ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ

ನವದೆಹಲಿ: ಜಂಟಿ ಸಂಸದೀಯ ಸಮಿತಿಯು (ಜೆಸಿಯು) ನೂತನ ಶಿಫಾರಸ್ಸುಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಮಂಡನೆಗೆ ಬಾಕಿ ಉಳಿದಿದ್ದ ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ 2019 (ಪಿಡಿಪಿ ಮಸೂದೆ) ಅನ್ನು ಕೇಂದ್ರ ಸರ್ಕಾರವು ಬುಧವಾರ ಹಿಂಪಡೆದಿದೆ.
ವ್ಯಕ್ತಿಗತವಾಗಿ ವೈಯಕ್ತಿಕ ದತ್ತಾಂಶಕ್ಕೆ ಸಂಬಂಧಿಸಿದ ಡಿಜಿಟಲ್‌ ಖಾಸಗಿತನಕ್ಕೆ ರಕ್ಷಣೆ ನೀಡಲು ಮಂಡಿಸಲಾಗಿದ್ದ ಮಸೂದೆಯನ್ನು ಹಿಂಪಡೆಯುವ ಸಂಬಂಧ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನ್‌ ವೈಷ್ಣವ್‌ ಅವರು ಗೊತ್ತುವಳಿ ಮಂಡಿಸಿದರು. ಸಚಿವರ ಗೊತ್ತುವಳಿಯ ಹಿನ್ನೆಲೆಯಲ್ಲಿ ಸದನವು ಧ್ವನಿಮತದ ಮೂಲಕ ಮಸೂದೆ ಹಿಂಪಡೆಯಲು ಒಪ್ಪಿಗೆ ಸೂಚಿಸಿತು.

advertisement

2019ರ ಡಿಸೆಂಬರ್‌ 11ರಂದು ಅಂದಿನ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ರವಿಶಂಕರ್‌ ಪ್ರಸಾದ್‌ ಅವರು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ್ದರು. ಈ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಪರಿಶೀಲನೆಗೆ ನೀಡಲಾಗಿತ್ತು. ಸಮಿತಿಯು 2021ರ ಡಿಸೆಂಬರ್‌ 16ರಂದು ಲೋಕಸಭೆಗೆ ವರದಿ ಸಲ್ಲಿಸಿತ್ತು.
ಡಿಜಿಟಲ್‌ ವ್ಯವಸ್ಥೆಗೆ ಪೂರಕವಾಗಿ ಸಮಗ್ರ ಕಾನೂನು ಚೌಕಟ್ಟು ರೂಪಿಸಲು ಮಸೂದೆಗೆ 81 ತಿದ್ದುಪಡಿ ಪ್ರಸ್ತಾವ ಸಲ್ಲಿಸಲಾಗಿದ್ದು, 12 ಶಿಫಾರಸ್ಸುಗಳನ್ನು ಮಾಡಲಾಗಿದೆ. ಜೆಸಿಪಿಯ ವರದಿ ಪರಿಗಣಿಸಿ ಮಸೂದೆ ಹಿಂಪಡೆಯಲು ನಿರ್ಧರಿಸಲಾಗಿದ್ದು, ಹೊಸ ಮಸೂದೆಯನ್ನು ಮಂಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಅಟಲ್​ ಪಿಂಚಣಿ ಯೋಜನೆಯಲ್ಲಿ ಬದಲಾವಣೆ: ಅಕ್ಟೋಬರ್‌ 1ರಿಂದ ಇವರಿಗೆ ಈ ಯೋಜನೆಗೆ ಸೇರಲು ಸಾಧ್ಯವಾಗುವುದಿಲ್ಲ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement