ತನ್ನ ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ

posted in: ರಾಜ್ಯ | 0

ಚಾಮರಾಜನಗರ: ಕಾಲೇಜು ಉಪನ್ಯಾಸಕಿಯೋರ್ವರು ತಮ್ಮ ಜನ್ಮದಿನದಂದೇ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ನಗರದ ಜೆಎಸ್‌ಎಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಚಂದನಾ (26) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಚಂದನಾ ಯಳಂದೂರು ತಾಲ್ಲೂಕು ಅಂಬಳೆ ಗ್ರಾಮದವರು. ನಗರದ ಜೆ ಎಸ್ ಎಸ್ ಕಾಲೇಜು ಜೀವಶಾಸ್ತ್ರ ಉಪನ್ಯಾಸಕಿಯಾಗಿದ್ದರು. ಹಾಗೂ ನಗರದ ಜೆ ಎಸ್ ಎಸ್ ಕಾಲೇಜು ಕ್ಯಾಂಪಸ್ ನಲ್ಲಿರುವ ಹಾಸ್ಟೆಲ್‌ನಲ್ಲಿ ವಾಸವಿದ್ದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದು, ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಘಟನೆ‌ ನಡೆದಿರಬಹುದೆಂದು ಅಂದಾಜಿಸಗಿದೆ. ಮಧ್ಯಾಹ್ನ 11:30 ಕಳೆದರೂ ಚಂದನಾ ಅವರು ಹಾಸ್ಟೆಲ್ ರೂಮಿನಿಂದ ಹೊರಬಂದಿಲ್ಲವೆಂದು ವೆಂಟಿಲೇಟರ್ ಮೂಲಕ ನೋಡಿದಾಗ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.
ಡೆತ್‌ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ. ಆದರೆ ನಿಖರ ಕಾರಣ ತಿಳಿಸಿಲ್ಲ. ಇಂದು, ಮಂಗಳವಾರವೇ ಅವರ ಜನ್ಮದಿನವಾಗಿದ್ದು ಹಾಸ್ಟೆಲ್ ಸಹೋದ್ಯೋಗಿಗಳುವ ಬೆಳಿಗ್ಗೆ ಅವರಿಗೆ ಶುಭ ಕೋರಿದ್ದಾರೆ. ಆದರೆ ಕೆಲ ಸಮಯದ ಬಳಿಕ ಸಾವಿಗೆ ಶರಣಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಕಾರ್ತಿಕ ಮಾಸದಲ್ಲಿ ಕರ್ನಾಟಕಕ್ಕೆ ತೊಂದರೆ, ಮಳೆ ಮುಂದುವರಿಕೆ, ಮುಂದಿನ ಯುಗಾದಿ ವರೆಗೂ ವಿಷ ಜಂತುಗಳು ತಾಂಡವ: ಕೋಡಿಮಠ ಶ್ರೀಗಳ ಭವಿಷ್ಯ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement