ಶಿರಸಿ: ಕರಡಿ ದಾಳಿಯಿಂದ ಉಪ್ಪಾಗೆ ಹಣ್ಣು ಸಂಗ್ರಹಕ್ಕೆ ಕಾಡಿಗೆ ಹೋಗಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

ಶಿರಸಿ: ಕರಡಿ ದಾಳಿಗೆ ವ್ಯಕ್ತಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕರಡಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯನ್ನು ಓಂಕಾರ ಜೈನ್(52) ಎಂದು ಗುರುತಿಸಲಾಗಿದೆ. ಓಂಕಾರ್ ಅವರು ಮನೆಯ ಸಮೀಪದ ಕಾಡಿಗೆ ಉಪ್ಪಾಗೆ ಕಾಯಿ ಸಂಗ್ರಹಿಸಲು ಕಾಡಿಗೆ ಹೋದ ಸಂದರ್ಭದಲ್ಲಿ ಅವರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಮರದ ಬುಡದಲ್ಲಿ ಅವರ ದೇಹ ಪತ್ತೆಯಾಗಿದ್ದು, ತಪ್ಪಿಸಿಕೊಳ್ಳಲು ಮರ ಏರುವಾಗ ಕರಡಿ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಚೀರಾಟ ಕೇಳಿದ ನಂತರ ಕಾಡಿಗೆ ಓಡಿದೆವು, ಆದರೆ ನಾವು ಹೋಗಿ ನೋಡಿದಾಗ ಮರದ ಬುಡದಲ್ಲಿ ಗಂಭೀರ ಗಾಯಗಳಿದ್ದ ಓಂಕಾರ ಅವರ ಮೃತ ದೇಹವಿತ್ತು. ಅವರ ದೇಹದ ಮೇಲಾದ ಗಾಯ ಗಮನಿಸಿದಾಗ ಇದು ಕರಡಿ ದಾಳಿ ಎಂದು ಅನಿಸುತ್ತದೆ’ ಎಂದು ಸ್ಥಳೀಯರು ಹೇಳಿದ್ದಾರೆ. ಕರಡಿ ದಾಳಿಯಲ್ಲಿ ತಲೆ ಹಾಗೂ ಮೂಖದ ಭಾಗವನ್ನು ಛಿದ್ರಗೊಳಿಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement