್ಳಲಾಯಿತು.
ರಾತ್ರಿ 10 ಗಂಟೆ ಸುಮಾರಿಗೆ ವಿಷ್ಣು ಮಂದಿರ ಮಾರ್ಗದಲ್ಲಿ ತಾನು ಮುನ್ನಾ ಜೊತೆ ಕುಳಿತಿದ್ದೆ ಎಂದು ಪ್ರತ್ಯಕ್ಷದರ್ಶಿ ಲಖನ್ ಪೊಲೀಸರಿಗೆ ತಿಳಿಸಿದ್ದಾರೆ. ಮುನ್ನಾ ಹೋಟೆಲಿನಿಂದ ತಂದಿದ್ದ ತಿಂಡಿ ತಿನ್ನತೊಡಗಿದ. ಕುಡುಕನೊಬ್ಬ ಅಲ್ಲಿಗೆ ಬಂದು ಊಟ ಕೇಳಿದಾಗ ಮುನ್ನಾ ಚಪಾತಿ ಕೊಟ್ಟಿದ್ದಾನೆ.
ನಂತರ ಆರೋಪಿ ಮತ್ತೆ ಚಪಾತಿ ಕೊಡುವಂತೆ ಕೇಳಿದ್ದು, ಮೃತ ಮುನ್ನಾ ಮತ್ತೆ ಚಪಾತಿ ಕೊಡಲು ನಿರಾಕರಿಸಿದ್ದಾನೆ. “ಆರೋಪಿಯು ಅಮಲೇರಿದ ಸ್ಥಿತಿಯಲ್ಲಿದ್ದ ಮತ್ತು ಅವನು ಮುನ್ನಾನನ್ನು ನಿಂದಿಸಲು ಪ್ರಾರಂಭಿಸಿದನು. ಮೃತರು ಆತನನ್ನು ವಿರೋಧಿಸಿದಾಗ, ಆರೋಪಿ ಉದ್ದನೆಯ ಹರಿತವಾದ ಚಾಕುವಿನಿಂದ ಮುನ್ನಾನನ್ನು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರತ್ಯಕ್ಷದರ್ಶಿಯು 400-500 ಮೀಟರ್‌ಗಳಷ್ಟು ಅವನನ್ನು ಬೆನ್ನಟ್ಟಿದರೂ ಹಿಡಿಯಲು ವಿಫಲರಾದರು. ಮುನ್ನಾ ಅವರನ್ನು ಆಟೋ ರಿಕ್ಷಾದಲ್ಲಿ ಆರ್‌ಎಂಎಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು ಎಂದು ಪೊಲೀಸರು ಹೇಳಿದರು.

ಪ್ರಮುಖ ಸುದ್ದಿ :-   'ಪ್ರಿಯಾಂಕಾ ಗಾಂಧಿ ವಿರುದ್ಧ ಪಕ್ಷದಲ್ಲೇ ದೊಡ್ಡ ಪಿತೂರಿ...ಜೂನ್ 4ರ ನಂತರ ಕಾಂಗ್ರೆಸ್ ಅಣ್ಣ-ತಂಗಿ ಬಣಗಳಾಗಿ ವಿಭಜನೆ' : ಕಾಂಗ್ರೆಸ್‌ ಮಾಜಿ ನಾಯಕನ ಸ್ಫೋಟಕ ಹೇಳಿಕೆ

ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದರು. ಶಂಕಿತ ರಸ್ತೆ ಬದಿ ಮತ್ತು ಪಾರ್ಕ್ ಪ್ರದೇಶದಲ್ಲಿ ತಂಗಿದ್ದ. ಎಸ್‌ಐ ವಿಕ್ರಮ್ ಸಿಂಗ್ ಮತ್ತು ಎಎಸ್‌ಐ ಜಿತೇಂದರ್ ಅವರನ್ನೊಳಗೊಂಡ ತಂಡವು ಜಜೋರಿಯಾ ಪಾರ್ಕ್‌ಗೆ ತಲುಪಿ ಉದ್ಯಾನವನದಲ್ಲಿ ಮಲಗಿದ್ದ ಶಂಕಿತನನ್ನು ಗುರುತಿಸಿದೆ.
ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಪರಾಧ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಯನ್ನೂ ಪಡೆಯಲಾಗಿದೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ನಿದರ್ಶನದಲ್ಲಿ ಅಪರಾಧಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement