ಎತ್ತಣ ಗೋವಿನ ಸಗಣಿ..ಎತ್ತಣ ರಾಖಿ ?: ದೇಶೀ ಹಸುವಿನ ಸಗಣಿಯಿಂದ ತಯಾರಾದ 60,000 ರಾಖಿಗಳು ಈಗ ಅಮೆರಿಕ, ಮಾರಿಷಯಸ್‌ಗೆ ರಫ್ತು…!

ಜೈಪುರ: ಅಮೆರಿಕ ಮತ್ತು ಮಾರಿಷಸ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಈ ವರ್ಷದ ರಕ್ಷಾ ಬಂಧನ ವಿಭಿನ್ನವಾಗಿರಲಿದ್ದು, ಜೈಪುರದಿಂದ ಕಳುಹಿಸಿರುವ ಹಸುವಿನ ಸೆಗಣಿಯ ಸಾವಯವ ರಾಖಿಗಳನ್ನು ತಮ್ಮ ಕೈಗೆ ಕಟ್ಟಿಕೊಳ್ಳಲಿದ್ದಾರೆ…!
ಅಮೆರಿಕದಿಂದ 40,000 ರಾಖಿಗಳ ಆರ್ಡರ್ ಬಂದಿದ್ದರೆ, ಮಾರಿಷಯಸ್‌ನಿಂದ 20,000 ರಾಖಿಗಳಿಗೆ ಆರ್ಡರ್ ಬಂದಿದೆ ಎಂದು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ಅತುಲ್ ಗುಪ್ತಾ ಹೇಳಿದ್ದಾರೆ, ಇದು ಕೆಲವು ತಿಂಗಳ ಹಿಂದೆ ಜೈಪುರದಿಂದ 192 ಮೆಟ್ರಿಕ್ ಟನ್ ಗೋಮಯವನ್ನು ಕುವೈತ್‌ಗೆ ರಫ್ತು ಮಾಡಿದ ನಂತರದ ಬೆಳವಣಿಗೆಯಾಗಿದೆ.
ಸಂಘದ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ಸಂಗೀತಾ ಗೌರ್ ಅವರ ಪ್ರಕಾರ, “ಈ ವರ್ಷ, ಗೋವಿನ ಸಗಣಿಯಿಂದ ಮಾಡಿದ ರಾಖಿಗಳು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆಕರ್ಷಣೆಯ ಕೇಂದ್ರವಾಗಿದೆ. ಈ ರಾಖಿಗಳನ್ನು ಶ್ರೀ ಪಿಂಜರಾಪೋಳ್‌ ಗೌಶಾಲಾ ಕಾಂಪ್ಲೆಕ್ಸ್‌ನ ಸನ್‌ರೈಸ್ ಆರ್ಗ್ಯಾನಿಕ್ ಪಾರ್ಕ್‌ನಲ್ಲಿರುವ ದೇಶೀಯ ಹಸುವಿನ ಸಗಣಿಯಿಂದ ತಯಾರಿಸಲಾಗಿದೆ. ನಮ್ಮ ಮಹಿಳಾ ಘಟಕವು ರಕ್ಷಾ ಬಂಧನದಂದು ಹಸುವಿನ ಸಗಣಿ ಮತ್ತು ವಿವಿಧ ಬೀಜಗಳಿಂದ ತಯಾರಿಸಿದ ರಾಖಿಗಳನ್ನು ರಫ್ತು ಮಾಡಲು ನಿರ್ಧರಿಸಿದೆ. ಈ ರಾಖಿಗಳು ಸಾಗರೋತ್ತರ ಭಾರತೀಯರೊಂದಿಗಿನ ಸಹೋದರ ಮತ್ತು ಸಹೋದರಿಯ ಪವಿತ್ರ ಸಂಬಂಧವನ್ನು ಸಂಕೇತಿಸುತ್ತವೆ ಎಂದು ಅವರು ಹೇಳಿದ್ದಾರೆ.

ಜೈಪುರದಲ್ಲಿ ತಯಾರಾದ 60,000 ಗೋಮಯ ರಾಖಿಗಳನ್ನು ಅಮೆರಿಕ ಮತ್ತು ಮಾರಿಷಸ್‌ಗೆ ರಫ್ತು ಮಾಡಲಾಗುತ್ತದೆ. ಹಸುವಿನ ಸಗಣಿ ರಾಖಿಗಳಿಂದ ಬರುವ ಆದಾಯವನ್ನು ಗೋವನ್ನು ರಕ್ಷಿಸುವ ಅರ್ಥಪೂರ್ಣ ಕೆಲಸಗಳಿಗೆ ಬಳಸಲಾಗುವುದು. ಅಲ್ಲದೆ, ಈ ಪ್ರಾಚೀನ ರಾಖಿಗಳನ್ನು ತಯಾರಿಸುವಾಗ, ಹ್ಯಾನೆಮನ್ ಚಾರಿಟಬಲ್ ಮಿಷನ್ ಸೊಸೈಟಿಯ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ತಮ್ಮ ಜೀವನೋಪಾಯದ ಆದಾಯ ಗಳಿಸುವ ಮೂಲಕ ಸ್ವಾವಲಂಬಿಗಳಾಗುತ್ತಾರೆ. ಜನರು ಚೀನಾದ ರಾಖಿಗಳು ಮತ್ತು ಪರಿಸರವನ್ನು ಮಾಲಿನ್ಯಗೊಳಿಸುವ ಇತರ ರಾಖಿಗಳನ್ನು ಬಳಸಲು ಇಷ್ಟಪಡುವುದಿಲ್ಲ. ಇದಲ್ಲದೆ ಕೈ ಮಣಿಕಟ್ಟಿನ ಮೇಲೆ ಹಸುವಿನ ಸಗಣಿಯಿಂದ ಮಾಡಿದ ರಾಖಿಯನ್ನು ಕಟ್ಟುವುದರಿಂದ ವಿಕಿರಣದಿಂದ ರಕ್ಷಣೆ ದೊರೆಯುತ್ತದೆ ಎಂದು ಅವರು ಎಂದು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಹಾನೆಮನ್ ಚಾರಿಟಬಲ್ ಮಿಷನ್ ಸೊಸೈಟಿಯ ಕಾರ್ಯದರ್ಶಿ ಮೋನಿಕಾ ಗುಪ್ತಾ ಮಾತನಾಡಿ, “ಜನರು ಹಸುಗಳನ್ನು ಗೌರವಿಸುತ್ತಾರೆ, ಆದ್ದರಿಂದ ರಾಖಿಗಳನ್ನು ಹಸುವಿನ ಸಗಣಿ ಮತ್ತು ಔಷಧೀಯ ಬೀಜಗಳಿಂದ ತಯಾರಿಸಲಾಗುತ್ತಿದೆ. ಸಗಣಿಯನ್ನು ಬಿಸಿಲಿನಲ್ಲಿ ಸಂಪೂರ್ಣವಾಗಿ ಒಣಗಿಸಲಾಗುತ್ತದೆ, ಇದು 95 ಪ್ರತಿಶತದಷ್ಟು ಸಗಣಿ ವಾಸನೆಯನ್ನು ತೆಗೆದುಹಾಕುತ್ತದೆ. ಇದರ ನಂತರ, ಹಸುವಿನ ಸಂಪೂರ್ಣ ಒಣಗಿದ ಸಗಣಿಯ ಉತ್ತಮವಾದ ಪುಡಿ ಮಾಡಿ ಅದಕ್ಕೆ ಹಸುವಿನ ತುಪ್ಪ, ಅರಿಶಿನ, ಬಿಳಿ ಜೇಡಿಮಣ್ಣು ಮತ್ತು ಶ್ರೀಗಂಧವನ್ನು ಬೆರೆಸಲಾಗುತ್ತದೆ, ಇದನ್ನು ಇತರ ಸಾವಯವ ಉತ್ಪನ್ನಗಳೊಂದಿಗೆ ಹಿಟ್ಟಿನಂತೆ ಬೆರೆಸಲಾಗುತ್ತದೆ, ನಂತರ ಇದನ್ನು ವರ್ಣರಂಜಿತ ರಾಖಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಅದು ಸಿದ್ಧವಾದ ನಂತರ, ಹಿಂಭಾಗದ ಮೇಲ್ಮೈಯಲ್ಲಿ ಮುತ್ತಿನ ದಾರವನ್ನು ಹಾಕಲಾಗುತ್ತದೆ, ಅದನ್ನು ಮಣಿಕಟ್ಟಿನ ಮೇಲೆ ಕಟ್ಟಲು ಬಳಸಲಾಗುತ್ತದೆ. ಇಡೀ ಪ್ರಕ್ರಿಯೆಯಲ್ಲಿ ಯಾವುದೇ ರಾಸಾಯನಿಕ ವಸ್ತುವನ್ನು ಬಳಸಲಾಗುವುದಿಲ್ಲ ಎಂದು ಹೇಳುತ್ತಾರೆ.

ರಕ್ಷಾ ಬಂಧನದ ನಂತರ ಹೆಚ್ಚಿನವರು ರಾಖಿಗಳನ್ನು ಸ್ವಲ್ಪ ಸಮಯದ ನಂತರ ತೆಗೆದು ಎಸೆಯುತ್ತಾರೆ. ಸಹೋದರ ಸಹೋದರಿಯರ ಪ್ರೀತಿಯ ಸಂಕೇತವಾದ ರಾಖಿ ಕೆಲವು ದಿನಗಳ ನಂತರ ಕಸದ ರಾಶಿಯನ್ನು ತಲುಪುತ್ತದೆ. ಈ ಹಿನ್ನೆಲೆಯಲ್ಲಿ ರಾಖಿಯಲ್ಲಿ ತುಳಸಿ, ಅಶ್ವಗಂಧ, ಕಲ್ಮೇಘ ಸೇರಿದಂತೆ ಇತರೆ ಕಾಳುಗಳನ್ನು ಹಾಕಲಾಗುತ್ತಿದ್ದು, ರಾಖಿ ಬಿಸಾಡುವ ಬದಲು ಕುಂಡದಲ್ಲಿ ಅಥವಾ ಮನೆಯ ಅಂಗಳದಲ್ಲಿ ಹಾಕಲು ಈ ಉಪಕ್ರಮವು ಸಹಕಾರಿಯಾಗಲಿದೆ. ರಾಖಿಯೊಳಗೆ ಬೀಜಗಳ ಸಹಾಯದಿಂದ ಒಂದು ಸಸಿಯನ್ನು ಸಂಗ್ರಹಿಸಲಾಗಿದೆ ಎಂದು ಮೋನಿಕಾ ಹೇಳುತ್ತಾರೆ. .
ಈ ರಾಖಿಗಳನ್ನು ಜೈಪುರ ನಗರದ ವಿತರಕರ ಮೂಲಕ ಸುಮಾರು 250 ಸ್ಥಳಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದಕ್ಕೂ ಮುನ್ನ ಕುವೈತ್ ಮೂಲದ ಲಾಮರ್ ಕಂಪನಿ192 ಮೆಟ್ರಿಕ್ ಟನ್ ದೇಶಿ ಹಸುವಿನ ಸಗಣಿಗಾಗಿ ಆರ್ಡರ್ ಮಾಡಿತ್ತು. “ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಅಭಿವೃದ್ಧಿ ಸಂಶೋಧನೆಯು ಈ ಆದೇಶವನ್ನು ಪಡೆದುಕೊಂಡಿದೆ” ಎಂದು ಅತುಲ್ ಗುಪ್ತಾ ತಿಳಿಸಿದ್ದರು. ಕುವೈತ್‌ನಿಂದ ಭಾರತದಿಂದ ಹಸುಗಳ ಸಗಣಿ ಆಮದು ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು ಎಂದು ಕಂಪನಿಯ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement