ಚಾಮರಾಜಪೇಟೆ ಈದ್ಗಾ ಮೈದಾನ : ಶಾಸಕ ಜಮೀರ್‌ ಅಹಮ್ಮದ್‌-ಸಚಿವ ಆರ್‌ ಅಶೋಕ ಮಾತಿನ ಸಮರ

ಬೆಂಗಳೂರು: ಬೆಂಗಳೂರಿನ ಈದ್ಗಾ ಮೈದಾನ ಎಂದೇ ಹೆಸರಾಗಿರುವ ವಿವಾದಿತ ಚಾಮರಾಜಪೇಟೆ ಮೈದಾನದ ಮಾಲೀಕತ್ವ ಇತ್ಯರ್ಥಗೊಂಡಿದ್ದರೂ, ವಿವಾದ ಮುಂದುವರಿದಿದೆ.
ಸ್ಥಳೀಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಮತ್ತು ಕಂದಾಯ ಸಚಿವ ಆರ್ ಅಶೋಕ ಅವರು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡುವ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದಾರೆ.
ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ ಮತ್ತು ಅದಕ್ಕೆ ಅನುಮತಿ ಪಡೆಯುವ ಅಗತ್ಯವಿಲ್ಲ, ಗಣೇಶ ಹಬ್ಬಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಮೀರ್‌ ಅಹ್ಮದ್ ಹೇಳಿದ್ದಾರೆ. ಆದರೆ ಸಚಿವ ಅಶೋಕ ಅವರು, ನಮಾಜ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಕಂದಾಯ ಇಲಾಖೆಯ ಅನುಮತಿ ಅಗತ್ಯವಿದೆ ಎಂದು ಹೇಳಿದರು. ಇಲ್ಲಿ ಗಣೇಶನ ಆಚರಣೆಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬಹುದು ಎಂದು ಅವರು ಹೇಳಿದರು.

ಚಾಮರಾಜಪೇಟೆಯ 2.5 ಎಕರೆ ವಿಸ್ತೀರ್ಣದ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಘೋಷಿಸಿದ ಎರಡು ದಿನಗಳ ನಂತರ ಶಾಸಕ ಜಮೀರ್ ಅಹಮದ್ ಖಾನ್ ಮಾತನಾಡಿ, ಧರ್ಮಗಳನ್ನು ಮೀರಿ ಜನರು ಕೈಜೋಡಿಸಿ ಪ್ರಥಮ ಬಾರಿಗೆ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆೆಂದು ಹೇಳಿದ್ದಾರೆ. ಆದರೆ“ಇಲ್ಲಿ ಗಣೇಶ ಮಂಟಪ ಬೇಡ” ಎಂದರು.
ಈ ಮೈದಾನವು ದೇವಾಲಯಗಳು ಮತ್ತು ಮಸೀದಿಯಿಂದ ಸುತ್ತುವರಿದಿದೆ ಎಂದು ಅಶೋಕ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. 1964ರ ದಾಖಲೆಯ ಪ್ರಕಾರ ಈ ಆಸ್ತಿ ಕಂದಾಯ ಇಲಾಖೆಗೆ ಸೇರಿದ್ದು, ಮೈದಾನದಲ್ಲಿ ಗಣೇಶ ಉತ್ಸವ, ಧ್ವಜಾರೋಹಣ, ಪ್ರಾರ್ಥನೆ ಅಥವಾ ನಮಾಜ್‌ಗೆ ಅವಕಾಶ ನೀಡುವ ಬಗ್ಗೆ ಇಲಾಖೆ ನಿರ್ಧರಿಸುತ್ತದೆ ಎಂದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ನಾವು ಪರಿಶೀಲಿಸುತ್ತೇವೆ ಮತ್ತು ಕಾನೂನಿನ ಪ್ರಕಾರ ಅನುಮತಿ ನೀಡುತ್ತೇವೆ. ಯಾವುದೇ ಗೊಂದಲ ಇರಬಾರದು. ಯಾರಾದರೂ ನಮಗೆ ಜ್ಞಾಪಕ ಪತ್ರವನ್ನು ನೀಡಬಹುದು, ಕಾನೂನಿನ ಪ್ರಕಾರ ನಾವು ಅನುಮತಿ ನೀಡುತ್ತೇವೆ, ನಾವು ಸಂವಿಧಾನದ ಪ್ರಕಾರ ನಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಮೈದಾನದಲ್ಲಿ ಧ್ವಜಾರೋಹಣ ಮಾಡುವುದಾಗಿ ಜಮೀರ್ ಅಹಮದ್ ಘೋಷಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಅಶೋಕ ಅವರು, ಸರ್ಕಾರಕ್ಕೆ ಇದುವರೆಗೆ ಯಾವುದೇ ಅರ್ಜಿ ಬಂದಿಲ್ಲ ಎಂದು ಹೇಳಿದ್ದಾರೆ.
ಈ ಜಾಗವನ್ನು ಬಳಸಲು ಬಯಸುವ ಎರಡು ಮೂರು ವ್ಯಕ್ತಿಗಳು ಮತ್ತು ಸಂಸ್ಥೆಗಳು ಇವೆ. ನಾವು ಎಲ್ಲರಿಗೂ ಅನುಮತಿ ನೀಡಲು ಸಾಧ್ಯವಿಲ್ಲ, ಸರ್ಕಾರಿ ಜಮೀನು ಬಳಕೆಯಲ್ಲಿ ಈ ರೀತಿಯ ವಿವಾದಗಳು ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿರುವಾಗ ಅನುಮತಿ ಅಗತ್ಯವಿದೆ, ”ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement