ಕಾಮನ್​ವೆಲ್ತ್ ಗೇಮ್ಸ್​​-2022: ವೇಟ್‌ಲಿಫ್ಟಿಂಗ್​ನಲ್ಲಿ ಕಂಚಿನ ಪದಕ ಗೆದ್ದ ಕನ್ನಡಿಗ ಗುರುರಾಜ್​​ ಪೂಜಾರಿ, ಭಾರತಕ್ಕೆ ಎರಡನೇ ಪದಕ,

ಬರ್ಮಿಂಗ್​ಹ್ಯಾಮ್​​(ಯುಕೆ): ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ವೇಟ್​ ಲಿಫ್ಟಿಂಗ್​​ನಲ್ಲಿ ಕನ್ನಡಿಗರಾದ ಪಿ. ಗುರುರಾಜ್​​ ಪೂಜಾರಿ ಅವರು ಶನಿವಾರ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ.

61 ಕೆಜಿ ವಿಭಾಗದಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಗುರುರಾಜ್​ ಪೂಜಾರಿ ಈ ಸಾಧನೆ ಮಾಡಿದ್ದಾರೆ. 118+151 ಕೆಜಿ ಭಾರ ಎತ್ತುವ ಮೂಲತಃ ಕುಂದಾಪುರದವರಾಗಿರುವ ಗುರುರಾಜ್​ ಪೂಜಾರಿಯವರು ಈ ಸಾಧನೆ ಮಾಡಿದ್ದಾರೆ. ಫೈನಲ್​​ನಲ್ಲಿ ಕೆನಡಾದ ಯೂರಿ ಸಿಮರ್ಡ್ ವಿರುದ್ಧ ಸೆಣಸಾಡಿದರು. ಈ ಹಿಂದೆ 2018ರಲ್ಲಿ ಗೋಲ್ಡ್​ ಕೋಸ್ಟ್ ಗೇಮ್ಸ್​​ನಲ್ಲಿಯೂ ಪದಕ ಗೆದ್ದಿದ್ದರು.

ಗುರುರಾಜ್​​ ಅವರು ತಮ್ಮ ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ 114 ಕೆಜಿ ಮತ್ತು ಎರಡನೇ ಪ್ರಯತ್ನದಲ್ಲಿ 118 ಕೆಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ, ಭಾರತೀಯ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ತಮ್ಮ ಮೂರನೇ ಪ್ರಯತ್ನದಲ್ಲಿ 151 ಕೆಜಿ ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಮಲೇಷ್ಯಾದ ಅಜ್ನಿಲ್ ಬಿನ್ ಬಿಡೀನ್ ಮುಹಮ್ಮದ್ 61 ಕೆಜಿಯ ವೇಟ್ ಲಿಫ್ಟಿಂಗ್​ನಲ್ಲಿ ಚಿನ್ನದ ಪದಕ ಪಡೆದರೆ ಪಪುವಾ ನ್ಯೂಗಿನಿಯಾದ ಮೋರಿಯಾ ಬಾರು ಬೆಳ್ಳಿ ಪದಕ ಪಡೆದರು.
ವೇಟ್ ಲಿಫ್ಟಿಂಗ್​ನಲ್ಲಿ ಈಗಾಗಲೇ ಭಾರತದ ಸಂಕೇತ್​ ಸರ್ಗರ್​ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದು, ಈ ಮೂಲಕ ಭಾರತದ ಪದಕಗಳ ಪಟ್ಟಿ ತೆರೆದಿದ್ದಾರೆ. ಗುರುರಾಜ್ ಪೂಜಾರಿ ವೇಟ್‌ ಲಿಂಪ್ಟಿಂಗ್‌ನಲ್ಲಿ ಎರಡನೇ ಪದಕ ತಂದುಕೊಟಿದ್ದಾರೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement