ರೈಲ್ವೆ ನಿಲ್ದಾಣದಲ್ಲಿ ವೃದ್ಧನಿಗೆ ಒದ್ದು ಕಾಲು ಹಿಡಿದೆಳೆದು ರೈಲು ಹಳಿ ಬಳಿ ತಲೆಕೆಳಗಾಗಿ ನೇತು ಹಾಕಿದ ಪೊಲೀಸ್ | ದೃಶ್ಯ ಸಿಸಿಟಿವಿಯಲ್ಲಿ ಸೆರೆ | ಪೊಲೀಸ್ ಪೇದೆ ಅಮಾನತು

ಮಧ್ಯಪ್ರದೇಶದ ಜಬಲ್‌ಪುರ ರೈಲು ನಿಲ್ದಾಣದಲ್ಲಿ ಪೊಲೀಸ್ ಪೇದೆಯೊಬ್ಬರು ವೃದ್ಧರೊಬ್ಬರ ಮೇಲೆ ಅಮಾನುಷವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೃದ್ಧನನ್ನು ಥಳಿಸಿ ಎಳೆದೊಯ್ಯುವ ವಿಡಿಯೋ ಬೆಳಕಿಗೆ ಬಂದ ನಂತರ ರೇವಾ ಜಿಲ್ಲೆಯ ಪೋಲೀಸನನ್ನು ಅಮಾನತುಗೊಳಿಸಲಾಗಿದೆ.
ಮೂಲಗಳ ಪ್ರಕಾರ, ವೃದ್ಧರು ಕುಡಿದ ಅಮಲಿನಲ್ಲಿ ನಿಲ್ದಾಣದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು.
30 ಸೆಕೆಂಡ್‌ಗಳ ವಿಡಿಯೋದಲ್ಲಿ ಅನಂತ್ ಮಿಶ್ರಾ ಎಂದು ಗುರುತಿಸಲಾಗಿರುವ ಪೊಲೀಸ್ ಪೇದೆ, ವೃದ್ಧನ ಮುಖಕ್ಕೆ ಒದ್ದು ಗುದ್ದುವುದನ್ನು ಕಾಣಬಹುದು.

advertisement

ನಂತರ ಕಾನ್ಸ್‌ಟೇಬಲ್ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಆ ವ್ಯಕ್ತಿ ಕಾಲುಗಳನ್ನು ಹಿಡಿದೆಳೆದು ಮತ್ತು ರೈಲ್ವೆ ಹಳಿ ಮೇಲೆ ಪಕ್ಕದಲ್ಲಿ ತಲೆ ಕೆಳಗು ಮಾಡಿ ಹಿಡಿದಿರುವುದನ್ನು ವೀಡಿಯೊ ತೋರಿಸುತ್ತದೆ. ನಿಂತ ರೈಲಿನೊಳಗಿದ್ದ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಪೊಲೀಸ್‌ ಪೇದೆ ವೃದ್ಧನಿಗೆ ಪದೇ ಪದೇ ಒದೆಯುವುದನ್ನು ತೋರಿಸುತ್ತದೆ.
ಪೊಲೀಸ್ ಠಾಣೆಗೆ ಕಾನ್‌ಸ್ಟೆಬಲ್ ಅನಂತ್ ಮಿಶ್ರಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪ್ರತಿಮಾ ಪಟೇಲ್ ತಿಳಿಸಿದ್ದಾರೆ.

ರೈಲ್ವೇ ನಿಲ್ದಾಣದಲ್ಲಿ ಕಾನ್‌ಸ್ಟೆಬಲ್ ವೃದ್ಧನಿಗೆ ನಿರಂತರವಾಗಿ ಥಳಿಸಿದರೂ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ನಿಂತು ಇಡೀ ಕೃತ್ಯವನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಆ ವ್ಯಕ್ತಿಯನ್ನು ಥಳಿಸುವುದನ್ನು ತಡೆಯಲು ಯಾರೂ ಮುಂದಾಗಲಿಲ್ಲ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದ್ದು, ಬಹುತೇಕರು ಪೊಲೀಸ್ ಪೇದೆಯ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಓದಿರಿ :-   ಭಾರತದ ವಿಭಜನೆ ಕುರಿತಾದ ವೀಡಿಯೊ ಬಿಡುಗಡೆ ಮಾಡಿ ನೆಹರು ದೂಷಿಸಿದ ಬಿಜೆಪಿ: ತಿರುಗೇಟು ನೀಡಿದ ಕಾಂಗ್ರೆಸ್‌

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement