ವಿಲಕ್ಷಣ ಘಟನೆ…: ರೈಲಿನ ಸೀಟಿಗೆ ಗೂಳಿ ಕಟ್ಟಿದರು, ಕೊನೆಯ ನಿಲ್ದಾಣದಲ್ಲಿ ಕೆಳಗಿಳಿಸಲು ಹೇಳಿದರು: ವೀಕ್ಷಿಸಿ

ಜಾರ್ಖಂಡದಲ್ಲಿ ವಿಲಕ್ಷಣ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿವೈರಲ್‌ ಆಗಿದ್ದು, ಸ್ಥಳೀಯ ರೈಲಿನಲ್ಲಿ ಬೃಹತ್‌ ಎತ್ತು (ಸಾಂಡ್) ಏಕಾಂಗಿಯಾಗಿ ಪ್ರಯಾಣಿಸುತ್ತಿರುವುದನ್ನು ತೋರಿಸುವ ವೀಡಿಯೊ ಬೆಳಕಿಗೆ ಬಂದಿದೆ.
ಜಾರ್ಖಂಡದ ಮಿರ್ಜಾ ಚೌಕಿಯಿಂದ ಸಾಹಿಬ್‌ಗಂಜ್‌ಗೆ ರೈಲು ಪ್ರಯಾಣಿಸುತ್ತಿದೆ ಎಂದು ಪತ್ರಕರ್ತ ಪ್ರಕಾಶ್ ಕುಮಾರ್ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ವೀಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ರೈಲಿನ ಪ್ರಯಾಣಿಕರು ಗೂಳಿ ಪ್ರಯಾಣಿಸುತ್ತಿದ್ದ ಕೋಚ್ ಅನ್ನು ಸ್ವತಃ ಖಾಲಿ ಮಾಡಿದ್ದಾರೆ. ಗೂಳಿಯನ್ನು ರೈಲಿಗೆ ಕಟ್ಟಿ ಹಾಕಿದ್ದು, ಕೋಚ್‌ನಲ್ಲಿ ಕೆಲವೇ ಪ್ರಯಾಣಿಕರು ಇರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ನಂತರ ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯು ರೈಲಿನೊಳಗೆ ಗೂಳಿ ಹೇಗೆ ಅಲ್ಲಿಗೆ ಬಂತು ಎಂಬುದನ್ನು ವಿವರಿಸಲು ಪ್ರಯಾಣಿಕರೊಬ್ಬರನ್ನು ಕೇಳಿದ್ದಾರೆ. ಗೂಳಿ ರೈಲ್ವೆ ಬಾಗಲ ಬಳಿ ನಿಂತಿದ್ದರಿಂದ ಆ ವ್ಯಕ್ತಿ ಗೂಳಿಯಿಂದ ತಪ್ಪಿಸಿಕೊಳ್ಳಲು ಆಸನವನ್ನು ಏರಿ ಕೆಳಕ್ಕೆ ಧುಮುಕಿದ್ದು ವೀಡಿಯೊದಲ್ಲಿ ಕಂಡಬರುತ್ತದೆ.

ಮಿರ್ಜಾ ಚೌಕಿ ರೈಲು ನಿಲ್ದಾಣದಿಂದ ರೈಲಿನಲ್ಲಿ ಸುಮಾರು 10-12 ಜನರು ಗೂಳಿಯನ್ನು ಹತ್ತಿಸಿ ಸೀಟಿಗೆ ಕಟ್ಟಿ ಅಲ್ಲಿಂದ ಹೊರಟರು ಎಂದು ವ್ಯಕ್ತಿ ವಿವರಿಸಿದರು. ಹೊರಡುವ ಮೊದಲು, ಅಪರಿಚಿತ ವ್ಯಕ್ತಿಗಳು ಗೂಳಿಯನ್ನು ಬಿಡಿಸಲು ಮತ್ತು ಸಾಹಿಬ್‌ಗಂಜ್ ನಿಲ್ದಾಣದಲ್ಲಿ ಅದನ್ನು ಬಿಡುವಂತೆ ಪ್ರಯಾಣಿಕರನ್ನು ಕೇಳಿಕೊಂಡರು ಎಂದು ಅವರು ಹೇಳಿದರು.
ಘಟನೆ ಅತಿರೇಕದ ಸಂಗತಿ ಎಂದು ನೆಟ್ಟಿಗರು ಹೇಳಿದ್ದು, ಹತ್ತಾರು ಮಂದಿ ಗೂಳಿಯನ್ನು ರೈಲಿನಲ್ಲಿ ಬಿಟ್ಟಾಗ ರೈಲ್ವೇ ಪೊಲೀಸರು ಹಾಗೂ ಇತರೆ ಅಧಿಕಾರಿಗಳು ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement