ವಿಶಾಖಪಟ್ಟಣಂ: ಅನಕಪಲ್ಲಿ ಜಿಲ್ಲೆಯ ಅಚ್ಚುತಪುರಂ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್) ನಲ್ಲಿ ಮಂಗಳವಾರ ಸೋರಿಕೆಯಾದ ವಿಷಕಾರಿ ಅನಿಲವನ್ನು ಉಸಿರಾಡಿದ ಬಟ್ಟೆ ಉತ್ಪಾದನಾ ಘಟಕದ 100 ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಅಸ್ವಸ್ಥರಾಗಿದ್ದಾರೆ. ಎಸ್ ಇಝಡ್ ನಲ್ಲಿ ಹಲವು ತಿಂಗಳುಗಳಲ್ಲಿ ಎರಡನೇ ಬಾರಿ ಅನಿಲ ಸೋರಿಕೆ ವರದಿಯಾಗಿದೆ.
ಆಂಧ್ರ ಪ್ರದೇಶದ ಅಚುತಪುರಂ ಜಿಲ್ಲೆಯ ವಿಶೇಷ ಆರ್ಥಿಕ ವಲಯದಲ್ಲಿರುವ ‘ಬ್ರ್ಯಾಂಡಿಕ್ಸ್’ ಉಡುಪು ತಯಾರಿಕಾ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡ ಮಹಿಳೆಯರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಕಪಲ್ಲಿ ಏರಿಯಾ ಆಸ್ಪತ್ರೆಯಲ್ಲಿ ಕನಿಷ್ಠ ಐವರು ಮಹಿಳೆಯರು ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದಾರೆ. ಉಳಿದವರ ಸ್ಥಿತಿ ಸ್ಥಿರವಾಗಿದೆ. ವಾಕರಿಕೆ ಮತ್ತು ವಾಂತಿ ಎಂದು ದೂರಿದ ನಂತರ ಮೂರ್ಛೆ ಹೋದ ಕೆಲವು ಮಹಿಳೆಯರಿಗೆ ಸಂಸ್ಥೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅವರನ್ನು ಅಚ್ಚುತಪುರಂ ಮತ್ತು ಅನಕಪಲ್ಲಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು ಆದಾಗ್ಯೂ, ಅನಾರೋಗ್ಯದ ನಿಜವಾದ ಕಾರಣವನ್ನು ತಕ್ಷಣವೇ ಪತ್ತೆ ಹಚ್ಚಲಾಗಿಲ್ಲ.
ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ (ಎಪಿಪಿಸಿಬಿ) ಅಧಿಕಾರಿಗಳು ಬಂದು ಪರಿಸ್ಥಿತಿಯನ್ನು ಅವಲೋಕಿಸುವವರೆಗೂ ಪೊಲೀಸರು, ಕಂಪನಿಯೊಳಗೆ ಯಾರ ಪ್ರವೇಶಕ್ಕೂ ಅವಕಾಶ ನೀಡಿಲ್ಲ. ಪ್ರಸ್ತುತ ಘಟಕದಲ್ಲಿ ಅನಿಲ ಸೋರಿಕೆಯ ವಾಸನೆ ಕಡಿಮೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದೇ ವರ್ಷ ಜೂನ್ 3ರಂದು ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆ ಸಂಭವಿಸಿತ್ತು. ಆಗ ಸುಮಾರು 200 ಮಹಿಳಾ ನೌಕರರಿಗೆ ಕಣ್ಣು ಉರಿ, ವಾಂತಿ ಮತ್ತು ವಾಕರಿಕೆ ಉಂಟಾಗಿ ಅಸ್ವಸ್ಥಗೊಂಡಿದ್ದರು. ತನಿಖೆಯ ನಂತರ ಲ್ಯಾಬೊರೇಟರಿ ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ಆದೇಶಿಸಿತ್ತು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ