ಗುಜರಾತ್‌ನಲ್ಲಿ ₹ 1,026 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಮುಂಬೈ ಪೊಲೀಸರು…!

ಮುಂಬೈ: ಮುಂಬೈ ಪೊಲೀಸರ ಎಂಟಿ ನಾರ್ಕೋಟಿಕ್ ಸೆಲ್ ಗುಜರಾತ್‌ನಲ್ಲಿ ನಡೆಸಿದ ದಾಳಿಯಲ್ಲಿ ₹ 1,026 ಕೋಟಿ ಮೌಲ್ಯದ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ.
ಮುಂಬೈ ಪೊಲೀಸರ ಎಂಟಿ ನಾರ್ಕೋಟಿಕ್ ಸೆಲ್ (ANC) ಖಚಿತ ಮಾಹಿತಿ ಮೇಲೆ ಗುಜರಾತ್‌ನಲ್ಲಿ ಮೆಫೆಡ್ರೋನ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 1,026 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಇಲ್ಲಿ ತಿಳಿಸಿದ್ದಾರೆ.
“ರಸಾಯನಶಾಸ್ತ್ರದಲ್ಲಿ ಪದವಿ ಪಡೆದವರನ್ನೂ ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಇದು ಇತ್ತೀಚಿನ ದಿನಗಳಲ್ಲಿ ಮುಂಬೈ ಪೊಲೀಸರಿಂದ ಅತಿದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಂಡ ಕಾರ್ಯಾಚರಣೆಯಾಗಿದೆ ಎಂದು ಪೊಲೀಸ್ ಉಪ ಕಮಿಷನರ್ (ANC) ದತ್ತಾ ನಲವಾಡೆ ಹೇಳಿದರು.

ಸುಳಿವಿನ ಮೇರೆಗೆ ಮುಂಬೈನ ಎಂಟಿ ನಾರ್ಕೋಟಿಕ್ ಸೆಲ್ ವರ್ಲಿ ಶಾಖೆಯು ಆಗಸ್ಟ್ 13 ರಂದು ಗುಜರಾತ್‌ನ ಅಂಕಲೇಶ್ವರದಲ್ಲಿರುವ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿತು ಮತ್ತು 513 ಕೆಜಿ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳುವಾಗ ಅದರ ಮಾಲೀಕ ಗಿರಿರಾಜ್ ದೀಕ್ಷಿತ್ ಅವರನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.
ದಾಳಿಯ ವೇಳೆ ರೇಷ್ಮಾ ಸಂಜಯ್‌ಕುಮಾರ್ ಚಂದನ್ (49), ರಿಯಾಜ್ ಅಬ್ದುಲ್ ಸತ್ತಾರ್ ಮೆನನ್ (43), ದಾಳಿಯ ಸಂದರ್ಭದಲ್ಲಿ ಪ್ರೇಮ್ ಪ್ರಕಾಶ್ ಪಾರಸನಾಥ ಸಿಂಗ್ (52) ಮತ್ತು ಕಿರಣ್ ಪವಾರ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು
ವಿಚಾರಣೆ ವೇಳೆ ಮುಂಬೈ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ಡ್ರಗ್ ಪೆಡ್ಲರ್‌ಗಳಿಗೆ, ದೀಕ್ಷಿತ್ ಮತ್ತು ಸಹ-ಆರೋಪಿಗಳು ಮೆಫೆಡ್ರೋನ್ ಪೂರೈಸುತ್ತಿದ್ದರು ಹಾಗೂ ಇದರ ಉತ್ಪಾದಿಸುವ ಸೂತ್ರವನ್ನು ಅವರು ಪರಿಪೂರ್ಣಗೊಳಿಸಿಕೊಂಡಿದ್ದರು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

ಎಎನ್‌ಸಿ ವರ್ಲಿ ತಂಡವು ಈ ವರ್ಷದ ಮಾರ್ಚ್‌ನಲ್ಲಿ ಪೂರ್ವ ಮುಂಬೈನ ಗೋವಂಡಿ ಪ್ರದೇಶದಲ್ಲಿ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ ಆತನಿಂದ 250 ಗ್ರಾಂ ಮಾದಕವಸ್ತುವನ್ನು ವಶಪಡಿಸಿಕೊಂಡ ನಂತರ ಈ ದಂಧೆಯ ಜಾಲ ಬೆಳಕಿಗೆ ಬಂತು. ಇದು ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲು ಕಾರಣವಾಯಿತು. ಮತ್ತು 2.7 ಕೆಜಿ ಮೆಫೆಡ್ರೋನ್ ವಶಪಡಿಸಿಕೊಳ್ಳಲಾಯಿತು. ಎಎನ್‌ಸಿ ನಂತರ ಮತ್ತೊಬ್ಬ ಆರೋಪಿಯನ್ನು ಬಂಧಿಸಿತು, ನಂತರ ಕೆಲದಿನಗಳ ಹಿಂದೆ ನಾರ್ಕೋಟಿಕ್ ಸೆಲ್ ಮುಂಬೈ ಸಮೀಪದ ಪಾಲ್ಘರ್ ಜಿಲ್ಲೆಯ ನಲಸೊಪಾರಾದಲ್ಲಿ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿ 1,400 ಕೋಟಿ ರೂಪಾಯಿ ಮೌಲ್ಯದ 700 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್, ನಿಷೇಧಿತ ಸಿಂಥೆಟಿಕ್ ಡ್ರಗ್ ಅನ್ನು ವಶಪಡಿಸಿಕೊಂಡಿತ್ತು. “ಈ ಪ್ರಕರಣದಲ್ಲಿ ನಾವು ಈಗ ಏಳನೇ ಬಂಧನವನ್ನು ಮಾಡಿದ್ದೇವೆ” ಎಂದು ಡಿಸಿಪಿ ನಲವಾಡೆ ಹೇಳಿದರು. ಆರೋಪಿಗಳು ಮಾದಕದ್ರವ್ಯವನ್ನು ಮಾರಾಟ ಮಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಕರೆ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಮಿಯಾಂವ್ ಮಿಯಾವ್” ಅಥವಾ MD ಎಂದೂ ಕರೆಯಲ್ಪಡುವ ಮೆಫೆಡ್ರೋನ್, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (NDPS) ಕಾಯಿದೆಯಡಿಯಲ್ಲಿ ನಿಷೇಧಿಸಲಾದ ಸಿಂಥೆಟಿಕ್ ಸೈಕೋಟ್ರೋಪಿಕ್ ಉತ್ತೇಜಕವಾಗಿದೆ

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement