ಟ್ರಕ್‌ ಡಿಕ್ಕಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ಕೇಟಿಂಗ್ ಮೂಲಕ ತೆರಳುತ್ತಿದ್ದ ಕೇರಳ ಸ್ಕೇಟರ್‌ ಸಾವು

ಚಂಡೀಗಡ: ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಮೂಲಕ ಪ್ರಯಾಣಿಸುತ್ತಿದ್ದ ಸ್ಕೇಟರ್ ಒಬ್ಬರು ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ಸಾವಿಗೀಡಾದ ಅಹಿತಕರ ಘಟನೆ ನಡೆದಿದೆ.
ಅಪಘಾತದ ವೇಳೆ 31 ವರ್ಷದ ಕೇರಳ ಯುವಕ ಅನಸ್ ತನ್ನ ಸ್ಕೇಟ್‌ ಬೋರ್ಡ್‌ನಲ್ಲಿದ್ದ ಎಂದು ಪಿಂಜೋರ್ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆ ಬಳಿಕ ಟ್ರಕ್ ಚಾಲಕ ಟ್ರಕ್‌ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.

ಕೇರಳದ ತಿರುವನಂತಪುರಂ ಮೂಲದ ಅನಸ್ ಅವರು ಮೇ 29, 2022 ರಂದು ಸ್ಕೇಟಿಂಗ್‌ ಮೂಲಕ ತಮ್ಮ 3511 ಕಿಮೀ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ತಮ್ಮ ಅಂತಿಮ ಗಮ್ಯಸ್ಥಾನ ಕಾಶ್ಮೀರದಿಂದ 600 ಕಿಮೀ ದೂರದಲ್ಲಿರುವಾಗ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟಿಂಗ್‌ ಮೂಲಕ ತೆರಳಲು ಅವರು 3 ತಿಂಗಳ ಹಿಂದೆ ತಮ್ಮ ಸ್ಕೇಟಿಂಗ್ ಬೋರ್ಡ್ ಖರೀದಿಸಿದರು ಮತ್ತು ತರಬೇತಿ ಪ್ರಾರಂಭಿಸಿದರು. ಅವರು ನೇಪಾಳ, ಭೂತಾನ್ ಮತ್ತು ಕಾಂಬೋಡಿಯಾಕ್ಕೆ ಮುಂದಿನ ಪ್ರವಾಸವನ್ನು ಯೋಜಿಸುತ್ತಿದ್ದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement