₹ 50 ಕೋಟಿ ಹಣ, 5 ಕೆಜಿ ಚಿನ್ನ : ಪಶ್ಚಿಮ ಬಂಗಾಳದ ಸಚಿವರ ಆಪ್ತ ಸಹಾಯಕಿ ಮನೆಯಲ್ಲಿ ಹಣದ ಪರ್ವತವೇ ಪತ್ತೆ….!

ಕೋಲ್ಕತ್ತಾ: ಶಾಲೆಯ ಉದ್ಯೋಗ ಹಗರಣಕ್ಕೆ ಸಂಬಂಧಿಸಿದ ದಾಳಿ ವೇಳೆ ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಕೋಲ್ಕತ್ತಾದ ಎರಡನೇ ಫ್ಲಾಟ್‌ನಿಂದ ಸುಮಾರು ₹ 29 ಕೋಟಿ ನಗದು ಮತ್ತು ಐದು ಕಿಲೋ ಗ್ರಾಂಗಳಷ್ಟು ಚಿನ್ನಾಭರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
18 ಗಂಟೆಗಳ ಸುದೀರ್ಘ ದಾಳಿ ಕಾರ್ಯಾಚರಣೆ ಮುಗಿಸಿದ ನಂತರ ತನಿಖಾ ಸಂಸ್ಥೆ ಅಧಿಕಾರಿಗಳು ಇಂದು, ಗುರುವಾರ ಮುಂಜಾನೆ ಕೋಲ್ಕತ್ತಾದ ಬೆಲ್ಘಾರಿಯಾ ಪ್ರದೇಶದಲ್ಲಿರುವ ಅರ್ಪಿತಾ ಮುಖರ್ಜಿ ಅವರ ಮನೆಯಿಂದ 10 ಟ್ರಂಕ್‌ಗಳೊಂದಿಗೆ ತೆರಳಿದ್ದಾರೆ.
ಅರ್ಪಿತಾ ಮುಖರ್ಜಿ ಅವರ ಎರಡನೇ ಫ್ಲಾಟ್‌ನಿಂದ ವಶಪಡಿಸಿಕೊಂಡ ನಿಖರವಾದ ಹಣವನ್ನು ತಿಳಿಯಲು ಇಡಿ ಅಧಿಕಾರಿಗಳು ಮೂರು ನೋಟು ಎಣಿಕೆ ಯಂತ್ರಗಳನ್ನು ಬಳಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅರ್ಪಿತಾ ಮುಖರ್ಜಿ ಅವರ ಮತ್ತೊಂದು ಮನೆಯಲ್ಲಿ ₹ 21 ಕೋಟಿ ನಗದು ಪತ್ತೆಯಾದ ಒಂದು ದಿನದ ನಂತರ ಸಚಿವ ಪಾರ್ಥ ಚಟರ್ಜಿ ಮತ್ತು ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಜುಲೈ 23 ರಂದು ಜಾರಿ ನಿರ್ದೇಶನಲಾಯದವರು ಬಂಧಿಸಿದರು.
ಕಳೆದ ವಾರ ನಡೆದ ದಾಳಿಯ ವೇಳೆ ತನಿಖಾ ಸಂಸ್ಥೆ ಅಧಿಕಾರಿಗಳು ಮುಖರ್ಜಿ ಅವರ ನಗರದ ಇನ್ನೊಂದು ಫ್ಲಾಟ್‌ನಿಂದ , ಅಪಾರ ಪ್ರಮಾಣದ ವಿದೇಶಿ ವಿನಿಮಯ ಮತ್ತು ₹ 2 ಕೋಟಿ ಮೌಲ್ಯದ ಚಿನ್ನದ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದರು. ತನಿಖೆಯಲ್ಲಿ ನಿರ್ಣಾಯಕ ಸುಳಿವು ಒದಗಿಸುವ ಸುಮಾರು 40 ಪುಟಗಳ ಟಿಪ್ಪಣಿಗಳಿದ್ದ ಡೈರಿಯನ್ನು ಅವರು ಪತ್ತೆ ಹಚ್ಚಿದ್ದರು. ಇದುವರೆಗೆ, ಅರ್ಪಿತಾ ಮುಖರ್ಜಿಯವರ ಎರಡು ಮನೆಗಳಿಂದ ₹ 50 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

ಪಶ್ಚಿಮ ಬಂಗಾಳದಲ್ಲಿ ಶಾಲಾ ಉದ್ಯೋಗ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ಇಡಿ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಯಿತು. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟದ ಹಿರಿಯ ಸಚಿವ ಮತ್ತು ಅವರ ಆಪ್ತ ಸಹಾಯಕ ಪಾರ್ಥ ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳ ಅಕ್ರಮ ನೇಮಕಾತಿಗಳಲ್ಲಿ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಣವನ್ನು ವರ್ಗಾವಣೆಗಾಗಿ ಮತ್ತು ಕಾಲೇಜುಗಳಿಗೆ ಮಾನ್ಯತೆ ಪಡೆಯಲು ಸಹಾಯಕ್ಕಾಗಿ ಪಡೆದ ಕಿಕ್‌ಬ್ಯಾಕ್ ಎಂದು ಅರ್ಪಿತಾ ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪಾರ್ಥ ಅವರು ನನ್ನ ಮನೆ ಮತ್ತು ಇನ್ನೊಬ್ಬ ಮಹಿಳೆಯ ಮನೆಯನ್ನು ಅವರ ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಆ ಮಹಿಳೆ ಕೂಡ ಅವರ ಆಪ್ತರಾಗಿದ್ದಾರೆ ಎಂದು ಅರ್ಪಿತಾ ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ನಿನ್ನೆ, ತನಿಖಾ ಸಂಸ್ಥೆಯು ತೃಣಮೂಲ ಕಾಂಗ್ರೆಸ್ ಶಾಸಕ, ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಮಾಣಿಕ್ ಭಟ್ಟಾಚಾರ್ಯ ಅವರನ್ನೂ ಪ್ರಶ್ನಿಸಿದೆ.
ಚಟರ್ಜಿಯವರ ಬಂಧನದ ನಂತರ ತೀವ್ರ ಆಕ್ರೋಶ ಎದಯುರಿಸುತ್ತಿರುವ ಎದುರಿಸುತ್ತಿರುವ ಮಮತಾ ಬ್ಯಾನರ್ಜಿ ಅವರು ಕಳೆದ ವಾರ ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲ ಮತ್ತು ಬಂಧಿತ ಸಚಿವರನ್ನು ತಪ್ಪಿತಸ್ಥರೆಂದು ಸಾಬೀತಾದರೆ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದರು..
ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ, ಅವರು ಶಿಕ್ಷೆಗೆ ಒಳಗಾಗಬೇಕು, ಆದರೆ ನನ್ನ ವಿರುದ್ಧದ ಯಾವುದೇ ದುರುದ್ದೇಶಪೂರಿತ ಪ್ರಚಾರವನ್ನು ನಾನು ಖಂಡಿಸುತ್ತೇನೆ. ಸತ್ಯವು ಹೊರಬರಬೇಕು, ಆದರೆ ಅದು ಸಮಯದ ಚೌಕಟ್ಟಿನೊಳಗೆ ಬರಬೇಕು ಎಂದು ಅವರು ಹೇಳಿದ್ದರು..

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement