ಸಂಪುಟ ಸಭೆಯ ನಂತರ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಬಂಧಿಸಲ್ಪಟ್ಟ ಐದು ದಿನಗಳ ನಂತರ ಪಾರ್ಥ ಚಟರ್ಜಿ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಗುರುವಾರ ಸಚಿವ ಸ್ಥಾನದಿಂದ ತೆಗೆದುಹಾಕಿದ್ದಾರೆ. ಕೋಲ್ಕತ್ತಾದ ಬೆಲ್‌ಘಾರಿಯಾ ಪ್ರದೇಶದಲ್ಲಿನ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಒಡೆತನದ ಎರಡನೇ ಫ್ಲಾಟ್‌ನಿಂದ 29 ಕೋಟಿ ರೂ.ಗಳು ನಗದು ಮತ್ತು ಐದು ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ)ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಚಟರ್ಜಿ ಅವರನ್ನು ಪಕ್ಷ ಮತ್ತು ಸಚಿವಾಲಯದ ಎಲ್ಲ ಹುದ್ದೆಗಳಿಂದ ವಜಾಗೊಳಿಸುವ ಕೂಗು ಹೆಚ್ಚುತ್ತಿರುವ ನಡುವೆ ಸಭೆ ಕರೆಯಲಾಗಿತ್ತು.
ರಾಜ್ಯ ಸಚಿವ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ, ಸಂಸದೀಯ ವ್ಯವಹಾರಗಳು, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸಾರ್ವಜನಿಕ ಉದ್ಯಮಗಳು ಮತ್ತು ಕೈಗಾರಿಕಾ ಪುನರ್ನಿರ್ಮಾಣ ಖಾತೆಗಳಿಂದ ಪಾರ್ಥ ಚಟರ್ಜಿ ಅವರನ್ನು ತೆಗೆದುಹಾಕಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ಪಾರ್ಥ ಚಟರ್ಜಿ ಬಂಧನದ ನಂತರ ಭ್ರಷ್ಟಾಚಾರದ ಬಗ್ಗೆ ಕಠಿಣವಾಗಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಟಿಎಂಸಿ “ಕಟ್ಟುನಿಟ್ಟಾದ ಪಕ್ಷ” ಆಗಿರುವುದರಿಂದ ಅವರನ್ನು ಸಚಿವ ಸ್ಥಾನದಿಂದ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.
ನನ್ನ ಪಕ್ಷವು ತುಂಬಾ ಕಟ್ಟುನಿಟ್ಟಾದ ಪಕ್ಷವಾಗಿರುವುದರಿಂದ ನಾನು ಅವರನ್ನು [ಪಾರ್ಥ] ಬಿಡುಗಡೆ ಮಾಡಿದ್ದೇನೆ. ಇದನ್ನು ತೋರಿಸುವ ಮೂಲಕ ಯಾರಾದರೂ ಟಿಎಂಸಿ ಬಗ್ಗೆ ಗ್ರಹಿಕೆ ಬದಲಾಯಿಸಬಹುದು ಎಂದು ಭಾವಿಸಿದರೆ, ಅದು ತಪ್ಪು ಎಂದು ತೋರಿಸಿದ್ದೇನೆ ಎಂದು ಅವರು ಹೇಳಿದರು.
ಪಾರ್ಥ ಚಟರ್ಜಿ ಅವರನ್ನು ವಜಾ ಮಾಡಿದ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉಸ್ತುವಾರಿಯನ್ನು ಮಮತಾ ಬ್ಯಾನರ್ಜಿ ತಾವೇ ಇಟ್ಟುಕೊಂಡಿದ್ದಾರೆ.
ಇದಕ್ಕೂ ಮುನ್ನ ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಕುನಾಲ್ ಘೋಷ್ ಅವರು ಪಾರ್ಥ ಚಟರ್ಜಿ ಅವರನ್ನು ಪಕ್ಷ ಮತ್ತು ಸಚಿವ ಸ್ಥಾನದಿಂದ ಉಚ್ಚಾಟಿಸುವಂತೆ ಕರೆ ನೀಡಿದ್ದರು. ಪಾರ್ಥ ಚಟರ್ಜಿ ಅವರನ್ನು ಸಚಿವ ಸಂಪುಟದಿಂದ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಬೇಕು. ಅವರನ್ನು ಉಚ್ಚಾಟಿಸಬೇಕು. ಈ ಹೇಳಿಕೆಯನ್ನು ತಪ್ಪೆಂದು ಪರಿಗಣಿಸಿದರೆ, ನನ್ನನ್ನು ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲು ಪಕ್ಷಕ್ಕೆ ಎಲ್ಲ ಹಕ್ಕಿದೆ. ಎಂದು ಇಂದು, ಗುರುವಾರ ಟ್ವೀಟ್‌ ಮಾಡಿದ್ದರು.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

ಪಾರ್ಥ ಚಟರ್ಜಿ ಅವರ ಸಹಾಯಕಿಯ ಎರಡನೇ ಮನೆಯಿಂದ ಜಾರಿ ನಿರ್ದೇಶನಾಲಯವು(ಇ.ಡಿ) ಬುಧವಾರ ಇನ್ನೂ 28.90 ಕೋಟಿ ರೂಪಾಯಿ ನಗದು, 5 ಕೆಜಿಗೂ ಹೆಚ್ಚು ಚಿನ್ನ ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ಹಿಂದೆ ಇದೇ ಸಹಾಯಕಿ ಮನೆಯಲ್ಲಿ 21.90 ಕೋಟಿ ನಗದು, 56 ಲಕ್ಷ ವಿದೇಶಿ ಕರೆನ್ಸಿ ಮತ್ತು 76 ಲಕ್ಷ ಮೌಲ್ಯದ ಚಿನ್ನ ಪತ್ತೆಯಾಗಿತ್ತು.
ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನದಂತೆ ಸಿಬಿಐ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ಶಿಫಾರಸಿನ ಮೇರೆಗೆ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಗ್ರೂಪ್-ಸಿ ಮತ್ತು ಡಿ ಸಿಬ್ಬಂದಿ ಮತ್ತು ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇ.ಡಿ ಹಗರಣದಲ್ಲಿ ಹಣದ ಜಾಡು ಹಿಡಿಯುತ್ತಿದೆ. ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ಅಕ್ರಮಗಳು ನಡೆದಿವೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement