ಸ್ಮೃತಿ ಇರಾನಿ, ಅವರ ಮಗಳು ಗೋವಾ ರೆಸ್ಟೋರೆಂಟ್ ಮಾಲೀಕರಲ್ಲ, ಪರವಾನಗಿಗಾಗಿ ಅರ್ಜಿಯನ್ನೂ ಸಲ್ಲಿಸಿಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿ  ಗೋವಾ ರೆಸ್ಟೋರೆಂಟ್‌ನ ಮಾಲೀಕರಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ. ಅವರ ಪರವಾಗಿ ಯಾವುದೇ ಪರವಾನಗಿ ನೀಡಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ ಹಾಗೂ ಅವರ ವಿರುದ್ಧದ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದೆ.
ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಮತ್ತು ಇತರರು ಸ್ಮೃತಿ ಇರಾನಿ ಮತ್ತು ಅವರ ಮಗಳ ಮೇಲೆ ಸುಳ್ಳು, ಕಟುವಾದ ಮತ್ತು ವೈಯುಕ್ತಿಕ ದಾಳಿಗಳನ್ನು ನಡೆಸಲು ಪರಸ್ಪರ ಮತ್ತು ಇತರ ವ್ಯಕ್ತಿಗಳೊಂದಿಗೆ ಸಂಚು ರೂಪಿಸಿದರು. ಇದು ಸ್ಮೃತಿ ಇರಾನಿಯವರ ಪ್ರತಿಷ್ಠೆ, ನೈತಿಕ ಚಾರಿತ್ರ್ಯ ಮತ್ತು ಸಾರ್ವಜನಿಕ ಇಮೇಜ್‌ ಹಾಳು ಮಾಡುವ , ಮಾನಹಾನಿ ಮಾಡುವ ಉದ್ದೇಶದಿಂದ ಕೂಡಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ನಿಜವಾದ ಸಂಗತಿಗಳನ್ನು ಪರಿಶೀಲಿಸದೆ ನಿಂದೆಯ ಆರೋಪಗಳನ್ನು ಮಾಡಲಾಗಿದೆ. ದುರುದ್ದೇಶಪೂರಿತ ಉದ್ದೇಶದಿಂದ ಬೋಗಸ್ ಹೇಳಿಕೆಗಳನ್ನು ಮಾಡಲಾಗಿದೆ” ಎಂದು ಕೋರ್ಟ್‌ ಹೇಳಿದೆ. ಸಮಾಜದ ಗೌರವಾನ್ವಿತ ಸದಸ್ಯೆಯಾಗಿರುವ ಸ್ಮೃತಿ ಇರಾನಿ ಅವರ ಪ್ರತಿಷ್ಠೆಯನ್ನು ರಕ್ಷಿಸುವ ಅವಶ್ಯಕತೆಯಿದೆ ಎಂದು ನ್ಯಾಯಾಲಯ ಹೇಳಿದೆ.
ಸಚಿವರ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಸ್ಮೃತಿ ಇರಾನಿ ಅವರು ಸಿವಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಂತರ ನ್ಯಾಯಾಲಯದ ಆದೇಶವನ್ನು ಪ್ರಕಟಿಸಲಾಗಿದೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

ಸ್ಮೃತಿ ಇರಾನಿ ಮತ್ತು ಅವರ ಮಗಳು ರೆಸ್ಟೋರೆಂಟ್‌ನ ಮಾಲೀಕರಲ್ಲ. ಸ್ಮೃತಿ ಇರಾನಿ ಅಥವಾ ಅವರ ಮಗಳು ಪರವಾನಗಿಗಾಗಿ ಎಂದಿಗೂ ಅರ್ಜಿ ಸಲ್ಲಿಸಲಿಲ್ಲ” ಎಂದು ನ್ಯಾಯಾಲಯ ಹೇಳಿದೆ. ರೆಸ್ಟೋರೆಂಟ್ ಅಥವಾ ಜಮೀನು ಸ್ಮೃತಿ ಇರಾನಿ ಅಥವಾ ಅವರ ಮಗಳ ಒಡೆತನದಲ್ಲಿಲ್ಲ” ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಸ್ಮೃತಿ ಇರಾನಿ ಅವರ 18 ವರ್ಷದ ಮಗಳು ಗೋವಾದಲ್ಲಿ “ಅಕ್ರಮ ಬಾರ್” ನಡೆಸುತ್ತಿದ್ದಾಳೆ ಎಂಬ ಆರೋಪದ ಮೂಲಕ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿತ್ತು.
ಕಾಂಗ್ರೆಸ್ ನಾಯಕರ ಹೇಳಿಕೆಗಳು “ಅಪಪ್ರಚಾರದ ಸ್ವರೂಪದಲ್ಲಿದೆ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಬೋಗಸ್ ಎಂದು ತೋರುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಕಾಂಗ್ರೆಸ್ ನಾಯಕರು ತಮ್ಮ ಟ್ವೀಟ್‌ಗಳನ್ನು ತೆಗೆದುಹಾಕಲು ವಿಫಲವಾದರೆ, ಟ್ವಿಟರ್ ಹಾಗೆ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement