ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಹೊನ್ನಾವರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಒಗ್ಗಟ್ಟಿಲ್ಲ. ಜಡತ್ವ ಕಾಡುತ್ತಿದೆ. ಜಡತ್ವ ತೊರೆದು ಜಿಲ್ಲೆಯ ಹಿತಕ್ಕಾಗಿ ಸುಸಜ್ಜಿತ ಆಸ್ಪತ್ರೆ ಬೇಕೆಂದು ಹೋರಾಟಕ್ಕಿಳಿದ ಜಿಲ್ಲೆಯ ಯುವಕರ ಬೆನ್ನು ತಟ್ಟಿ ಬೆಂಬಲಿಸಿ ಎಂದು ಸಾಹಿತಿ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ.| ಎನ್ ಆರ್ ನಾಯಕ್ ಕರೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಕ್ತ ಸ್ಥಳದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಸಂಘಟನಾ ಒಕ್ಕೂಟ ಮತ್ತು ಸಾರ್ವಜನಿಕರ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಮೌನವಾಗಿ ಸಹಿಸಿಕೊಂಡಿದ್ದು ಸಾಕು, ಮೈ ಕೊಡವಿ ಎದ್ದು ನಿಂತು ನಮ್ಮ ಹಕ್ಕಿಗಾಗಿ ಹೋರಾಡೋಣ ಎಮ್ಸ್ ಮಾದರಿಯ ಆಸ್ಪತ್ರೆ ಜಿಲ್ಲೆಯಲ್ಲಿ ನಿರ್ಮಾಣ ಆಗುವವರೆಗೆ ಹೋರಾಟದ ಪಣ ತೊಡಬೇಕು. ಹಿರಿಯರು ರಾಜಕೀಯದಲ್ಲಿ ಹಿಂದೆ ಸರಿದು ಯುವ ಉತ್ಸಾಹಿಗಳಿಗೆ ಅವಕಾಶ ನೀಡಬೇಕು. ಯುವಕರು ಜಿಲ್ಲೆ ಅವಶ್ಯಕತೆಯ ಕುರಿತು ಹಕ್ಕೊತ್ತಾಯ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಕಾರಣವಾಗಲಿ ಎಂದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣ ಪಂಚಾಯತ ಆವರಣದ  ಮಹಾತ್ಮಾ ಗಾಂಧಿ ಪ್ರತಿಮೆಗೆ ಹೂ ಹಾರ ಸಮರ್ಪಿಸಿದ ನಂತರ ಹಿರಿಯ ವಕೀಲ ಡಿ.ಎ ಕಾಮತ್‌ ಪ್ರತಿಭಟನಾ ಮೆರವಣಿಗೆ ಚಾಲನೆ ನೀಡಿದರು.

ಉತ್ತರ ಕನ್ನಡ ಜಿಲ್ಲೆ ಕರ್ನಾಟಕದ ಬಾರ್ಡೊಲಿ ಎಂದೇ ಹೆಸರಾಗಿದೆ. ಹೋರಾಟ, ಸಹನೆ, ತ್ಯಾಗ ನಾವು ಯಾರಿಂದಲೂ ಕಲಿಯುವ ಅವಶ್ಯಕತೆ ಇಲ್ಲ. ನಾಲ್ಕು ಮುಗ್ಧ ಜೀವಗಳು ಶಿರೂರ ಟೋಲ್ ಗೇಟ್‌ನಲ್ಲಿ ಜೀವ ಕಳೆದುಕೊಂಡಿವೆ. ಅವರನ್ನು ಅವಲಂಬಿಸಿದ ಮುಗ್ಧ ಕಂದಮ್ಮಗಳು ಮತ್ತು ಕುಟುಂಬ ದಿಕ್ಕೆಟ್ಟು ಕುಳಿತಿದೆ. ಇನ್ನಾದರೂ ಆಳುವವರು ಜಿಲ್ಲೆಯ ಜನರ ರಕ್ಷಣೆಗೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಆರಂಭಿಸುವ ಸಂಕಲ್ಪ ಮಾಡಬೇಕು ಎಂದು ಒತ್ತಾಯಿಸಿದರು. .
ಆರಂಭದಲ್ಲಿ ಪಟ್ಟಣ ಪಂಚಾಯತದ ಆವರಣದಲ್ಲಿರುವ ಮಹತ್ಮಾ ಗಾಂಧಿ ಪ್ರತಿಮೆಗೆ ಹೂವಿನ ಹಾರ ಸಮರ್ಪಿಸುವ ಮೂಲಕ ಹಿರಿಯ ವಕೀಲ ಡಿ.ಎ ಕಾಮತ್‌ ಅವರು ಪ್ರತಿಭಟನಾ ಮೆರವಣಿಗೆ ಚಾಲನೆ ನೀಡಿದರು. ಪ್ರತಿಭಟನಾ ಮೆರವಣಿಗೆಯು ಜಿಲ್ಲೆಗೊಂದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಬೇಕು ಎಂದು ಹಕ್ಕೊತ್ತಾಯದ ಘೋಷಣೆಗಳನ್ನು ಕೂಗುತ್ತ ತಹಶೀಲ್ದಾರ ಕಚೇರಿಗೆ ತೆರಳಿತು.
ಪ್ರಾಸ್ತಾವಿಕ ಮಾತನಾಡಿದ ಕುಮಟಾ ವಕೀಲ ಆರ್.ಜಿ ನಾಯ್ಕ, ಶಿರೂರ ಟೋಲಗೇಟ್ ಬಳಿ ಮೃತಪಟ್ಟವರು ಮನುಷ್ಯರೇ. ಅವರ ಜೀವಕ್ಕೂ ಬೆಇದೆ ಇದೆ. ಚಾಲಕನ ಮೇಲೆ ಮಾತ್ರ ಪ್ರಕರಣ ದಾಖಲಿಸದೇ ಟೋಲ್‌ಗೇಟ್ ಅಸಮರ್ಪಕ ನಿರ್ವಹಣೆ ಮಾಡಿದ ಗುತ್ತಿಗೆ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಮೃತರಿಗೆ ತಲಾ ೩೦ ಲಕ್ಷ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರವಾಗಿ ಪ್ರಾರಂಭಿಸಬೇಕು ಜಾತಿ, ಭಾಷೆ, ಧರ್ಮ, ಪಕ್ಷ ಮೀರಿ ಸಂಘಟಿತರಾಗಿ ಹೋರಾಟವನ್ನು ಆರಂಭಿಸಿದ್ದೇವೆ ಹಾಗೂ ಇದು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗುವ ವರೆಗೂ ಮುಂದುವರಿಯಬೇಕು ಎಂದು ಕರೆ ನೀಡಿದರು. .

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ
ಸಭೆಯಲ್ಲಿ ವಕೀಲರಾದ  ಕುಮಟಾದ ಆರ್.ಜಿ ನಾಯ್ಕ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್.ಸುಬ್ರಹ್ಮಣ್ಯ ಮಾತನಾಡಿ ಜಿಲ್ಲೆಯ ಜನರ ಮೌನ ಸಾಕು. ತಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜನ ಪ್ರತಿನಿಧಿಗಳ ಮೇಲೆ ಸರ್ಕಾರದ ಮೇಲೆ ಒತ್ತಡ ತರಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಸಂಘದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಎಮ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣದಿಂದ ಜಿಲ್ಲೆಯ ಜನರಿಗೆ, ಶ್ರಮಿಕರಿಗೆ ಅನುಕೂಲವಾಗಲಿದೆ ಎಂದರು.
ಗುತ್ತಿಗೆದಾರ ಮಂಜುನಾಥ ಎಲ್ ನಾಯ್ಕ, ಅಂಕೋಲಾ ಮಾತನಾಡಿ ಜಿಲ್ಲೆಯ ಜನರ ಭಾವನೆಗಳಿಗೆ ಸರ್ಕಾರ ಸ್ಪಂದಿಸಲಿ ಎಂದರು. ಸೂರಜ್ ನಾಯ್ಕ ಸೋನಿ ಕುಮಟಾ, ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ನಾಯ್ಕ ಬಾಡ, ಕಾಂಗ್ರೆಸ್ ಮುಖಂಡ ಜಗದೀಶ ತೆಂಗೇರಿ, ಪುಷ್ಪಾ ನಾಯ್ಕ, ಬಳ್ಕೂರ, ಜಿ.ಎನ್.ಗೌಡ ಕೊಡಾಣಿ, ಅಯ್ಯಪ್ಪ ನಾಯ್ಕ ಮಾವಿನಕುರ್ವಾ, ರಾಜು ಮಾಸ್ತಿ ಹಳ್ಳ, ರಾಜು ನಾಯ್ಕ, ಮಂಕಿ, ಮಾಜಿ ತಾ.ಪಂ ಸದಸ್ಯ ಮಹಾಲಕ್ಷ್ಮೀ ಗೌಡ, ಪರಮೇಶ್ವರಿ ಗೊಂಡ, ಅನಿತಾ ಶೇಟ್ ಇನ್ನಿತರರು ಮಾತನಾಡಿದರು. ಮಂಜುನಾಥ ಗೌಡ ಸ್ವಾಗತಿಸಿದರು. ಶಂಕರ ಗೌಡ ನಿರೂಪಿಸಿದರು.
ಹೋರಾಟದಲ್ಲಿ ಕರ್ನಾಟಕ ಕ್ರಾಂತಿ ರಂಗ, ಜಯ ಕರ್ನಾಟಕ ಸಂಘ, ತಾಲೂಕು ಒಕ್ಕಲಿಗರ ಯುವ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಸ್ವಾಭಿಮಾನ ಕರ್ನಾಟಕ ಬಳಗ, ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ, ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಶನ್, ಬ್ರಹ್ಮಶ್ರೀ ನಾರಾಯಣ ಗುರು ಪರಿಪಾಲನಾ ಸಂಘ, ಜಿಲ್ಲಾ ಛಾಯಾಚಿತ್ರ ಗ್ರಾಹಕರ ಸಂಘ ಪಾಲ್ಗೊಂಡಿದ್ದವು.
ಜಿಲ್ಲೆಗೆ ಏಮ್ಸ್ ಮಾದರಿಯ ಆಸ್ಪತ್ರೆ ಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಯ ಪ್ರಮುಖರಾದ ಜ್ಞಾನೇಶ್ವರ ಎಂ ನಾಯ್ಕ, ರಾಜೇಶ ನಾಯ್ಕ ಹೊನ್ನಾವರ, ಕೇಶವ ಗೌಡ ಕಾಸರಕೋಡ, ಶ್ರೀರಾಮ ಜಾದುಗಾರ, ಗಣೇಶ ನಾಯ್ಕ ನಗರೆ, ಸಚಿನ್ ನಾಯ್ಕ, ಧನಂಜಯ ನಾಯ್ಕ ರಾಯಲಕೇರಿ, ಜಗದೀಶ ನಾಯ್ಕ, ರಾಜು ಮಾಸ್ತಿ ಹಳ್ಳೇರ, ಮಣಿಕಂಠ ನಾಯ್ಕ, ಕೆ.ಎನ್.ಮಂಜು ಹಾಗೂ ಇತರರು ಉಪವಾಸ ಕುಳಿತು ಮನವಿ ಸ್ವೀಕರಿಸಲು ಉಪ ವಿಭಾಗಾಧಿಕಾರಿಗಳೇ ಬರಬೇಕೆಂದು ಒತ್ತಾಯಿಸಿ ತಹಶೀಲ್ದಾರ ಕಚೇರಿ ಎದುರು ಉಪವಾಸ ಮುಂದುವರೆಸಿದರು.
ಪ್ರತಿಭಟನಾಕಾರರು ಸಭೆ ನಡೆಸುವ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಶರೀರ ಒಯ್ಯುತ್ತಿದ್ದ ಅಂಬುಲೆನ್ಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೃತರ ಸಂಬಂಧಿಯನ್ನು ಕರೆದೊಯ್ಯಲು ಬಂದಿದ್ದು ಕಾಕತಾಳೀಯವಾಗಿತ್ತು. ಆಗ ಪ್ರತಿಭಟನಾಕಾರರು ನ್ಯಾಯಕ್ಕಾಗಿ ಘೋಷಣೆ ಕೂಗಿದರು ಹಾಗೂ ಸಾಂಕೇತಿಕ ಮೌನ ಆಚರಿಸಿ ಶವ ಇದ್ದ ಅಂಬುಲೆನ್ಸ್ ಕಳುಹಿಸಿಕೊಟ್ಟರು.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

 

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement