
ಮಂಡ್ಯ: ಸಮಯಪ್ರಜ್ಞೆಯಿಂದ ಸರ್ಪನ ಕಡಿತದಿಂದ ತನ್ನ ಪುಟ್ಟ ಮಗನನ್ನು ಕಾಪಾಡುವಲ್ಲಿ ತಾಯಿ ಯಶಸ್ವಿಯಾಗಿದ್ದಾಳೆ. ಎದೆ ಝಲ್ಲೆನಿಸುವ ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ, ತಾಯಿ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ತಮ್ಮ ಮನೆಯಿಂದ ತಾಯಿ ಮಗ ಹೊರಬರುವ ವೇಳೆ ಈ ಘಟನೆ ನಡೆದಿದೆ. ತಾಯಿ-ಮಗ ಮನೆಯಿಂದ ಹೊರಬರುವ ವೇಳೆ ಮನೆ ಮುಂಭಾಗದ ಮೆಟ್ಟಿಲು ಕೆಳಗಡೆಯೇ ಬರುತ್ತಿದ್ದ ಇದ್ದ ಬೃಹತ್ ಸರ್ಪದ ಬಳಿ ಹೆಜ್ಜೆ ಬಾಲಕ ಅದು ಕೆಳಗಡೆಯಿದೆ ಎಂದು ಗೊತ್ತಿಲ್ಲದೆ ಕಾಲಿಟ್ಟಿದ್ದಾನೆ. ಮಗು ತನ್ನ ಪಾದದ ಕೆಳಗೆ ಇದ್ದ ನಾಗರ ಹಾವಿನ ತಲೆಯ ಮೇಲೆ ಬಹುತೇಕ ಹೆಜ್ಜೆ ಇಟ್ಟಿದ್ದ. ಅದನ್ನು ಗಮನಿಸಿದ ಹಾವು ಹಿಂದೆ ಸರಿದಿದೆ.

ನಂತರ ಕೋಪದಿಂದ ಬಾಲಕನಿಗೆ ಕಡಿಯಲು ಹೆಡೆ ಬಿಚ್ಚಿದೆ. ಇನ್ನೇನು ಕಡಿಯುತ್ತದೆ ಎಂಬಷ್ಟರಲ್ಲಿ ಇದನ್ನು ನೋಡ ಧಾವಿಸಿ ಬಂದ ತಾಯಿ ಚೀರುತ್ತ ಓಡುಬಂದು ಮಗುವನ್ನು ತಕ್ಷಣವೇ ತನ್ನ ತೋಳಿನಲ್ಲಿ ಮಗುವನ್ನು ಎಳೆದುಕೊಂಡು ಕೂದೆಲೆಳೆಯ ಅಂತರದಲ್ಲಿ ಹಾವಿನ ಕಡಿತದಿಂದ ಪಾರು ಮಾಡಿದ್ದಾಳೆ. ಈ ಘಟನೆ ನಡೆದಿದ್ದು ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಮನೆಯಲ್ಲಿ ಎಂದು ಹೇಳಲಾಗಿದೆ.
ಘಟನೆಯಿಂದ ನಮಗೆಲ್ಲ ಭಯವಾಗಿತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗಲಿಲ್ಲ. ನನ್ನ ಪತ್ನಿ ಪ್ರಿಯಾ ನನ್ನ ಮಗನನ್ನ ಕಾಪಾಡಿದ್ದಾರೆ. ಘಟನೆಯಿಂದ ನನ್ನ ಪತ್ನಿಗೆ ತುಂಬ ಭಯವಾಗಿತ್ತು. ದೇವರ ದಯೆಯಿಂದ ನನ್ನ ಮಗು ಬದುಕಿದೆ. ದೇವರ ಹಾವು ಆಗಿರುವ ಕಾರಣಕ್ಕೆ ಏನು ಮಾಡಿಲ್ಲ ಎಂದು ಮಗು ತಂದೆ ಡಾ.ವಿಷ್ಣು ಪ್ರಸಾದ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ