ಸಾಫ್ಟ್‌ವೇರ್ ದೋಷ ; ದೆಹಲಿಯಲ್ಲಿ 300 ವಿಮಾನಗಳು ವಿಳಂಬ, ಕೆಲವು ವಿಮಾನಗಳು ರದ್ದಾಗುವ ಸಾಧ್ಯತೆ

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಶುಕ್ರವಾರ ಏರ್ ಟ್ರಾಫಿಕ್ ಕಂಟ್ರೋಲ್ (ATC) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ 300ಕ್ಕೂ ಹೆಚ್ಚು ವಿಮಾನಗಳ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದೆ. ಇದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದು, ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲೂ ಇದರ ಪರಿಣಾಮ ಕಂಡುಬಂದಿದೆ. ಗುರುವಾರ … Continued

ಮಾಲೆಗಾಂವ್ ಸ್ಫೋಟ | ಮೋಹನ ಭಾಗವತರ ಬಂಧಿಸಲು ಆದೇಶಿಸಲಾಗಿತ್ತು’: ನಿವೃತ್ತ ಎಟಿಎಸ್ ಅಧಿಕಾರಿ ಸ್ಫೋಟಕ ಮಾಹಿತಿ

ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಏಳು ಜನರನ್ನು ಖುಲಾಸೆಗೊಳಿಸಿದ ನಂತರ, ಈ ಪ್ರಕರಣದ ಮಾಜಿ ತನಿಖಾ ಅಧಿಕಾರಿಯೊಬ್ಬರು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆಯ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್ ಅವರನ್ನು ಬಂಧಿಸಲು ಆದೇಶಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ʼಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯೇ ನಕಲಿ. ಇದನ್ನು … Continued

ಮಾಲೆಗಾಂವ್ ಸ್ಫೋಟ : ಪ್ರಜ್ಞಾ ಠಾಕೂರ್‌, ಕರ್ನಲ್ ಪುರೋಹಿತ ಸೇರಿ ಎಲ್ಲ ಆರೋಪಿಗಳು ಖುಲಾಸೆ

ಮುಂಬೈ: ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಆರು ಜನರು ಸಾವಿಗೀಡಾದ ಮತ್ತು ನೂರಕ್ಕೂ ಹೆಚ್ಚು ಜನರಿಗೆ ಗಾಯಗೊಂಡ ಪ್ರಬಲ ಬಾಂಬ್ ಸ್ಫೋಟದ ಘಟನೆಯ ಸುಮಾರು 17 ವರ್ಷಗಳ ನಂತರ, ಮುಂಬೈನ ವಿಶೇಷ ನ್ಯಾಯಾಲಯವು ಇಂದು, ಗುರುವಾರ (ಜುಲೈ ೩೧) ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಮತ್ತು ಮಾಜಿ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ ಶ್ರೀಕಾಂತ ಪುರೋಹಿತ್ ಸೇರಿದಂತೆ … Continued

ಅಲ್-ಖೈದಾ ಭಯೋತ್ಪಾದಕ ಜಾಲ ಭೇದಿಸಿದ ಗುಜರಾತ್ ಎಟಿಎಸ್ ; ನಾಲ್ವರ ಬಂಧನ

ಅಹಮದಾಬಾದ್‌ : ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಅಲ್-ಖೈದಾ ಭಯೋತ್ಪಾದನಾ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ನಾಲ್ವರನ್ನು ಬಂಧಿಸಿದೆ ಎಂದು ಹೇಳಿಕೊಂಡಿದೆ. ಅಧಿಕಾರಿಗಳ ಪ್ರಕಾರ, ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (AQIS) ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ. ” ಅಲ್-ಖೈದಾ ಭಯೋತ್ಪಾದಕ ಸಂಘಟನೆ ಜೊತೆ ಸಂಯೋಜಿತವಾಗಿರುವ ಭಯೋತ್ಪಾದಕ ಘಟಕವನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS ) ಪತ್ತೆಹಚ್ಚಿದೆ. … Continued

ಪುಣೆ ಸ್ಫೋಟ ಪ್ರಕರಣ : ಭಟ್ಕಳದ ಯುವಕನ ಮನೆಗೆ ನೋಟಿಸ್ ಅಂಟಿಸಿದ ಮಹಾರಾಷ್ಟ್ರ ಎಟಿಎಸ್

ಭಟ್ಕಳ: ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿರುವ ಉಗ್ರ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿ ಭಟ್ಕಳ ನವಾಯತ ಕಾಲೋನಿಯ ಯುವಕನಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ಮನೆಗೆ ನೋಟೀಸ್‌ ಅಂಟಿಸಿದೆ ಎಂದು ವರದಿಯಾಗಿದೆ. ಮೂಲತಃ ಭಟ್ಕಳ ನವಾಯತ್ ಕಾಲೋನಿ ಹಾಜಿ ಮಂಜಿಲ್ ನಿವಾಸಿಯಾಗಿರುವ ಅಬ್ದುಲ್ ಕಾದಿರ್ ಸುಲ್ತಾನ್‌ ಅಲಿಯಾಸ್ ಮೌಲಾನಾ ಸುಲ್ತಾನ ಎಂಬ ಶಂಕಿನ ಮೇಲೆ ಪುಣೆಯಲ್ಲಿ … Continued

ನೂಪುರ್ ಶರ್ಮಾ ಹತ್ಯೆಗೆ ಜೆಇಎಂ ಭಯೋತ್ಪಾದಕ ಸಂಘಟನೆಯಿಂದ ನಿಯೋಜಿಸಿದ್ದ ಉಗ್ರನ ಬಂಧನ

ಲಕ್ನೋ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶುಕ್ರವಾರ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ತೆಹ್ರಿಖ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ)-ಸಂಬಂಧಿತ ಭಯೋತ್ಪಾದಕ ಮುಹಮ್ಮದ್ ನದೀಮ್‌ನನ್ನು ಸಹರಾನ್‌ಪುರದಿಂದ ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೆಇಎಂ ಮತ್ತು ಟಿಟಿಪಿಯೊಂದಿಗೆ ನದೀಮ್ ನೇರ ಸಂಪರ್ಕ ಹೊಂದಿದ್ದ. ನೂಪುರ್ ಶರ್ಮಾ ಅವರನ್ನು ಕೊಲ್ಲುವ ಕೆಲಸವನ್ನು … Continued

ಹಿರೆನ್ ಸಾವಿನ ಪ್ರಕರಣ: ತಕ್ಷಣವೇ ಎನ್‌ಐಎಗೆ ಎಲ್ಲ ದಾಖಲೆಗಳ ಹಸ್ತಾಂತರಕ್ಕೆ ಎಟಿಎಸ್‌ಗೆ ಆದೇಶಿಸಿದ ಮುಂಬೈ ಕೋರ್ಟ್‌

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಮನ್ಸುಖ್ ಹಿರೆನ್ ಸಾವಿನ ಪ್ರಕರಣದ ಎಲ್ಲಾ ದಾಖಲೆಗಳು ಮತ್ತು ಪತ್ರಿಕೆಗಳನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಹಸ್ತಾಂತರಿಸುವಂತೆ ಥಾಣೆ ನ್ಯಾಯಾಲಯವು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್‌) ಆದೇಶಿಸಿದೆ. ಮುಖೇಶ್ ಅಂಬಾನಿಯ ಮನೆಯ ಆಂಟಿಲಿಯಾದ ಹೊರಗೆ ಸ್ಫೋಟಕ ತುಂಬಿ ನಿಲ್ಲಿಸಿದ ಎಸ್ಯುವಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿರುವ ಸಾವಿನ ಪ್ರಕರಣದ … Continued