ನೂಪುರ್ ಶರ್ಮಾ ಹತ್ಯೆಗೆ ಜೆಇಎಂ ಭಯೋತ್ಪಾದಕ ಸಂಘಟನೆಯಿಂದ ನಿಯೋಜಿಸಿದ್ದ ಉಗ್ರನ ಬಂಧನ

ಲಕ್ನೋ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶುಕ್ರವಾರ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ತೆಹ್ರಿಖ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ)-ಸಂಬಂಧಿತ ಭಯೋತ್ಪಾದಕ ಮುಹಮ್ಮದ್ ನದೀಮ್‌ನನ್ನು ಸಹರಾನ್‌ಪುರದಿಂದ ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೆಇಎಂ ಮತ್ತು ಟಿಟಿಪಿಯೊಂದಿಗೆ ನದೀಮ್ ನೇರ ಸಂಪರ್ಕ ಹೊಂದಿದ್ದ. ನೂಪುರ್ ಶರ್ಮಾ ಅವರನ್ನು ಕೊಲ್ಲುವ ಕೆಲಸವನ್ನು ಜೆಎಂ ಈತನಿಗೆ ನೀಡಿತ್ತು ಎಂದು ಉತ್ತರ ಪ್ರದೇಶ ಎಟಿಎಸ್ ಹೇಳಿದೆ ಎಂದು ವರದಿ ತಿಳಿಸಿದೆ.

ಈ ಬೆಳವಣಿಗೆಯು ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಎರಡು ದಿನಗಳ ಮೊದಲು ಮತ್ತು ಉತ್ತರ ಪ್ರದೇಶ ಎಟಿಎಸ್ ಅಜಂಗಢದಿಂದ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತನನ್ನು ಬಂಧಿಸಿದ ಕೆಲ ದಿನಗಳ ನಂತರ ಬಂದಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖ ನಾಯಕನನ್ನು ಗುರಿಯಾಗಿಸಲು ಈ ಕಾರ್ಯಕರ್ತ ಯೋಜಿಸುತ್ತಿದ್ದ ಎನ್ನಲಾಗಿದೆ. ಐಎಸ್ ಕಾರ್ಯಕರ್ತನಿಂದ ಅಕ್ರಮ ಬಂದೂಕು ಮತ್ತು ಬಾಂಬ್ ತಯಾರಿಸಲು ಬಳಸುವ ಸಾಮಗ್ರಿಗಳನ್ನು ಎಟಿಎಸ್‌ ವಶಪಡಿಸಿಕೊಂಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement