ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನದ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ಪದ್ಯದ ಸಾಲು ಉಲ್ಲೇಖಿಸಿ ಭಾರತಕ್ಕಾಗಿ ಸಂಪೂರ್ಣ ತ್ಯಾಗ ಮಾಡಲು ಕರೆ ನೀಡಿದ ರಾಷ್ಟ್ರಪತಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಕನ್ನಡದ ಅಪ್ರತಿಮ ಕವಿ ಕುವೆಂಪು ಅವರನ್ನು ಉಲ್ಲೇಖಿಸಿ ದೇಶವನ್ನು ಕಟ್ಟಲು ಉದ್ದೇಶಿಸಿರುವ ಯುವ ಸಮೂಹ ಮಾತೃಭೂಮಿ ಮತ್ತು ಸಹವರ್ತಿ ನಾಗರಿಕರ ಉನ್ನತಿಗಾಗಿ ಸಂಪೂರ್ಣ ತ್ಯಾಗ ಮಾಡುವಂತೆ ಕರೆ ನೀಡಿದ್ದಾರೆ.
ಕನ್ನಡ ಭಾಷೆಯ ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ರಾಷ್ಟ್ರವಾದಿ ಕವಿ ಕುವೆಂಪು ಅವರ
ನಾನು ಅಳಿವೆ, ನೀನು ಅಳಿವೆ
ನಮ್ಮ ಎಲುಬುಗಳ ಮೇಲೆ
ಮೂಡುವುದು ಮೂಡುವುದು
ನವ ಭಾರತದ ಲೀಲೆ
ಎಂದು  ಕುವೆಂಪು ಅವರ ʼನಡೆ ಮುಂದೆ ನಡೆ ಮುಂದೆʼ ಪದ್ಯದ ಈ ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ನಾನು ಹೋಗುತ್ತೇನೆ, ಹಾಗೆಯೇ ನೀನು ಹೋಗುತ್ತೀಯ, ನಮ್ಮ ಎಲುಬಿನ ಮೇಲೆ ಮೂಡಲಿದೆ ಶ್ರೇಷ್ಠ ಹೊಸ ಭಾರತದ ಕಥೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲಿನ ಅರ್ಥವನ್ನು ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ್ದಾರೆ.

ಇದು ಮಾತೃಭೂಮಿ ಮತ್ತು ಸಹ ನಾಗರಿಕರ ಉನ್ನತಿಗಾಗಿ ಸಂಪೂರ್ಣ ತ್ಯಾಗ ಮಾಡುವ ರಾಷ್ಟ್ರೀಯವಾದಿ ಕವಿಯ ಸ್ಪಷ್ಟ ಕರೆಯಾಗಿದೆ ಎಂದು ಅವರು ಹೇಳಿದರು. “ಈ ಆದರ್ಶಗಳನ್ನು ಅನುಸರಿಸಲು 2047 ರ ಭಾರತವನ್ನು ನಿರ್ಮಿಸಲು ಹೊರಟಿರುವ ದೇಶದ ಯುವಕರಿಗೆ ನನ್ನ ವಿಶೇಷ ಮನವಿಯಾಗಿದೆ ಎಂದು ಹೇಳಿದರು.
ಜನಪ್ರಿಯವಾಗಿ ಕುವೆಂಪು ಎಂದು ಕರೆಯಲ್ಪಡುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು 1994 ರಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು ಮತ್ತು 20ನೇ ಶತಮಾನದ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಪದ್ಮವಿಭೂಷಣ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ನಾಟಕಕಾರರಾಗಿ, ಕಾದಂಬರಿಕಾರರಾಗಿ ಮತ್ತು ವಿಮರ್ಶಕರಾಗಿ ಅವರು ಖ್ಯಾತರಾಗಿದ್ದಾರೆ. ಕರ್ನಾಟಕ ಸರ್ಕಾರವು 1964 ರಲ್ಲಿ ಅವರಿಗೆ ‘ರಾಷ್ಟ್ರಕವಿ’ (ರಾಷ್ಟ್ರಕವಿ) ಬಿರುದು ನೀಡಿ ಗೌರವಿಸಿತು.

ಇಂದಿನ ಪ್ರಮುಖ ಸುದ್ದಿ :-   ಶಿವಮೊಗ್ಗ ಕಲ್ಲು ತೂರಾಟದ ಘಟನೆ: 24 ಎಫ್‌ಐಆರ್‌ ದಾಖಲು, 60 ಮಂದಿ ಅರೆಸ್ಟ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement