ಮಳೆಗೆ ಕೊಟ್ಟಿಗೆ ಗೋಡೆ ಕುಸಿತ: ಶೆಡ್‌ನಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸಾವು

ರಾಮನಗರ: ನಿರಂತರ ಮಳೆಗೆ ಕೊಟ್ಟಿಗೆ ಗೋಡೆ ಕುಸಿದಿದ್ದು, ಪಕ್ಕದಲ್ಲೇ ಮಲಗಿಕೊಂಡಿದ್ದ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೃತ ಮಕ್ಕಳನ್ನು ಪರ್ಭಿನ್(4), ಇಷಿಕಾ(3) ಎಂದು ಗುರುತಿಸಲಾಗಿದೆ. ಗೋಡೆ ಕುಸಿದ ಪರಿಣಾಮ ಶೆಡ್‍ನಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸಾವಿಗೀಡಾಗಿದ್ದು, ಮತ್ತಿಬ್ಬರಿಗೆ ಗಾಯವಾಗಿದೆ.

ನೇಪಾಳ ಮೂಲದ ಕುಟುಂಬವೊಂದು ದನದ ಕೊಟ್ಟಿಗೆ ಪಕ್ಕದಲ್ಲೇ ಶೆಡ್ ನಿರ್ಮಿಸಿಕೊಂಡು ವಾಸವಾಗಿತ್ತು. ಹೋಟೆಲ್ ಒಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು. ನಿರಂತರ ಮಳೆ ಬರುತ್ತಿದ್ದ ಕಾರಣ ಶೆಡ್ ಮೇಲೆ ಏಕಾಏಕಿ ಕೊಟ್ಟಿಗೆ ಗೋಡೆ ಕುಸಿದೆ. ಶೆಡ್‌ ಕುಸಿದು ಸ್ಥಳದಲ್ಲೇ ಮಲಗಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೀನಾ ಬಿತ್ತು ಮತ್ತು ಮೋನಿಷಾರಿ ಎಂಬವರಿಗೆ ಗಾಯವಾಗಿದೆ.
ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಗಾಯಾಳುಗಳಿಗೆ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಮುಖ ಸುದ್ದಿ :-   ವಾಟ್ಸಾಪ್​ನಲ್ಲಿ ಮದುವೆ ಆಮಂತ್ರಣ ಕಾರ್ಡ್‌ ಬಂದ್ರೆ ಕ್ಲಿಕ್ ಮಾಡುವ ಮುನ್ನ ಎಚ್ಚರ ; ಕ್ಲಿಕ್ ಮಾಡಿ 10 ಲಕ್ಷ ರೂ. ಕಳೆದುಕೊಂಡ ಅಧಿಕಾರಿ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement