ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆ: ಕರ್ನಾಟಕದ 18 ಪೊಲೀಸ್​ ಅಧಿಕಾರಿಗಳಿಗೆ ಮೆರಿಟೋರಿಯಸ್​ ಅವಾರ್ಡ್​

posted in: ರಾಜ್ಯ | 0

ನವದೆಹಲಿ: ಪೊಲೀಸ್​ ಇಲಾಖೆಗೆ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರತಿವರ್ಷ ನೀಡಲಾಗುವ ವಿವಿಧ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಬಾರಿ ದೇಶದ ಒಟ್ಟು 1,082 ಪೊಲೀಸ್ ಸಿಬ್ಬಂದಿಯನ್ನು ಸ್ವಾತಂತ್ರ್ಯ ದಿನಾಚರಣೆಯ ಪದಕಗಳಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ 18 ಮಂದಿ ಪೊಲೀಸ್​ ಅಧಿಕಾರಿ ಹಾಗೂ ಪೊಲೀಸ್​ ಸಿಬ್ಬಂದಿಯನ್ನು ಮೆರಿಟೋರಿಸ್​ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಪದಕಗಳಿಗೆ ಆಯ್ಕೆಯಾದ ದೇಶದ 1,082 ಪೊಲೀಸ್ ಸಿಬ್ಬಂದಿ ಪೈಕಿ 347 ಪೊಲೀಸ್​ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದರೆ 87 ಮಂದಿ ರಾಷ್ಟ್ರಪತಿಗಳ ಪದಕಕ್ಕೆ ಅರ್ಹರಾಗಿದ್ದಾರೆ. 648 ಮಂದಿಯ ಸೇವೆಗೆ ಪ್ರಶಂಸನೀಯ ಪ್ರಶಸ್ತಿ ಲಭಿಸಿದೆ. ಕರ್ನಾಟಕದ 18 ಮಂದಿ ಪೊಲೀಸ್​ ಅಧಿಕಾರಿ ಹಾಗೂ ಪೊಲೀಸ್​ ಸಿಬ್ಬಂದಿ ಮೆರಿಟೋರಿಸ್​ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕರ್ನಾಟಕದಿಂದ ಮೆರಿಟೋರಿಸ್​ ಪ್ರಶಸ್ತಿಗೆ ಆಯ್ಕೆಯಾದ ಪೊಲೀಸ್‌ ಅಧಿಕಾರಿಗಳು ಸಿಬ್ಬಂದಿ ಪಟ್ಟಿ
* ನಂಜಪ್ಪ ಶ್ರೀನಿವಾಸ್, ಎಸ್‌ಪಿ, ಪಿಟಿಎಸ್, ಕಡೂರು
* ಪ್ರತಾಪ್ ಸಿಂಗ್ ತೋರಟ್, ಡಿವೈಎಸ್‌ಪಿ, ಮಂಗಳೂರು
* ಟಿಎಂ ಶಿವಕುಮಾರ್, ಡಿವೈಎಸ್‌ಪಿ, ಬೆಂಗಳೂರು
* ಝಕೀರ್ ಇನಾಮ್‌ದಾರ್, ಡಿವೈಎಸ್‌ಪಿ, ಕಲಬುರ್ಗಿ ನಗರ
* ಶ್ರೀನಿವಾಸ್ ರೆಡ್ಡಿ, ಡಿವೈಎಸ್‌ಪಿ, ಸಿಐಡಿ ಅರಣ್ಯ ಘಟಕ, ಬೆಂಗಳೂರು
* ನರಸಿಂಹಮೂರ್ತಿ, ಡಿವೈಎಸ್‌ಪಿ, ಸಿಐಡಿ, ಬೆಂಗಳೂರು
* ಪ್ರಕಾಶ್ ಆರ್, ಡಿವೈಎಸ್‌ಪಿ, ಎಸಿಬಿ, ಬೆಂಗಳೂರು
* ರಾಘವೇಂದ್ರ ರಾವ್ ಶಿಂಧೆ, ಎಸಿಪಿ, ಎಫ್‌ಪಿಬಿ, ಬೆಂಗಳೂರು
* ರಾಜಾ ಚಿಕ್ಕಹನುಮೇಗೌಡ, ಇನ್ಸ್‌ಪೆಕ್ಟರ್, ಮೈಸೂರು ನಗರ
* ಧ್ರುವರಾಜ್ ಪಾಟೀಲ್, ಸಿಪಿಐ, ವಿಜಯಪುರ ರೈಲ್ವೇ ಪೊಲೀಸ್
* ಮೊಹಮ್ಮದ್ ಆಲಿ, ಇನ್ಸ್‌ಪೆಕ್ಟರ್, ಎಸಿಬಿ, ಬೆಂಗಳೂರು
* ರವಿ ಸಣ್ಣೇಗೌಡ, ಸಿಪಿಐ, ಶೃಂಗೇರಿ ಪೊಲೀಸ್ ಠಾಣೆ
* ಮುಫೀದ್ ಖಾನ್, ಇನ್ಸ್‌ಪೆಕ್ಟರ್, ಕೆಎಸ್‌ಆರ್‌ಪಿ
* ಮುರಳಿ ರಾಮಕೃಷ್ಣಪ್ಪ, ವಿಶೇಷ ಎಆರ್‌ಎಸ್‌ಐ (Special​ ARSI) ಬೆಂಗಳೂರು
*ಮಹಾದೇವಯ್ಯ, ಎಆರ್‌ಎಸ್‌ಐ, ಬೆಂಗಳೂರು
*ಧರ್ಮರಾಜ ಬಾಲಕೃಷ್ಣ ಶಿಂಧೆ, ಎಎಸ್​, ಬೆಳಗಾವಿ
*ರಂಜಿತ್​ ಧೆಟ್ಟಿ, ಎಎಸ್​ಐ, ಬೆಂಗಳೂರು
*ಬಸವರಾಜ ಬಿ. ಅಂಡೆಮ್ಮನವರ್​, ವಿಶೇಷ ಎಆರ್‌ಎಸ್‌ಐ (Special​ ARSI), ಬೆಂಗಳೂರು

ಓದಿರಿ :-   ಹೊನ್ನಾವರ ಪರಮೇಶ ಮೇಸ್ತ ಪ್ರಕರಣ: ಹತ್ಯೆಯಲ್ಲ, ಆಕಸ್ಮಿಕ ಸಾವು ; ಸಿಬಿಐ ವರದಿ ಸಲ್ಲಿಕೆ

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement