ಶಿವಸೇನೆ ನಾಯಕ ಸಂಜಯ್ ರಾವತ್ 4 ದಿನ ಇ.ಡಿ ಕಸ್ಟಡಿಗೆ

ಮುಂಬೈ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಿವಸೇನೆ ಸಂಸದ ಸಂಜಯ್‌ ರಾವತ್‌ ಅವರನ್ನು ಇಂದು, ಸೋಮವಾರ ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯ(ಇ.ಡಿ)ದ ಕಸ್ಟಡಿಗೆ ನೀಡಲಾಗಿದೆ.
ತನಿಖಾ ಸಂಸ್ಥೆ ಎಂಟು ದಿನಗಳ ಕಸ್ಟಡಿಗೆ ಕೇಳಿತ್ತು ಆದರೆ ನ್ಯಾಯಾಲಯ ಒಪ್ಪಲಿಲ್ಲ ಮತ್ತು ನಾಲ್ಕು ದಿನಗಳ ಅವಧಿಗೆ ಕಸ್ಟಡಿಗೆ ನೀಡಿತು. ಇದುವರೆಗಿನ ತನಿಖೆ ಮತ್ತು ಅದರಲ್ಲಿ ಕಂಡುಬಂದಿರುವ ಅಂಶಗಳ ದೃಷ್ಟಿಯಿಂದ ಆರೋಪಿಗಳ ಕಸ್ಟಡಿ ಅಗತ್ಯ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಆದರೆ 8 ದಿನಗಳ ಕಸ್ಟಡಿಗೆ ನೀಡಲು ನಾನು ಒಪ್ಪುವುದಿಲ್ಲ. ಹೀಗಾಗಿ ಆರೋಪಿಗೆ 4 ದಿನಗಳ ಇಡಿ ಕಸ್ಟಡಿ ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ರಾವತ್ ಹೃದ್ರೋಗಿಯಾಗಿರುವುದರಿಂದ ತಡರಾತ್ರಿಯವರೆಗೂ ವಿಚಾರಣೆ ನಡೆಸಬಾರದು ಎಂದು ರಾವತ್ ಅವರ ವಕೀಲರು ಹೇಳಿದ್ದಾರೆ.

ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಸಾಕ್ಷ್ಯಗಳನ್ನು ತಿರುಚುತ್ತಿದ್ದಾರೆ ಮತ್ತು ಅವರು ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಲವಾರು ನಿರ್ಣಾಯಕ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಹೇಳಿದೆ. ಈ ಹಿನ್ನಲೆಯಲ್ಲಿ ಅವರನ್ನು ಆಗಸ್ಟ್ 4ರವರೆಗೆ ಇಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಅವರು ಹೃದಯ ಸಂಬಂಧಿ ಕಾಯಿಲೆ ಇರುವ ರೋಗಿ. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಈ ಸಂಬಂಧ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು. ಸಾಮಾನ್ಯವಾಗಿ ರಾತ್ರಿ 10 ಗಂಟೆ ವರೆಗೆ ವಿಚಾರಣೆ ನಡೆಸುತ್ತೇವೆ ಎಂದು ತನಿಖಾ ಸಂಸ್ಥೆ ಪ್ರತಿಕ್ರಿಯಿಸಿದೆ.
ಕೊಳೆಗೇರಿ ಪುನರಾಭಿವೃದ್ಧಿ ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ರಾವತ್ ಅವರನ್ನು ನಿನ್ನೆ ತಡರಾತ್ರಿ ಬಂಧಿಸಲಾಯಿತು. ಸಂಜಯ್ ರಾವತ್ ಅವರ ತಮ್ಮ ಬಂಧನ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement