ಸಿಇಟಿ ಫಲಿತಾಂಶ ಪ್ರಕಟ: ವಿವಿಧ ಕೋರ್ಸ್‌ಗಳ ಟಾಪರ್ಸ್​ ಪಟ್ಟಿ ಇಲ್ಲಿದೆ

ಬೆಂಗಳೂರು : ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ಕಳೆದ ತಿಂಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟಾರೆ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಸಿಇಟಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ, ಇಂಜಿನಿಯರಿಂಗ್, ಪಶುಸಂಗೋಪನೆ, ಕೃಷಿ ವಿಜ್ಞಾನ, ಫಾರ್ಮಸಿ, ಯೋಗ ಮತ್ತು ನ್ಯಾಚುರೋಪತಿ, ವೆಟರಿನರಿ ಕೋರ್ಸುಗಳಲ್ಲಿ ಮೊದಲ 10 ರ್ಯಾಂಕ್ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಸಚಿವರು ಪ್ರಕಟಿಸಿದರು.5 ಕೋರ್ಸ್‌ನ ಟಾಪ್ 9 ರ‍್ಯಾಂಕ್‌ಗಳನ್ನು ಬಹುತೇಕ ಬೆಂಗಳೂರಿನ ವಿದ್ಯಾರ್ಥಿಗಳು ಪಡೆದಿದ್ದಾರೆ.

ಎಂಜಿನಿಯರಿಂಗ್
1 ಅಪೂರ್ವ ಟಂಡನ್
2 ಸಿದ್ಧಾರ್ಥ ಸಿಂಗ್
3 ಆತ್ಮಕುರಿ ವೆಂಕಟ ಮಧು

ಯೋಗ ಮತ್ತು ನ್ಯಾಚುರೋಪತಿ
1 ಹೃಷಿಕೇಷ
2 ವಿ ರಾಜೇಶ
3 ಕೃಷ್ಣ

ಬಿ.ವಿ.ಎಸ್ ಸಿ ( ಪಶುವೈದ್ಯಕೀಯ ವಿಜ್ಞಾನ)
1 ಹೃಷಿಕೇಷ
2 ಮನೀಷ
3 ಶುಭ ಕೌಶಿಕ

ಬಿಎಸ್‌ಸಿ ಕೃಷಿ
1 ಅರ್ಜುನ ರವಿಶಂಕರ
2 ಸುಮೀಸ್ ಎಸ್ ಪಾಟೀಲ
3 ಸುದೀಪ

ಬಿ ಫಾರ್ಮ್
1 ಶಿಶಿರ
2 ಹೃಷಿಕೇಷ
3 ಅಪೂರ್ವ ಟಂಡನ್

.
ಇಂಜಿನಿಯರಿಂಗ್​, ವೈದ್ಯಕೀಯ, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 2,16,559 ವಿದ್ಯಾರ್ಥಿಗಳ ಪೈಕಿ 2,10,962 ಮಂದಿ ಭೌತಶಾಸ್ತ್ರ ಮತ್ತು 2,10,924 ಮಂದಿ ರಸಾಯನಶಾಸ್ತ್ರ ವಿಷಯ ಪರೀಕ್ಷೆಗೆ ಹಾಜರಾಗಿದ್ದರು.
ಇಂಜಿನಿಯರಿಂಗ್ ಕೋರ್ಸ್​ಗೆ 1,71,656​​​, ಕೃಷಿ ಕೋರ್ಸ್​ಗೆ 1,39,968 , ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಲಾಗಿದೆ. Kea.kar.nic.in ಮತ್ತು karesults.nic.in ಫಲಿತಾಂಶ ಪ್ರಕಟ ಮಾಡಲಾಗಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಯಲಹಂಕದ ನ್ಯಾಷನಲ್ ಪಬ್ಲಿಕ್ ಕಾಲೇಜಿನ ಅಪೂರ್ವ ತಂಡನ್ ಮತ್ತು ಯೋಗ ವಿಭಾಗದಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸಾಲೆನ್ಸ್ ಕಾಲೇಜಿನ ಹರ್ಶಿಕೇಶ್, ಕೃಷಿ ವಿಭಾಗದಲ್ಲಿ ಎಚ್‌ಎಎಲ್ ಪಬ್ಲಿಕ್ ಶಾಲೆಯ ಅರ್ಜುನ್ ರವಿಶಂಕರ್ ಮೊದಲ ರ‍್ಯಾಂಕ್​ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ಪ್ರಮುಖ ಸುದ್ದಿ :-   ಬೆಳಗಾವಿ| ಕಬ್ಬು ದರ ನಿಗದಿ ; ಸಿಎಂ ಸಭೆಗೂ ಮುನ್ನ ಕೈಕೈ ಮಿಲಾಯಿಸಿದ ಇಬ್ಬರು ರೈತ ನಾಯಕರ ಬೆಂಬಲಿಗರು

ಈ ಬಾರಿ 7 ಅಂಕ ಗ್ರೇಸ್ ನೀಡಲಾಗಿದೆ. ಗಣಿತಕ್ಕೆ 5, ಭೌತಶಾಸ್ತ್ರ, ಮತ್ತು ರಸಾಯನಶಾಸ್ತ್ರಕ್ಕೆ ತಲಾ 1 ಅಂಕ ಗ್ರೇಸ್ ನೀಡಲಾಗಿದೆ. ಆಗಸ್ಟ್ 5 ರಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆ‌ ಪ್ರಾರಂಭವಾಗಲಿದ್ದು, ಸಂಪೂರ್ಣ ಆನ್ ಲೈನ್ ಮೂಲಕ ಪ್ರಕ್ರಿಯೆ ನಡೆಯಲಿದೆ. ಈ ವರ್ಷ ಸುಮಾರು 1.08 ಲಕ್ಷ ಸೀಟುಗಳು ಎಂಜಿನಿಯರಿಂಗ್ ನಲ್ಲಿ ಲಭ್ಯವಿದ್ದು, 57 ಸಾವಿರಕ್ಕೂ ಹೆಚ್ಚು ಸೀಟು ಸರ್ಕಾರದ ಕೋಟಾಗೆ ಸಿಗಲಿವೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.

KCET 2022 ಫಲಿತಾಂಶ: ಹೇಗೆ ಪರಿಶೀಲಿಸುವುದು…?
ಅಧಿಕೃತ ವೆಬ್‌ಸೈಟ್‌ಗೆ ಹೋಗಿ – karresults.nic.in
ಗೊತ್ತುಪಡಿಸಿದ KCET ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಿ
ಅಪ್ಲಿಕೇಶನ್ ಸಂಖ್ಯೆಗಳು ಮತ್ತು ಜನ್ಮ ದಿನಾಂಕಗಳು ಸೇರಿದಂತೆ ಲಾಗಿನ್ ರುಜುವಾತುಗಳನ್ನು ನಮೂದಿಸಿ
KCET 2022 ಫಲಿತಾಂಶವನ್ನು ಡೌನ್‌ಲೋಡ್ ಮಾಡಿ.

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement