ಅಪಾರ ಹಣದೊಂದಿಗೆ ಪಶ್ಚಿಮ ಬಂಗಾಳದಲ್ಲಿ ಸಿಕ್ಕಿಬಿದ್ದ ಮೂವರು ಜಾರ್ಖಂಡ್ ಶಾಸಕರನ್ನು ಅಮಾನತು ಮಾಡಿದ ಕಾಂಗ್ರೆಸ್

ನವದೆಹಲಿ: ನಿನ್ನೆ ಬಂಗಾಳದಲ್ಲಿ ನಗದು ರಾಶಿಯೊಂದಿಗೆ ಬಂಧನಕ್ಕೊಳಗಾದ ಮೂವರು ಜಾರ್ಖಂಡ್ ಕಾಂಗ್ರೆಸ್ ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಪಕ್ಷ ಇಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ.
ಜಾರ್ಖಂಡ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಉಸ್ತುವಾರಿ ಅವಿನಾಶ್ ಪಾಂಡೆ ಅವರು, “ನಿನ್ನೆಯಷ್ಟೇ ನಗದು ಹಣದೊಂದಿಗೆ ಬಂಧನಕ್ಕೊಳಗಾದ ಮೂವರು ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ” ಎಂದು ಹೇಳಿದ್ದಾರೆ.
ಮೂವರು ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರು ರಾಣಿಹಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ಅವರ ವಾಹನ ತಡೆದು ಅಪಅರ ಪ್ರಮಾಣದ ಹಣ ವಶಪಡಿಸಿಕೊಂಡಿದ್ದರು ಹಾಗೂ ಮೂವರನ್ನು ಬಂಧಿಸಿದ್ದರು.
ಅನ್ಸಾರಿ ಜಮ್ತಾರಾ ಶಾಸಕರಾಗಿದ್ದರೆ, ಕಚ್ಚಪ್ ರಾಂಚಿ ಜಿಲ್ಲೆಯ ಖಿಜ್ರಿ ಶಾಸಕರಾಗಿದ್ದರೆ, ಕೊಂಗಾರಿ ಸಿಮ್ಡೆಗಾ ಜಿಲ್ಲೆಯ ಕೊಲೆಬಿರಾ ಶಾಸಕರಾಗಿದ್ದಾರೆ.

advertisement

ಪಿತೂರಿ ಎಂದು ಕಾಂಗ್ರೆಸ್ ಆರೋಪ
ಈ ಹಿಂದೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಆಪರೇಶನ್‌ ಕಮಲದಡಿ ತನ್ನ ಶಾಸಕರನ್ನು ಖರೀದಿಸಿ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ದೂಷಿಸಿದ ಅವಿನಾಶ್ ಪಾಂಡೆ ಮತ್ತು ಶರ್ಮಾ ಅವರು ಮೂವರು ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಫೋನ್ ರೆಕಾರ್ಡಿಂಗ್‌ಗಳಿವೆ ಎಂದು ಹೇಳಿದರು. ಜೆಎಂಎಂ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಸಭೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಆದರೆ ಈ ಹಣ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ಮೈತ್ರಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಹೇಳಿದೆ.
ಉಡುಗೊರೆ ಖರೀದಿಗೆ ಹಣ

ಓದಿರಿ :-   ಭಾರೀ ಮಳೆ ಮಳೆಯ ಮಧ್ಯೆ ನೀರು ತುಂಬಿದ ಕಾಲೋನಿಯ ಬೀದಿಯೊಳಗೆ ರಾಜಾರೋಷವಾಗಿ ಹೋಗುತ್ತಿರುವ ಎಂಟು ಅಡಿ ಉದ್ದದ ಮೊಸಳೆ | ವೀಕ್ಷಿಸಿ

ಇರ್ಫಾನ್ ಅನ್ಸಾರಿ ಅವರ ಸಹೋದರ, ಇಮ್ರಾನ್ ಅವರು, ತನ್ನ ಸಹೋದರನನ್ನು ಬಂಧಿಸಲು ಪ್ರಯತ್ನಗಳು ನಡೆದಿವೆ ಎಂದು ಹೇಳಿಕೊಂಡಿದ್ದರು, ನಗದು ‘ಬುಡಕಟ್ಟು ಜನಾಂಗದವರಿಗೆ ಉಡುಗೊರೆ’ ಖರೀದಿಸಲು ಉದ್ದೇಶಿಸಿ ನಗದು ಕೊಂಡೊಯ್ಯಲಾಗಿದೆ ಎಂದು ಹೇಳಿದರು. “ಪ್ರತಿ ವರ್ಷದಂತೆ, ಈ ವರ್ಷವೂ ಈ ಜನರು ಜಾರ್ಖಂಡ್‌ನಿಂದ ಕೋಲ್ಕತ್ತಾದ ಬಡಾ ಬಜಾರ್‌ಗೆ ಬಂದಿದ್ದರು”. ಪ್ರತಿ ವರ್ಷ ತನ್ನ ಸಹೋದರ ಬಾಡಾ ಬಜಾರ್‌ನಿಂದ ಆದಿವಾಸಿಗಳಿಗೆ ಸೀರೆಗಳನ್ನು ಖರೀದಿಸುತ್ತಾರೆ ಎಂದು ಅವರು ಹೇಳಿದರು.
ಶಾಲಾ ಉದ್ಯೋಗ ಹಗರಣದಲ್ಲಿ ತನಿಖೆ ನಡೆಸುತ್ತಿರುವ ಚಟರ್ಜಿಗೆ ಸಂಬಂಧಿಸಿದ ಆಸ್ತಿಗಳಲ್ಲಿ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳುವ ಮಧ್ಯೆ ಈ ಬೆಳವಣಿಗೆ ನಡೆದಿದೆ.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement