ಈ ಶಾಲೆಯಲ್ಲಿ ಸಾಮೂಹಿಕ ಹಿಸ್ಟೀರಿಯಾ…ವಿದ್ಯಾರ್ಥಿಗಳು ಕೂಗುತ್ತಾರೆ, ಕಿರುಚುತ್ತಾರೆ, ತಲೆ ಬಡಿದುಕೊಳ್ಳುತ್ತಾರೆ | ವೀಕ್ಷಿಸಿ

ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಲ್ಲಿ “ಮಾಸ್ ಹಿಸ್ಟೀರಿಯಾ” ಪ್ರಕರಣ ವರದಿಯಾದ ಮೂರು ವರ್ಷಗಳ ನಂತರ, ಇತ್ತೀಚೆಗೆ ಬಾಗೇಶ್ವರ ಜಿಲ್ಲೆಯಲ್ಲಿ ಇಂತಹುದೇ ಘಟನೆ ಸಂಭವಿಸಿದೆ. ಬಾಗೇಶ್ವರದ ರೈಖುಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ಕಿರುಚಲು ಮತ್ತು ತಲೆ ಬಡಿದುಕೊಳ್ಳಲು ಪ್ರಾರಂಭಿಸಿದರು ಎಂದು ನ್ಯೂಸ್ 18 ವರದಿ ಮಾಡಿದೆ.
ವಿದ್ಯಾರ್ಥಿಗಳ ನಡವಳಿಕೆಯಲ್ಲಿನ ಹಠಾತ್ ಬದಲಾವಣೆ ಮಂಗಳವಾರ ವರದಿಯಾಗಿದೆ. ಗುರುವಾರ ಮತ್ತೆ ಅಂತಹದ್ದೇ ಘಟನೆ ನಡೆದಿದೆ ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ದೇವಿ ಅವರು ನ್ಯೂಸ್ 18 ಗೆ ತಿಳಿಸಿದ್ದಾರೆ.
ಅವರು ಅಳುತ್ತಿದ್ದರು, ಕೂಗುತ್ತಿದ್ದರು, ನಡುಗುತ್ತಿದ್ದರು ಮತ್ತು ವಿನಾಕಾರಣ ತಲೆ ಬಡಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ನಾವು ಪೋಷಕರನ್ನು ಕರೆದಿದ್ದೇವೆ, ಅವರು ಸ್ಥಳೀಯ ಅರ್ಚಕರನ್ನು ಕರೆಸಿದರು ಮತ್ತು ಪರಿಸ್ಥಿತಿ ಹತೋಟಿಗೆ ಬಂದಿತು” ಎಂದು ವಿಮಲಾ ದೇವಿ ಹೇಳಿದರು.
ಗುರುವಾರ ಜಿಲ್ಲಾಡಳಿತ ಹಾಗೂ ವೈದ್ಯರ ತಂಡ ಈ ಸರ್ಕಾರಿ ಶಾಲೆಗೆ ಭೇಟಿ ನೀಡಿತ್ತು. ವಿದ್ಯಾರ್ಥಿಗಳ ಹಠಾತ್ ವರ್ತನೆಯ ಬದಲಾವಣೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.

ಇಂದೂ ಸಹ, ಇಲಾಖಾ ಅಧಿಕಾರಿಗಳು ಇಲ್ಲಿರುವಾಗ, ಕೆಲವು ವಿದ್ಯಾರ್ಥಿಗಳು ಅದೇ ರೀತಿ ವರ್ತಿಸಿದರು. ಶಾಲಾ ಆವರಣದೊಳಗೆ ನಾವು ಪೂಜೆ ಮಾಡಬೇಕೆಂದು ಪೋಷಕರು ಒತ್ತಾಯಿಸಿದರು ಎಂದು ವಿಮಲಾ ದೇವಿ ಹೇಳಿದ್ದಾರೆ ಎಂದು ನ್ಯೂಸ್ 18 ಉಲ್ಲೇಖಿಸಿದೆ.
ಜಿಲ್ಲಾ ಪಂಚಾಯತ ಸದಸ್ಯ ಚಂದನ್ ರಾವತ್ ಮಾತನಾಡಿ, ಈ ಹಿಂದೆ ಜಿಲ್ಲೆಯ ಇತರ ಕೆಲವು ಶಾಲೆಗಳಲ್ಲಿ ಇಂತಹ ಮಾಸ್ ಹಿಸ್ಟೀರಿಯಾ ಪ್ರಕರಣಗಳು ವರದಿಯಾಗಿದ್ದವು. ಚಕ್ರತಾ ಮತ್ತು ಉತ್ತರಕಾಶಿಯ ಕೆಲವು ಶಾಲೆಗಳಿಂದ ಇದೇ ರೀತಿಯ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ಡೆಹ್ರಾಡೂನ್ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಮುಕುಲ್ ಸತಿ ತಿಳಿಸಿದರು.
ವಿದ್ಯಾರ್ಥಿಗಳಲ್ಲಿನ ಭಯವನ್ನು ನಿವಾರಿಸುವ ಪ್ರಯತ್ನದಲ್ಲಿ ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ವೈದ್ಯಕೀಯ ತಂಡವನ್ನು ರಚಿಸಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ತಿಳಿಸಿದರು.

ಮೂರು ವರ್ಷಗಳ ಹಿಂದೆ, ಬಂಜಾಬ್‌ಗಢದ ಶಾಲೆಯೊಂದರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು, ಅಲ್ಲಿ ವಿದ್ಯಾರ್ಥಿನಿಯರು ತರಗತಿಯ ಮಧ್ಯೆ ಹಿಂಸಾತ್ಮಕವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಆ ತಿಂಗಳಲ್ಲಿ ನಡೆದ ಎರಡನೇ ಪ್ರಕರಣ ಇದಾಗಿತ್ತು.
ನಂತರ ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆ ಮತ್ತು ಕೌನ್ಸೆಲಿಂಗ್‌ಗೆ ಒಳಪಡಿಸಲಾಯಿತು. ವಿದ್ಯಾರ್ಥಿನಿಯರ ಕೌನ್ಸೆಲಿಂಗ್‌ನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಬಾಲಕಿಯರು ತಮ್ಮ ಸಹಪಾಠಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು. ಅವರ ವೈದ್ಯಕೀಯ ಪರೀಕ್ಷೆಯು ಬಾಲಕಿಯರಿಗೆ ಅಪೌಷ್ಟಿಕತೆ, ಕಳಪೆ ದೃಷ್ಟಿ ಮತ್ತು ಅತ್ಯಂತ ಉದ್ವಿಗ್ನತೆಯನ್ನು ತೋರಿಸಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಭಾರತದ ಐಟಿ ಕಂಪನಿಗಳಿಗೆ ಅಮೆರಿಕದಿಂದ ಬಿಗ್ ಶಾಕ್ : ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement