ಬೆಂಗಳೂರು: 4 ವರ್ಷದ ಮಗಳನ್ನು 4ನೇ ಮಹಡಿಯಿಂದ ಎಸೆದ ಮಹಿಳೆ, ತಾನೂ ಬಾಲ್ಕನಿಯಿಂದ ಜಿಗಿಯಲು ಪ್ರಯತ್ನ | ಕೃತ್ಯ ಸಿಸಿಟಿವಿಯಲ್ಲಿ ಸೆರೆ

posted in: ರಾಜ್ಯ | 0

ಬೆಂಗಳೂರು: ಮಹಿಳೆಯೊಬ್ಬರು ತಮ್ಮ ನಾಲ್ಕನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ತನ್ನ ನಾಲ್ಕು ವರ್ಷದ ಮಗಳನ್ನು ಎಸೆದ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.
ಮಹಿಳೆ ತನ್ನ ಮಗುವನ್ನು ಎಸೆದ ನಂತರ, ಮಹಿಳೆ ಬಾಲ್ಕನಿಯ ಗ್ರಿಲ್‌ಗಳ ಮೇಲೆ ಹತ್ತಿ ಕೆಲವು ಸೆಕೆಂಡುಗಳ ಕಾಲ ನಿಂತಿದ್ದಳು, ತಾನೂ ಬಾಲ್ಕನಿಯಿಂದ ತಾನೂ ಜಿಗಿಯುವ ಪ್ರಯತ್ನದಲ್ಲಿದ್ದಳು. ನಂತರ ಕುಟುಂಬ ಸದಸ್ಯರು ಹೊರಗೆ ಧಾವಿಸಿ, ಅವಳನ್ನು ಹಿಂದಕ್ಕೆ ಎಳೆದು ನೆಲಕ್ಕೆ ಪಿನ್ ಮಾಡಿದರು.ಬಿದ್ದ ರಭಸಕ್ಕೆ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಬೆಂಗಳೂರಿನ ಎಸ್‌ಆರ್‌ನಗರದ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಈ ಭಯಾನಕ ಘಟನೆ ನಡೆದಿದೆ. ದಂಪತ ಸಿಕೆಸಿ ಗಾರ್ಡನ್‌ನಲ್ಲಿರುವ ಅದ್ವೈತ್ ಆಶ್ರಯ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ವಾಸಿಸುತ್ತಿದ್ದರು.

advertisement

ಮಹಿಳೆಯನ್ನು ಸುಷ್ಮಾ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷದ ಬಾಲಕಿಗೆ ಶ್ರವಣ ಮತ್ತು ವಾಕ್ ದೋಷವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, ಸುಷ್ಮಾ ತನ್ನ ವೃತ್ತಿಜೀವನದ ಪ್ರಗತಿಗೆ ಅಡ್ಡಿಯಾಗಿದ್ದಾಳೆ ಎಂದು ತನ್ನ ಮಗಳನ್ನು ದೂಷಿಸುತ್ತಿದ್ದಳು ಹಾಗೂ ಇದರಿಂದ ಮಹಿಳೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪತಿ ಕಿರಣ್‌ ಪೊಲೀಸ್ ಪ್ರಕರಣ ದಾಖಲಿಸಿದ ನಂತರ ಆಕೆಯನ್ನು ಬಂಧಿಸಲಾಗಿದೆ.ಸುಷ್ಮಾ ದಂತವೈದ್ಯೆ ಮತ್ತು ಪತಿ ಕಿರಣ್‌ ಸಾಫ್ಟ್‌ವೇರ್ ಇಂಜಿನಿಯರ್.

ಓದಿರಿ :-   'ಅಸಾಧಾರಣ' ಗಾಯಕ, ಕನ್ನಡದ ಮನೆ ಮಾತಾಗಿದ್ದರು : ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಮಹಿಳೆಯ ಮಾನಸಿಕ ಆರೋಗ್ಯದ ಬಗ್ಗೆಯೂ ನಾವು ಎಲ್ಲಾ ಕೋನಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಈ ಹಿಂದೆ ಸುಷ್ಮಾ ತನ್ನ ಮಗಳನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಲು ಯತ್ನಿಸಿದ್ದಳು. ಕಿರಣ್ ಠಾಣೆಗೆ ಧಾವಿಸಿ ಮಗಳನ್ನು ಹುಡುಕಿ ರಕ್ಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement