ಒಂದೇ ಸಿರಿಂಜ್‌ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ಆರೋಗ್ಯ ಕಾರ್ಯಕರ್ತ…!

ಸಾಗರ (ಮಧ್ಯಪ್ರದೇಶ) : ಮಧ್ಯಪ್ರದೇಶದ ಸಾಗರದಲ್ಲಿ ಬುಧವಾರ ಒಂದೇ ಸಿರಿಂಜ್ ಬಳಸಿ ಮೂವತ್ತು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದ್ದು, ಇದು ಸಿರಿಂಜ್ ಕಾರ್ಯವಿಧಾನದ ಆಘಾತಕಾರಿ ಉಲ್ಲಂಘನೆಯಾಗಿದೆ.
ಲಸಿಕೆ ನೀಡಿದ ಜಿತೇಂದ್ರ ಎಂಬವರು ಅಧಿಕಾರಿಗಳು ಕೇವಲ ಒಂದು ಸಿರಿಂಜ್ ಅನ್ನು ಕಳುಹಿಸಿದ್ದಾರೆ ಮತ್ತು ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲು “ಇಲಾಖೆಯ ಮುಖ್ಯಸ್ಥರು” ತನಗೆ ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಪೋಷಕರು ರೆಕಾರ್ಡ್ ಮಾಡಿರುವ ವೀಡಿಯೊದಲ್ಲಿ ಜಿತೇಂದ್ರ ಅವರಿಗೆ ಆ ಮಹಿಳಾಧಿಕಾರಿಯ ಹೆಸರು ಗೊತ್ತಿಲ್ಲ ಎಂದು ಹೇಳಿದ್ದಾರೆ. 1990ರ ದಶಕದಿಂದಲೂ ಎಚ್‌ಐವಿ ಹರಡಲು ಆರಂಭಿಸಿದಾಗಿನಿಂದ ಬಳಸಿ ಬಿಸಾಡಬಹುದಾದ ಸಿರಿಂಜ್‌ಗಳು (Disposable syringes) ಒಂದೇ ಸಲ ಬಳಸಲು ಮಾತ್ರ ನಿಗದಿ ಮಾಡಲಾಗಿದೆ.
ಸಾಮಗ್ರಿಗಳನ್ನು ತಲುಪಿಸಿದ ವ್ಯಕ್ತಿ ಒಂದೇ ಸಿರಿಂಜ್ ನೀಡಿದ್ದಾನೆ” ಎಂದು ಆತಂಕಗೊಂಡ ಪೋಷಕರು ಸ್ಥಳದಲ್ಲೇ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಜಿತೇಂದ್ರ ಹೇಳುವುದನ್ನು ಕೇಳಬಹುದಾಗಿದೆ.

ಒಂದು ಸಿರಿಂಜ್ ಅನ್ನು ಹಲವಾರು ಜನರಿಗೆ ಚುಚ್ಚುಮದ್ದು ಮಾಡಲು ಬಳಸಬಾರದು ಎಂದು ನಿಮಗೆ ತಿಳಿದಿದೆಯೇ ಎಂದು ಕೇಳಿದಾಗ, ಜಿತೇಂದ್ರ ಅವರು, ಅದು ನನಗೆ ತಿಳಿದಿದೆ. ಅದಕ್ಕಾಗಿಯೇ ನಾನು ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ನಾನು ಅವರನ್ನು ಕೇಳಿದೆ ಮತ್ತು ಅವರು ‘ಹೌದು’ ಎಂದು ಹೇಳಿದರು. ಇದು ಹೇಗೆ ನನ್ನ ತಪ್ಪು? ನಾನು ಏನು ಮಾಡಬೇಕೆಂದು ಸೂಚನೆ ನೀಡಿದರೋ ಅದನ್ನು ಮಾಡಿದ್ದೇನೆ ಎಂದು ಜಿತೇಂದ್ರ ಹೇಳಿದ್ದಾರೆ.
ಕೇಂದ್ರ ಸರ್ಕಾರದ “ಒಂದು ಸೂಜಿ, ಒಂದು ಸಿರಿಂಜ್, ಒಂದು ಬಾರಿ” ಪ್ರತಿಜ್ಞೆಯನ್ನು ನಿರ್ಲಕ್ಷ ಮತ್ತು ನಿರ್ದಾಕ್ಷಿಣ್ಯವಾಗಿ ಉಲ್ಲಂಘಿಸಿದ್ದಕ್ಕಾಗಿ ಸಾಗರ ಜಿಲ್ಲಾಡಳಿತ ಜಿತೇಂದ್ರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದೆ. ಲಸಿಕೆ ಮತ್ತು ಅಗತ್ಯವಿರುವ ಇತರ ವಸ್ತುಗಳನ್ನು ಕಳುಹಿಸುವ ಉಸ್ತುವಾರಿ ವಹಿಸಿದ್ದ ಜಿಲ್ಲಾ ಲಸಿಕೆ ಅಧಿಕಾರಿ ಡಾ.ರಾಕೇಶ್ ರೋಷನ್ ವಿರುದ್ಧವೂ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಳಿಗ್ಗೆ 2:30ಕ್ಕೆ ಸ್ನೇಹಿತನಿಗೆ ಸಂದೇಶ, 45 ನಿಮಿಷ ಸಿಪಿಆರ್‌ʼ... : ನಾನಾ ಪಾಟೇಕರ್ ಅಂತಿಮ ಕ್ಷಣಗಳು...

ಸಾಗರ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಈ ಘಟನೆ ನಡೆದಿದೆ. ಒಂದೇ ಸಿರಿಂಜ್‌ನಿಂದ ಮಕ್ಕಳಿಗೆ ಲಸಿಕೆ ಹಾಕುತ್ತಿರುವುದನ್ನು ಗಮನಿಸಿದ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಭಾರಿ ಜಿಲ್ಲಾಧಿಕಾರಿ ಕ್ಷಿತಿಜ್ ಸಿಂಘಾಲ್ ಅವರು ತಕ್ಷಣ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿಗಳಿಗೆ ತಪಾಸಣೆ ನಡೆಸುವಂತೆ ಸೂಚಿಸಿದರು. ಆದರೆ ತಪಾಸಣೆ ವೇಳೆ ಜಿತೇಂದ್ರ ಹಾಜರಿರಲಿಲ್ಲ. ಘಟನೆ ಬೆಳಕಿಗೆ ಬಂದಾಗಿನಿಂದ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಜನವರಿ 2021 ರಲ್ಲಿ ಕೋವಿಡ್‌-19 ವ್ಯಾಕ್ಸಿನೇಷನ್ ಪ್ರಾರಂಭವಾಗುವ ಒಂದು ತಿಂಗಳ ಮೊದಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಟ್ಟುನಿಟ್ಟಾದ “ಒಂದು ಸೂಜಿ, ಒಂದು ಸಿರಿಂಜ್, ಒಂದೇ ಬಾರಿ” ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಆದೇಶ ಮಾಡಿದೆ.
ಇದೇ ರೀತಿಯ ಪ್ರೋಟೋಕಾಲ್‌ಗಳನ್ನು ಅನುಸರಿಸುವಂತೆ WHO ಮತ್ತು UNICEF ಸೇರಿದಂತೆ ಅಂತರಾಷ್ಟ್ರೀಯ ಏಜೆನ್ಸಿಗಳು ಸಲಹೆ ನೀಡಿವೆ.

ಪ್ರಮುಖ ಸುದ್ದಿ :-   ಭಾರತದ ಐಟಿ ಕಂಪನಿಗಳಿಗೆ ಅಮೆರಿಕದಿಂದ ಬಿಗ್ ಶಾಕ್ : ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement