ಭಟ್ಕಳ: ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವು, ಮೃತದೇಹಗಳು ಹೊರಕ್ಕೆ

ಕಾರವಾರ: ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ನಡೆದಿದೆ. ಸಿಬ್ಬಂದಿ ಹರ ಸಾಹಸ ಪಟ್ಟು ಮಣ್ಣಿನಡಿ ಸಿಲುಕಿದ್ದ ನಾಲ್ವರ ಶವ ಹೊರತೆಗೆದಿದ್ದಾರೆ.
ಮೃತರನ್ನು ಲಕ್ಷ್ಮೀ ನಾರಾಯಣ ನಾಯ್ಕ (50), ಪುತ್ರಿ ಲಕ್ಷ್ಮೀ(33), ಅನಂತ (32), ಪ್ರವೀಣ್ ನಾಯ್ಕ(20) ಸೇರಿ ನಾಲ್ವರ ಮೃತದೇಹ ಹೊರತೆಗೆಯಲಾಗಿದೆ.
ಮನೆ ಮೇಲೆ ಗುಡ್ಡ ಕುಸಿದು ನಂತರ ಮನೆ ಕುಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ ಎಲ್ಲ ನಾಲ್ವರೂ ಮೃತ ಪಟ್ಟಿದ್ದಾರೆ. ಘಟನೆ ನಡೆದ ಕೂಡಲೇ ತಕ್ಷಣವೇ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾದರೂ ಪ್ರಯೋಜನವಾಗಲಿಲ್ಲ. ಜೆಸಿಬಿ ಸಹಾಯದಿಂದ ಮನೆಯ ಅವಶೇಷಗಳನ್ನ ತೆರವು ಕಾರ್ಯ ನಡೆಸಿದರೂ ಪ್ರಯೋಜನವಾಗಲಿಲ್ಲ..ರಾತ್ರಿ ನೆಮ್ಮದಿಯ ನಿದ್ರೆಗೆ ಜಾರಿದ್ದ ಮನೆಯೊಡತಿ, ತನ್ನಿಬ್ಬರು ಮಕ್ಕಳಾದ ಲಕ್ಷ್ಮೀ ನಾಯ್ಕ, ಅನಂತ ನಾಯ್ಕ ಹಾಗೂ ಸಹೋದರಿಯ ಮಗ ಪ್ರವೀಣ್ ನಾಯ್ಕ ಅವರೊಂದಿಗೆ ಚಿರನಿದ್ರೆಗೆ ಜಾರಿದ್ದಾರೆ.
ಮೊದಲು ಅನಂತ ನಾರಾಯಣ ಮತ್ತು ಲಕ್ಷ್ಮೀ ನಾರಾಯಣ ಶವ ಹೊರಕ್ಕೆ ತೆಗೆಯಲಾಯ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆಯಲ್ಲೇ ಶೋಧಕಾರ್ಯ ಮುಂದುವರಿಸಿದ ರಕ್ಷಣಾ ಸಿಬ್ಬಂದಿ, ನಂತರ ಪುತ್ರಿ ಲಕ್ಷ್ಮೀ, ಪ್ರವೀಣ್ ಅವರ ಶವವನ್ನ ಹೊರತೆಗೆಯಲಾಯಿತು.

ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಲಕ್ಷ್ಮೀ ಮನೆಯ ಬಳಿ ಬೆಳ್ಳಂಬೆಳಿಗ್ಗೆ ಗುಡ್ಡ ಕುಸಿದಿದೆ. ಕುಸಿದ ಗುಡ್ಡ ನೇರವಾಗಿ ಮನೆಯ ಮೇಲೆ ಬಿದ್ದಿದ್ದು, ಆರ್‌ಸಿಸಿ ಮನೆ ಧರೆಗುರುಳಿದೆ. ಮನೆಯೊಳಗೆ ನೆಮ್ಮದಿಯ ನಿದ್ದೆ ಮಾಡುತ್ತಿದ್ದ ಲಕ್ಷ್ಮೀ ಸೇರಿ ನಾಲ್ವರು ಸಿಲುಕಿಕೊಂಡಿದ್ದರು. ಸೂರ್ಯೋದಯವಾಗುತ್ತಿದ್ದಂತೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆದರೆ, ದುರಾದೃಷ್ಟವಶಾತ್ ಮನೆಯ ಮೇಲೆ ಬಿದ್ದ ಗುಡ್ಡ ತೆರವಿಗೆ ಜೆಸಿಬಿ ಹೋಗಲು ಸಾಧ್ಯವಾಗದಷ್ಟು ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಜೆಸಿಬಿ ಬರಲು ಸ್ವಲ್ಪ ವಿಳಂಬವಾಯಿತು. ಸ್ಥಳೀಯರು ತಕ್ಷಣವೇ ತಮ್ಮ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಮೂರ್ನಾಲ್ಕು ಗಂಟೆಗಳ ಕಾಲ ನಡೆದ ತೆರವು ಕಾರ್ಯಾಚರಣೆಯಲ್ಲಿ ಅಂತಿಮವಾಗಿ ನಾಲ್ವರ ಮೃತದೇಹವನ್ನೂ ಹೊರ ತೆಗೆಯಲಾಗಿದೆ

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

300ಕ್ಕೂ ಹೆಚ್ಚು ಮನೆಗಳು ಜಲಾವೃತ
ಭಟ್ಕಳ ತಾಲೂಕಿನ ಮುಂಡಳ್ಳಿ, ಪಡುಶಿರಾಲಿ, ಕೋಕ್ತಿ ಮೊದಲಾದ ಗ್ರಾಮಗಳಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಸಂತ್ರಸ್ತರಿಗಾಗಿ ಜಿಲ್ಲಾಡಳಿತ ಕಾಳಜಿ ಕೇಂದ್ರವನ್ನ ತೆರೆದಿದ್ದು, ಮಳೆ ಹಾನಿಗೆ ಸಿಲುಕಿದವರನ್ನ ಸ್ಥಳಾಂತರಿಸಲಾಗುತ್ತಿದೆ. ಪಡುಶಿರಾಲಿಯಲ್ಲಿ ಶಾರದ ಹೊಳೆ ಉಕ್ಕಿ ಹರಿಯುತ್ತಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದೆ. ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಶಿರಾಲಿ, ಮುಟ್ಟಳ್ಳಿ, ಶಾರದೋಳಿ, ಮಣ್ಣಕುಳಿ ಗ್ರಾಮಕ್ಕೆ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ. ಬೆಳಿಗ್ಗೆ ಸುದ್ದಿ ತಿಳಿಯುತ್ತಲೇ ಭಟ್ಕಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು, ಎನ್.ಡಿ.ಆರ್.ಎಫ್. ತಂಡವನ್ನು ಸಹ ಭಟ್ಕಳಕ್ಕೆ ಕಳುಹಿಸಿದ್ದು ಶಿರಾಲಿ ಭಾಗದಲ್ಲಿ ಅನೇಕ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಯಿತು.
ಭಟ್ಕಳ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರನ್ನ ಬಂದ್ ಮಾಡಲಾಗಿದೆ. ಪರಿಣಾಮ ಶಿರಾಲಿ, ರಂಗಿನಕಟ್ಟೆ ಗ್ರಾಮ, ಬೈಂದೂರು ರಸ್ತೆ, ಕಾರವಾರ-ಭಟ್ಕಳ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು.

ನಿರಂತರ ವರ್ಷಧಾರೆಯಿಂದಾಗಿ ಭಟ್ಕಳ ತಾಲೂಕಿನಲ್ಲಿ ಶಾಲೆ-ಕಾಲೇಜುಗಳಿಗೂ ಇಂದು ರಜೆ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಮುಂಜಾಗ್ರತವಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.
ಸ್ಥಳದಲ್ಲಿಶಾಸಕ ಸುನಿಲ್ ನಾಯ್ಕ, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ,  ಪ.ಘ.ಸಂ.ಕಾ.ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್. ತಂಡ, ಪೊಲೀಸ್ ಇಲಾಖೆಯ ಸಿಬ್ಬಂದಿ ಪರಿಸ್ಥಿತಿ ನಿರ್ವಹಣೆಯಲ್ಲಿ ತೊಡಗಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಕ್ಕೆ ಹೆದರಲ್ಲ: ಕೆ.ಎಸ್.ಈಶ್ವರಪ್ಪ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement