ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಕ್ಷಿಣ ರನ್ ವೇ ಸೂಪರ್ ಜಂಬೋ ವಿಮಾನ ಸ್ವೀಕರಿಸಲು ಸಜ್ಜಾಗಿದೆ. ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ, ಅಕ್ಟೋಬರ್ 30 ರಿಂದ ಪ್ರತಿನಿತ್ಯ ಬೆಂಗಳೂರಿನಿಂದ ದುಬೈಗೆ ಸೇವೆ ನೀಡಲಾಗುತ್ತದೆ ಎಂದು ತಿಳಿಸಿದೆ.
ಎಮಿರೇಟ್ಸ್ ಸಂಸ್ಥೆಯ ಏರ್ಬಸ್ ಎ380 ವಿಮಾನ ಲ್ಯಾಂಡ್ ಆಗುವ ಎರಡನೇ ನಿಲ್ದಾಣ ಬೆಂಗಳೂರು ಆಗಲಿದೆ. ಈ ಮೊದಲು 2014ರಲ್ಲಿ ಎಮಿರೇಟ್ಸ್ ಸಂಸ್ಥೆ ಮುಂಬೈನಿಂದ ದುಬೈಗೆ ಈ ಸೇವೆ ನೀಡಿತ್ತು.
ಇದು ಶಕ್ತಿಯುತ ಇಂಜಜಿನ್ಗಳನ್ನು ಹೊಂದಿರುವ ಬೃಹತ್ ವಿಮಾನವಾಗಿದೆ ಮತ್ತು ಹಾಗೂ ಇದಕ್ಕೆ ವಿಶೇಷ ವ್ಯವಸ್ಥೆಗಳ ಅಗತ್ಯವಿದೆ” ಎಂದು ಕೆಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದುಬೈ-ಬೆಂಗಳೂರು-ದುಬೈ ಸೆಕ್ಟರ್ನಲ್ಲಿ ಎಮಿರೇಟ್ಸ್ ಫ್ಲೈಟ್ ಸಂಖ್ಯೆಗಳಾದ EK568 ಮತ್ತು 569 ಆಗಿ A380 ಕಾರ್ಯನಿರ್ವಹಿಸುತ್ತದೆ, ವ್ಯಾಪಾರ ಮತ್ತು ಪ್ರಥಮ ದರ್ಜೆಯಲ್ಲಿ ಪ್ರೀಮಿಯಂ ಕ್ಯಾಬಿನ್ಗಳ ಜೊತೆಗೆ ಎಕಾನಮಿ ಕ್ಲಾಸ್ ಸೀಟುಗಳನ್ನು ನೀಡುತ್ತದೆ. ಖಾಸಗಿ ಸೂಟ್ಗಳು ಮತ್ತು ಪ್ರಥಮ ದರ್ಜೆಯಲ್ಲಿ ಶವರ್ ಸ್ಪಾಗಳನ್ನು ಹೊರತುಪಡಿಸಿ ವಿಶೇಷ ಆನ್ಬೋರ್ಡ್ ವೈಶಿಷ್ಟ್ಯಗಳೊಂದಿಗೆ ಹೆಚ್ಚುವರಿ ಲೆಗ್ರೂಮ್ ಮತ್ತು ಪ್ರೀಮಿಯಂ ಕ್ಯಾಬಿನ್ಗಳನ್ನು ಈ ವಿಮಾನವು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟು 72.75 ಮೀಟರ್ ಉದ್ದ, 24.45 ಮೀಟರ್ ಎತ್ತರ ಹೊಂದಿರುವ ಈ ವಿಮಾನದಲ್ಲಿ ಒಂದು ಬಾರಿ ಗರಿಷ್ಠ 853 ಮಂದಿ ಪ್ರಯಾಣಿಸಬಹುದು. ಆದರೆ ಇಲ್ಲಿಯವರೆಗೂ ಯಾವ ಕಂಪನಿಯ ವಿಮಾನಗಳು ಈ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತೊಯ್ದಿಲ್ಲ. ಒಂದು ಬಾರಿಗೆ 3 ಸಾವಿರ ಸೂಟ್ಕೇಸ್ಗಳನ್ನು ತೆಗದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. 2003 ರಲ್ಲಿ ಏರ್ಬಸ್ ಕಂಪನಿ ಈ ವಿಮಾನವನ್ನು ನಿರ್ಮಾಣ ಮಾಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ