ಕರುಳ ಕುಡಿಯನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ

ಬೆಂಗಳೂರು: ದಂತ ವೈದ್ಯೆಯೊಬ್ಬಳು ತನ್ನ ಹತ್ತು ವರ್ಷದ ಮಗಳನ್ನು ಸಾಯಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಂತ ವೈದ್ಯೆ ಸೈಮಾ (36) ತನ್ನ ಹತ್ತು ವರ್ಷದ ಮಗಳು ಆರಾಧನಾಳನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿರುವವಳು ಎಂದು ಗುರುತಿಸಲಾಗಿದೆ. ಜನಶಂಕರಿ 2ನೆ ಹಂತ, ಸೇವಾಶ್ರಮ ಆಸ್ಪತ್ರೆ ಸಮೀಪ ಸೈಮಾ ಅವರ ಮನೆಯಿದ್ದು, ಇವರ ಪತಿ ನಾರಾಯಣ ಸಹ ದಂತ ವೈದ್ಯರಾಗಿದ್ದಾರೆ. ಮಗಳು ಆರಾಧನಾ 4ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಈ ಕುಟುಂಬ ಅನ್ಯೋನ್ಯವಾಗಿಯೇ ಇತ್ತು ಎನ್ನಲಾಗಿದೆ. ಆದರೆ ಎರಡು ದಿನಗಳ ಹಿಂದೆ ಸೈಮಾ ತನ್ನ ಮಗಳನ್ನು ಫ್ಯಾನಿಗೆ ನೇಣು ಬಿಗಿದು ಕೊಲೆ ಮಾಡಿ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂದು ಪತಿ ನಾರಾಯಣ ಮನೆಯಲ್ಲಿರಲಿಲ್ಲ, ಅವರು ಮನೆಗೆ ಬಂದು ನೋಡಿದಾಗಲೇ ಪತ್ನಿ-ಮಗಳು ಸಾವಿಗೀಡಾಗಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ಸೈಮಾ ಅವರ ಸಹೋದರ ಆಸ್ಟ್ರೇಲಿಯಾದಿಂದ ಇದೀಗ ಬಂದಿದ್ದು, ಅವರು ನೀಡಿದ ದೂರಿನನ್ವಯ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೌಟುಂಬಿಕ ಮನಸ್ತಾಪ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಂಪಂಗಿರಾಮನಗರದಲ್ಲಿ ಇತ್ತೀಚೆಗೆ ದಂತ ವೈದ್ಯ ತನ್ನ ಬುದ್ಧಿ ಮಾಂದ್ಯ ಮಗಳನ್ನು ಮಹಡಿಯಿಂದ ಎಸೆದು ಸಾಯಿಸಿರುವ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.

ಇಂದಿನ ಪ್ರಮುಖ ಸುದ್ದಿ :-   ವಂಚನೆ ಪ್ರಕರಣ: ಆರೋಪಿ ಚೈತ್ರಾ ಹೆಸರಿನೊಂದಿಗೆ ʼಕುಂದಾಪುರʼ ಬಳಸದಂತೆ ಕೋರ್ಟ್‌ ನಿರ್ಬಂಧ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement