ಕಾಮನ್‌ವೆಲ್ತ್ ಗೇಮ್ಸ್ 2022 : ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಬಿಂದ್ಯಾರಾಣಿ ದೇವಿ

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕವನ್ನು ಗೆದ್ದು ಶನಿವಾರ ಭಾರತದ ಪದಕದ ಮೊತ್ತವನ್ನು ನಾಲ್ಕಕ್ಕೆ ಕೊಂಡೊಯ್ದರು.
114 ಕೆಜಿ ತೂಕದ ತನ್ನ ಎರಡನೇ ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ ವಿಫಲವಾದಾಗ ಅವರು ಕಂಚಿಗೆ ಸಿದ್ಧರಾದರು. ಆದರೆ ಅವರು ತನ್ನ ಅಂತಿಮ ಲಿಫ್ಟ್‌ನಲ್ಲಿ 116 ಕೆ.ಜಿ ಭಾರವನ್ನು ಎತ್ತಿದರು ಮತ್ತು ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ನೈಜೀರಿಯಾದ ಚಿನ್ನದ ಪದಕ ವಿಜೇತ ಆದಿಜತ್ ಒಲರಿನೋಯ್‌ ಅವರಿಗಿಂತ ಕೇವಲ 1 ಕೆಜಿ ಕಡಿಮೆ ಭಾರ ಎತ್ತಿದರು.

23ರ ಹರೆಯದ ಅವರು ಒಟ್ಟು 202 ಕೆ.ಜಿ ಎತ್ತಿದರು. ಅವರು ಸ್ನ್ಯಾಚ್ ಸುತ್ತಿನಲ್ಲಿ 86 ಕೆಜಿ ಎತ್ತಿದರೆ ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ 116 ಕೆಜಿ ಎತ್ತಿ ಕಾಮನ್ವೆಲ್ತ್ ಗೇಮ್ಸ್ ದಾಖಲೆಯ ಲಿಫ್ಟ್ ಅನ್ನು ನೋಂದಾಯಿಸಿದರು.
ನೈಜೀರಿಯಾದ ಆದಿಜತ್ ಅಡೆನಿಕೆ ಒಲಾರಿನೊಯ್ ಅವರು ಸ್ನ್ಯಾಚ್‌ನಲ್ಲಿ ಗೇಮ್ಸ್ ದಾಖಲೆ ಅಳಿಸಿಹಾಕಿದರು ಮತ್ತು ಒಟ್ಟು 203 ಕೆಜಿ (92 ಕೆಜಿ 111 ಕೆಜಿ) ಚಿನ್ನದ ಪದಕವನ್ನು ಗೆದ್ದರು.
ಸ್ಥಳೀಯ ನೆಚ್ಚಿನ ಫ್ರೇರ್ ಮೊರೊ ಅವರು ಒಟ್ಟು 198 ಕೆಜಿ (86 ಕೆಜಿ 109 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.
ಇದಕ್ಕೂ ಮುನ್ನ ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಚಿನ್ನ ಗೆದ್ದರೆ, ಸಂಕೇತ್ ಸರ್ಗರ್ ಮತ್ತು ಗುರುರಾಜ ಪೂಜಾರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement