ನದಿಯಲ್ಲಿ ಹಠಾತ್ ಪ್ರವಾಹ: ಕೊಚ್ಚಿಹೋದ 14 ಕಾರುಗಳು, ವಾಹನ ಬಿಟ್ಟು ಓಡಿದ ಜನರು | ವೀಕ್ಷಿಸಿ

ಖಾರ್ಗೋನ್: ನದಿ ಮೇಲ್ಭಾಗದಲ್ಲಿ ಮಳೆಯ ನಂತರ ನದಿಯಲ್ಲಿ ಹಠಾತ್ ಪ್ರವಾಹದಿಂದಾಗಿ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಕಾಡಿನಲ್ಲಿ ಸುಮಾರು 50 ಜನರು ಸುರಕ್ಷತೆಗಾಗಿ ಎತ್ತರದ ಸ್ಥಳಗಳಿಗೆ ಓಡಿದ್ದಾರೆ ಹಾಗೂ ಕನಿಷ್ಠ 14 ಕಾರುಗಳು ಕೊಚ್ಚಿ ಹೋಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನರು ಭಾನುವಾರ ಸಂಜೆ ಬಲವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಕೂಟ್ ಅರಣ್ಯದ ಸುಕ್ದಿ ನದಿಯ ಬಳಿ ಪಿಕ್ನಿಕ್‌ಗೆ ಬಂದಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಸಿಂಗ್ ಪವಾರ್ ತಿಳಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ಪ್ರದೇಶದಲ್ಲಿ ಮಳೆಯ ಹಿನ್ನೆಲೆಯಲ್ಲಿ ನದಿಯ ನೀರಿನ ಮಟ್ಟ ಹಠಾತ್‌ ಏರಿಕೆಯಾಗಿದೆ. ಪಿಕ್ನಿಕ್ ಮಾಡುವವರು ತಮ್ಮ ಕಾರುಗಳು ಮತ್ತು ಎಸ್‌ಯುವಿಗಳನ್ನು ಬಿಟ್ಟು ತಮ್ಮನ್ನು ಉಳಿಸಿಕೊಳ್ಳಲು ಕಾಡಿನ ಎತ್ತರದ ಸ್ಥಳಗಳಿಗೆ ಧಾವಿಸಿದರು ಎಂದು ಅಧಿಕಾರಿ ಹೇಳಿದರು. ಕೆಲವು ಎಸ್‌ಯುವಿಗಳು ಸೇರಿದಂತೆ ಕನಿಷ್ಠ 14 ಕಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಅವರು ಹೇಳಿದರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯ ಗ್ರಾಮಸ್ಥರ ಟ್ರ್ಯಾಕ್ಟರ್‌ಗಳ ಸಹಾಯದಿಂದ 10 ಕಾರುಗಳು ಮತ್ತು ಎಸ್‌ಯುವಿಗಳನ್ನು ಹೊರತೆಗೆದಿದ್ದಾರೆ. ಹಾಗೂ ಉಳದವುಗಳನ್ನು ಹುಡುಕಿ ಮೇಲೆತ್ತಲು ಪ್ರಯತ್ನ ನಡೆಸಿದ್ದಾರೆ. ಆದಾಗ್ಯೂ, ವಾಹನಗಳಿಗೆ ನೀರು ನುಗ್ಗಿದ್ದರಿಂದ ತಾಂತ್ರಿಕ ದೋಷಗಳಿಂದ ಕಾರುಗಳು ಪ್ರಾರಂಭವಾಗಿಲ್ಲ. ಹೀಗಾಗಿ ಪಿಕ್ನಿಕ್‌ಗೆ ಬಂದವರನ್ನು ಬೇರೆ ವಾಹನಗಳಲ್ಲಿ ಅವರ ಮನೆಗಳಿಗೆ ಕಳುಹಿಸಲಾಯಿತು ಎಂದು ಅಧುಕಾರಿ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಕೇರಳದ 873 ಪೊಲೀಸರಿಗೆ ಪಿಎಫ್‌ಐ ಜೊತೆ ನಂಟು ಎಂದು ಎನ್‌ಐಎ ವರದಿ-ಇದು ಆಧಾರ ರಹಿತ ಮಾಧ್ಯಮ ವರದಿ ಎಂದು ತಳ್ಳಿಹಾಕಿದ ಕೇರಳ ಪೊಲೀಸ್‌

ಇತರ ಮೂರು ಕಾರುಗಳು ದೂರದ ಸ್ಥಳಗಳಿಗೆ ಕೊಚ್ಚಿಹೋಗಿವೆ, ಒಂದು ಸೇತುವೆಯ ಕಂಬದ ಬಳಿ ಸಿಲುಕಿಕೊಂಡಿದೆ ಎಂದು ಅವರು ಹೇಳಿದರು.ಅಂತಹ ಸ್ಥಳಗಳಲ್ಲಿ ಹಠಾತ್ ನೀರು ಉಲ್ಬಣಗೊಳ್ಳುವ ಅಪಾಯದ ಬಗ್ಗೆ ತಿಳಿಸಲು ಈ ಪ್ರದೇಶದಲ್ಲಿ ಬೋರ್ಡ್ ಹಾಕಲು ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement